ವೈಜ್ಞಾನಿಕ ಮಾಹಿತಿ ಸಂಗ್ರಹಿಸಲು ಆರಂಭಿಸಿದ ಆದಿತ್ಯ-L1

ನವದೆಹಲಿ: ಸೂರ್ಯನ ಮೇಲ್ಮೈ ಅಧ್ಯಯನಕ್ಕಾಗಿ ಭಾರತವು ಕೈಗೊಂಡಿರುವ ಆದಿತ್ಯ ಎಲ್‍ 1 ಮಿಷನ್ ವೈಜ್ಞಾನಿಕ ಮಾಹಿತಿ ಸಂಗ್ರಹಿಸಲು ಆರಂಭಿಸಿದೆ ಎಂದು ಇಸ್ರೋ ಪ್ರಕಟಿಸಿದೆ.

STEPS ಉಪಕರಣದ ಸಂವೇದಕಗಳು ಭೂಮಿಯಿಂದ 50,000km ಗಿಂತ ಹೆಚ್ಚಿನ ದೂರದಲ್ಲಿ ಸೂಪರ್-ಥರ್ಮಲ್ ಮತ್ತು ಶಕ್ತಿಯುತ ಅಯಾನುಗಳು ಮತ್ತು ಎಲೆಕ್ಟ್ರಾನ್‌ಗಳನ್ನು ಅಳೆಯಲು ಪ್ರಾರಂಭಿಸಿವೆ. ಈ ಡೇಟಾವು ವಿಜ್ಞಾನಿಗಳಿಗೆ ಭೂಮಿಯ ಸುತ್ತಲಿನ ಕಣಗಳ ನಡವಳಿಕೆಯನ್ನು ವಿಶ್ಲೇಷಿಸಲು ಸಹಾಯ ಮಾಡುತ್ತದೆ ”ಎಂದು ಇಸ್ರೋ ಸೋಮವಾರ ಹೇಳಿದೆ.

ಸೋಮವಾರ ಮಧ್ಯ ರಾತ್ರಿ ಆದಿತ್ಯ ಎಲ್1, ಟ್ರಾನ್ಸ್-ಲ್ಯಾಗ್ರೇಂಜ್‌ ಪಾಯಿಂಟ್‌ 1 ಇನ್‍ಸರ್ಷನ್‍ಪ್ರಕ್ರಿಯೆಯನ್ನು ಪೂರ್ಣಗೊಳಿಸಲಿದೆ. ಆದಿತ್ಯ ಎಲ್ 1 ಮಿಷನ್ ಅನ್ನು ಸೆಪ್ಟೆಂಬರ್ 2ರಂದು ಲಾಂಚ್ ಮಾಡಲಾಗಿತ್ತು. ಆದಿತ್ಯ ಎಲ್ 1 ಮಿಷನ್ ಸೂರ್ಯನ ದ್ಯುತಿಗೋಳ, ವರ್ಣಗೋಳ ಮತ್ತು ಕರೋನಾವನ್ನು ಅಧ್ಯಯನ ಮಾಡುವ ಗುರಿಯನ್ನು ಹೊಂದಿದೆ. ಇದು ಬಾಹ್ಯಾಕಾಶ ಹವಾಮಾನದ ಆಯಾಮಗಳು ಮತ್ತು ಕಣಗಳು ಮತ್ತು ಕ್ಷೇತ್ರಗಳ ಪ್ರಸರಣವನ್ನು ಸಹ ಅಧ್ಯಯನ ಮಾಡಲಿದೆ. ಆದಿತ್ಯ ಎಲ್ 1 ವ್ಯೂಮನೌಕೆಯು ಭೂ ಕಕ್ಷೆಯ ನಾಲ್ಕು ಸುತ್ತಗಳನ್ನು ಯಶಸ್ವಿಯಾಗಿ ಪೂರೈಸಿ, ಇದೀಗ ಎಲ್ 1 ಪಾಯಿಂಟ್‌ ಕಡೆಗೆ ತನ್ನ ಪಯಣವನ್ನು ಆರಂಭಿಸುತ್ತಿದೆ.

Advertisement

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement