ಚಿತ್ರದುರ್ಗ : ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಎನ್ನುವುದು ಆಲದ ಮರ ಇದ್ದಂತೆ ಇದರ ನೆರಳಲ್ಲಿ ನಮ್ಮ ಸಮುದಾಯದ ಒಳ ಪಂಗಡಗಳು ಇವೆ, ಮಹಾಸಭಾ ಏನಾದರೂ ಕರೆಯನ್ನು ನೀಡಿದರೆ ಅಗ ಎಲ್ಲಾ ಒಳ ಪಂಗಡದವರು ಸೇರಿ ನಮ್ಮ ಒಗ್ಗಟನ್ನು ಪ್ರದರ್ಶನ ಮಾಡಬೇಕಿದೆ ಇಲ್ಲಿ ನಮ್ಮ ಒಳ ಪಂಗಡದ ಜೊತೆಗೆ ಮಹಾಸಭಾ ಮುಖ್ಯವಾಗಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್ ತಿಳಿಸಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಚಿತ್ರದುರ್ಗ ತಾಲ್ಲೂಕು ಘಟಕದವತಿಯಿಂದ ಭಾನುವಾರ ನಗರÀದ ಜಗಳೂರು ಮಹಾಲಿಂಗಪ್ಪ ಕಂಫಟ್ಸ್ನಲ್ಲಿ ಹಮ್ಮಿಕೊಂಡಿದ್ದ ವೀರಶೈವ ಲಿಂಗಾಯತ ಸಮಾವೇಶ, ಸೇವಾ ದೀಕ್ಷಾ ಕಾರ್ಯಕ್ರಮ, ಸದಸ್ಯತ್ವ ಅಭಿಯಾನ ಹಾಗೂ ಶಾಮನೂರು ಶಿವಶಂಕರಪ್ಪರವರಿಗೆ ಶ್ರದ್ದಾಂಜಲಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮ ಸಮುದಾಯದಲ್ಲಿನ ಒಳ ಪಂಗಡದವರು ತಮ್ಮ ಕಾರ್ಯಕ್ರಮಗಳನ್ನು ತುಂಬಾ ಚನ್ನಾಗಿ ಮಾಡುತ್ತಾರೆ ಆದರೆ ಬಸವಣ್ಣನವರ ಜಯಂತಿ, ಅಕ್ಕ ಮಹಾದೇವಿ ಜಯಂತಿ ಹೇಮ ರೆಡ್ಡಿ ಮಲ್ಲಮ್ಮ ಜಯಂತಿಯನ್ನು ಮಾಡೋಣ ಬನ್ನಿ ಎಂದರೆ ಬರುವವರ ಸಂಖ್ಯೆ ಕಡಿಮೆ ಇದೆ, ನಮ್ಮ ಒಳ ಪಂಗಡಗಳ ಕಾರ್ಯಕ್ರಮಗಳು ಮಾಡುವುದು ತಪ್ಪಲ್ಲ ಆದರೆ ಮಹಾ ಸಭಾ ಏನಾದರೂ ಕರೆಯನ್ನು ನೀಡಿದರೆ ಅದಕ್ಕೂ ಸಹಾ ಸ್ಫಂದನೆಯನ್ನು ಮಾಡಬೇಕಿದೆ, ಇದು ಎಲ್ಲರ ಜವಾಬ್ದಾರಿಯಾಗಿದೆ. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಎನ್ನುವುದು ಆಲದ ಮರ ಇದ್ದಂತೆ ಇದರ ನೆರಳಲ್ಲಿ ನಮ್ಮ ಸಮುದಾಯದ ಒಳ ಪಂಗಡಗಳು ಇವೆ ಎನ್ನುವುದನ್ನು ಮರೆಯಬಾರದು, ಸರ್ಕಾದ ಏನಾದರೂ ಸೌಲಭ್ಯವನ್ನು ಪಡೆಯಬೇಕಾದರೆ ಸಂಘಟನೆ, ಒಗ್ಗಟು ಅಗತ್ಯವಾಗಿದೆ ಒಬ್ಬರಾಗಿ ಹೋದರೆ ಏನು ಸಿಗುವುದಿಲ್ಲ ಇದರ ಬದಲು ಒಗ್ಗಟಾಗಿ ಹೋದಾಗ ಮಾತ್ರ ಏನನ್ನದಾರೂ ಸಾಧನೆ ಮಾಡಲು ಸಾಧ್ಯವಿದೆ ಎಂದರು.
ಇತ್ತೀಚಿನ ದಿನಮಾನದಲ್ಲಿ ನಮ್ಮ ಸಮುದಾಯದಲ್ಲಿಯೂ ಸಹಾ ಒಡಕನ್ನು ಮೂಡಿಸುವ ಕಾರ್ಯವನ್ನು ಕೆಲವರು ಮಾಡುತ್ತಿದ್ದಾರೆ ಇದರ ಬಗ್ಗೆ ಎಚ್ಚರದಿಂದ ಇರಬೇಕಿದೆ. ಬೇರೆಯವರ ಮಾತನ್ನು ಕೇಳುವುದಕ್ಕೂ ಮುನ್ನಾ ಮಹಾಸಭಾವನ್ನು ಸಂಪರ್ಕ ಮಾಡಿ ಮಾತನಾಡುವುದು ಒಳ್ಳೆಯದು ಎಂದ ಅವರು, ನಮ್ಮಲ್ಲಿನ ಮಠಗಳು ಹಿಂದಿನ ಕಾಲದಿಂದಲೇ ಎಲ್ಲಾ ಜನಾತಿಯವರಿಗೂ ಸಹಾ ಶಿಕ್ಷಣ ಪ್ರಸಾದವನ್ನು ನೀಡಿದ್ದಾರೆ ಇಲ್ಲಿ ಜಾತಿಯನ್ನು ನೋಡಿಲ್ಲ, ಹಾಗೇ ನೋಡಿದ್ದರೆ ಬೇರೆ ಜಾತಿಯವರು ಶಿಕ್ಷಣವನ್ನು ಪಡೆಯಲು ಸಾಧ್ಯವಾಗುತ್ತಿರಲಿಲ್ಲ ಸಮಾಜ ನಮಗೆ ಏನು ನೀಡಿತು ಎನ್ನುವ ಬದಲು ಸಮಾಜಕ್ಕೆ ನಾನು ಏನುಕೊಟ್ಟೆ ಎಂದು ಪ್ರಶ್ನೆಯನ್ನು ನಾವು ಮಾಡಿಕೊಳ್ಳಬೇಕಿದೆ ಇಂದಿನ ದಿನಮಾನದಲ್ಲಿ ಸಮಾಜದಿಂದ ಎಲ್ಲಾ ಸೌಲಭ್ಯ ಸಹಾಯವನ್ನು ಪಡೆದು ಉನ್ನತ ಸ್ಥಾನವನ್ನು ಪಡೆದ ನಂತರ ಸಮಾಜವನ್ನು ಮರೆಯುತ್ತಿದ್ದಾರೆ ಎಂದು ನವೀನ್ ವಿಷಾಧಿಸಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿರೇಣುಕಾ ಪ್ರಸನ್ನ ಮಾತನಾಡಿ, ಶಾಮನೂರು ಶಿವಶಂಕರಪ್ಪ ರವರು ರಾಷ್ಟ್ರೀಯ ಅಧ್ಯಕ್ಷರಾಗಿ ಉತ್ತಮವಾದ ಕೆಲಸವನ್ನು ಮಾಡಿದ್ದಾರೆ ರಾಜ್ಯದ ಎಲ್ಲಾ ಲಿಂಗಾಯತ ಸಮುದಾಯಕ್ಕೆ ತಮ್ಮ ಕೈಲಾದ ಸಹಾಯವನ್ನು ಮಾಡುವುದರ ಮೂಲಕ ಸಮುದಾಯವನ್ನು ಮುನ್ನೆಡೆಸಿದ್ದಾರೆ. ಇಂದಿನ ದಿನದಲ್ಲಿ ಸೇವಾ ದೀಕ್ಷೆಯನ್ನು ಪಡೆಯುತ್ತಿರುವ ನೀವುಗಳು ಸಂಯಮ ಮತ್ತು ಸಮಾದಾನವನ್ನು ಕಲಿಯಬೇಕಿದೆ ಇಲ್ಲವಾದಲ್ಲಿ ಸಮಾಜದಲ್ಲಿ ಮುಂದೆ ಹೇಗೇ ನಡೆಯಲಾಗುತ್ತದೆ ಎಂಬುದು ಪ್ರಶ್ನೆಯಾಗಿದೆ.ಇಲ್ಲಿ ಸೇವಾ ಮನೋಭಾವನೆಯಿಂದ ಬಂದವರು ಸಂಖ್ಯೆ ಕಡಿಮೆ ವಿವಿಧ ಅಸೆ, ಆಕಾಂಕ್ಷೆಗಳಿಂದ ಬಂದವರ ಸಂಖ್ಯೆ ಹೆಚ್ಚಾಗಿದೆ, ಮುಂದಿನ ದಿನದಲ್ಲಿ ಸಂಘಟನೆಗೆ ಒತ್ತನ್ನು ನೀಡಬೇಕಿದೆ, ಇಲ್ಲವಾದಲ್ಲಿ ಸಮಾಜದಲ್ಲಿ ಕಷ್ಟದ ದಿನಗಳು ಬರಬಹುದು, ಶಾಮನೂರು ಶಿವಶಂಕರಪ್ಪರವರಂತಹ ಅಧ್ಯಕ್ಷರು ಮುಂದಿನ ದಿನದಲ್ಲಿ ಸಿಗುವುದು ಕಷ್ಟವಾಗುತ್ತದೆ. ಅವರು ಇದ್ದ ಕಾಲದಲ್ಲಿ ಸಮಾಜಕ್ಕೆ ಏನೇ ಅನ್ಯಾಯವಾದರೂ ಸಹಾ ಅದನ್ನು ಪ್ರತಿಭಟಿಸುತ್ತಿದ್ದರು ಇದ್ದಲ್ಲದೆ ಸಮಾಜದ ಬೆಳವಣಿಗೆಯಲ್ಲಿ ಸಹಾಯವನ್ನು ಮಾಡುತ್ತಿದ್ದರು. ಇದನ್ನು ನಾವುಗಳು ಇಂದು ನೆನೆÀಯಬೇಕಿದೆ ಎಂದರು.
ಇಂದಿನ ದಿನದಲ್ಲಿ ಸಮಾಜ ಕವಲು ದಾರಿಯಲ್ಲಿದೆ ಇದನ್ನು ಅರ್ಥ ಮಾಡಿಕೊಂಡು ಸೇವಾ ದೀಕ್ಷೆಯನ್ನು ಪಡೆದವರು ನಮ್ಮ ಸಮಾಜವನ್ನು ಸರಿಯಾದ ದಾರಿಯಲ್ಲಿ ತೆಗೆದುಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ. ಇಲ್ಲಿ ಗಣ್ಯರು ಮಾತನ್ನು ಬೇರೆಯವರಿಗೆ ತಿಳಿಸುವ ಕಾರ್ಯವನ್ನು ಮಾಡಬೇಕಿದೆ. ಸೇವಾ ದೀಕ್ಷೆಯನ್ನು ಪಡೆದವರು ಮಹಾಸಭಾ ನಿಯಮಗಳು, ನಿಲುವುಗಳು, ನೀತಿಗಳು ನಿಭಂಧನೆಗಳು ಏನು ಇದ್ದಾವೆ ಎಂಬುದನ್ನು ಅರ್ಥ ಮಾಡಿಕೊಂಡು ನಡೆಯಬೇಕಿದೆ ಎಂದರು.
ಚಿತ್ರದುರ್ಗ ತಾಲ್ಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷರಾಧ ಸಿದ್ದಪ್ಪ ಪ್ರಸ್ತಾವಿಕವಾಗಿ ಮಾತನಾಡಿ ಚಿತ್ರದುರ್ಗ ತಾಲ್ಲೂಕಿನಲ್ಲಿ ಮಹಾ ಸಭಾವನ್ನು ಉತ್ತಮವಾಗಿ ಬೆಳಸಲು ಎಲ್ಲರ ಸಹಾಯ ಸಹಕಾರ ಅಗತ್ಯವಾಗಿದೆ ಈಗಾಗಲೇ ಮಹಾಸಭಾಕ್ಕೆ ನಿವೇಶವನ್ನು ಖರೀದಿ ಮಾಡಲಾಗಿದೆ ಮುಂದಿನಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ಮುಂದಾಗಲಿದೆ ಎಂದರು
ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯ ಉಪಾಧ್ಯಕ್ಷರಾದ ಶ್ರೀನಿವಾಸ್ ರೆಡ್ಡಿ, ವಾಣೀಜ್ಯ ಮತ್ತು ಕೈಗಾರಿಕಾ ಘಟಕದ ರಾಷ್ಟ್ರೀಯ ಅಧ್ಯಕ್ಷರಾದ ಉಮೇಶ್ ಪಾಟೀಲ್, ರಾಜ್ಯ ಕಾರ್ಯ ನಿರ್ವಹಕ ಸಮಿತಿಯ ಸದಸ್ಯರಾದ ಜಿ. ಎಸ್. ಮಂಜುನಾಥ್, ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶೀ ಹನುಮಲಿ ಷಣ್ಮುಖಪ್ಪ, ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ನಿರ್ದೆಶಕರಾದ ಎಸ್.ಆರ್.ಗೀರಿಶ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷರಾದ ಮಹಡಿ ಶಿವಮೂರ್ತಿ, ರಾಜ್ಯ ಕಾರ್ಯಕಾರಿಣಿ ನಿರ್ದೇಶಕರಾದ ಆರತಿ, ವೀರಶೈವ ಸಮಾಜದ ಅಧ್ಯಕ್ಷರಾದ ಹೆಚ್.ಎಂ.ತಿಪ್ಪೇಸ್ವಾಮಿ ಜಿ.ಎಸ್.ಅನಿತ್ ಕುಮಾರ್, ಶರಣ ಸಾಹಿತ್ಯ ಪರಿಷತ್ನ ಅಧ್ಯಕ್ಷರಾದ ಕೆ.ಎಂ. ವಿರೇಶ್, ರಾಜ್ಯ ಮಹಿಳಾ ಘಟಕದ ನಿರ್ದೆಶಕರಾದ ಶಶಿಕಲಾ ರವಿಶಂಕರ್, ಚಿತ್ರದುರ್ಗ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಮಂಜುಳಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಶಿಧರ್ ಬಾಬು, ವೀರಶೈವ ಕೊ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷರಾದ ಶಿವಕುಮಾರ್ ಪಟೇಲ್, ನೌಕರರ ಸಂಘದ ನಿರ್ದೆಶಕರಾದ ನಾಗರಾಜ್ ಸಂಗಂ, ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷರಾದ ರಾಜೇಶ್ ಸೇರಿದಂತೆ ಚಿತ್ರದುರ್ಗ ಜಿಲ್ಲೆಯ ವಿವಿಧ ತಾಲ್ಲೂಕು ಘಟಕಗಳ ಅಧ್ಯಕ್ಷರು ಭಾಗವಹಿಸಿದ್ದರು.

































