ನವದೆಹಲಿ: ಅ.5ರಿಂದ ಆರಂಭವಾಗಲಿರುವ ICC ಏಕದಿನ ವಿಶ್ವಕಪ್ಗೆ ಟೀಂ ಇಂಡಿಯಾ ಪ್ರಕಟಗೊಂಡಿದೆ. ಕನ್ನಡಿಗ ಕೆ.ಎಲ್.ರಾಹುಲ್ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಈ ತಂಡದಲ್ಲಿ 5 ಸ್ಪೆಷಲಿಸ್ಟ್ ಬ್ಯಾಟರ್ಗಳು (ರೋಹಿತ್- ನಾಯಕ, ಶುಭ್ಮನ್, ವಿರಾಟ್, ಶ್ರೇಯಸ್, ಸೂರ್ಯ), 2 ವಿಕೆಟ್ ಕೀಪರ್ಗಳು (ಕಿಶನ್, ರಾಹುಲ್), 4 ಆಲ್ರೌಂಡರ್ಗಳು (ಹಾರ್ದಿಕ್ -ಉಪ ನಾಯಕ,, ಜಡೇಜಾ, ಅಕ್ಸರ್, ಶಾರ್ದೂಲ್), 4 ಬೌಲರ್ಗಳು (ಶಮಿ, ಸಿರಾಜ್, ಬುಮ್ರಾ, ಕುಲ್ದೀಪ್) ಸ್ಥಾನ ಪಡೆದಿದ್ದಾರೆ. ಮೇಲ್ನೋಟಕ್ಕೆ ಭಾರತದ ಪಿಚ್ಗಳಿಗೆ ಹೊಂದಿಕೊಳ್ಳುವ ತಂಡ ಇದಾಗಿದೆ ಎಂದು ವಿಶ್ಲೇಷಣೆಯಾಗುತ್ತಿದೆ.
ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಹಾಗೂ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. ಏಷ್ಯಾಕಪ್ನಲ್ಲಿ ತಂಡದಲ್ಲಿ ಮೀಸಲು ಆಟಗಾರನಾಗಿ ಸ್ಥಾನ ಪಡೆದಿದ್ದ ಸ್ಯಾಮ್ಸನ್, ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ವಿಶ್ವಾಸದಲ್ಲಿದ್ದರು.