ವ್ಯಾಟ್ಸ್ಆ್ಯಪ್‌ ಪರಿಚಯಿಸುತ್ತಿದೆ ಹೊಸ ಫೀಚರ್: ಆದ್ರೆ ಫೋಟೊ ಕಳಿಸುವಾಗ ಎಚ್ಚರವಿರಲಿ

WhatsApp
Telegram
Facebook
Twitter
LinkedIn

ನವದೆಹಲಿ: ವ್ಯಾಟ್ಸ್ಆ್ಯಪ್‌ನಲ್ಲಿ ಹೊಸ ಹೊಸ ಫೀಚರ್ಸ್‌ಗಳು ಬರುತ್ತಿರುತ್ತದೆ. ಈ ಮೂಲಕ ಬಳಕೆದಾರರಿಗೆ ಹಲವು ಸೌಲಭ್ಯ ಒದಗಿಸುತ್ತಿರುತ್ತದೆ‌. ಇದೀಗ ವಾಟ್ಸ್‌ಆ್ಯಪ್ ಹೊಸ ಫೀಚರ್ ಪರಿಚಯಿಸುತ್ತಿದೆ. ಇದು ವೆಬ್ ಸರ್ಚ್ ಫೀಚರ್. ಈ ಫೀಚರ್ ಮೂಲಕ ಯಾರಾದರೂ ಯಾವುದೇ ಫೋಟೋ ಕಳುಹಿಸಿದರೆ ಆ ಫೋಟೋಗಳ ಮೂಲವನ್ನು ಹುಡುಕಲು ಸಾಧ್ಯವಾಗಲಿದೆ.  ಇದರಿಂದ ತಪ್ಪು ಮಾಹಿತಿಗಳಿಗೆ ಬ್ರೇಕ್ ಬೀಳಲಿದೆ. ನಕಲಿ ಫೋಟೋಗಳನ್ನು ಫಾರ್ವರ್ಡ್ ಮಾಡಿದರೆ ಬಳಕೆದಾರ ಫೋಟೋವಿನ ಅಥೆಂಟಿಸಿಟಿಯನ್ನು ವ್ಯಾಟ್ಸ್ಆ್ಯಪ್ ವೆಬ್ ಸರ್ಚ್ ಮೂಲಕ ಪರಿಶೀಲಿಸಲು ಸಾಧ್ಯವಿದೆ. ಸದ್ಯ ಈ ಫೀಚರ್ WABetaInfoದಲ್ಲಿ ಪ್ರಯೋಗಾತ್ಮಕವಾಗಿ ನೀಡಲಾಗಿದೆ. ಕೆಲವೇ ದಿನಗಳಲ್ಲಿ ಈ ಫೀಚರ್ ಎಲ್ಲಾ ವ್ಯಾಟ್ಸ್ಆ್ಯಪ್ ಬಳಕೆದಾರರಿಗೆ ಲಭ್ಯವಾಗಲಿದೆ.

ವ್ಯಾಟ್ಸ್ಆ್ಯಪ್‌ನಲ್ಲಿ ಹಲವು ಇಮೇಜ್‌ಗಳು ಫಾರ್ವರ್ಡ್ ಆಗುತ್ತದೆ. ಬೇರೆ ಸ್ಥಳದ ಫೋಟೋವನ್ನು ಇನ್ಯಾವುದೋ ಸ್ಥಳ ಎಂದು ಅಥವಾ ಘಟನೆ ಎಂದು ಫೋಟೋಗಳನ್ನು ಪಾರ್ವರ್ಡ್ ಮಾಡಲಾಗುತ್ತದೆ. ಈ ಮೂಲಕ ಕ್ಷಣಮಾತ್ರದಲ್ಲಿ ತಪ್ಪು ಮಾಹಿತಿಗಳನ್ನು ಹರಡಲಾಗುತ್ತದೆ. ಇದರಿಂದ ಗಲಭೆ ಸೃಷ್ಟಿಯಾದ ಹಲವು ಘಟನೆಗಳಿವೆ. ಇದೀಗ ವ್ಯಾಟ್ಸ್ಆ್ಯಪ್ ಮೂಲಕವೇ ವೆಬ್ ಸರ್ಚ್ ಫೀಚರ್ ನೀಡಲಾಗುತ್ತಿದೆ. ಈ ಫೀಚರ್ ಮೂಲಕ ಹಂಚಿಕೊಂಡ ಫೋಟೋ ಮೂಲ, ಫೋಟೋ ಹೇಳುತ್ತಿರುವು ವಿಷಯಗಳು ಅಸಲಿಯೋ ಅನ್ನೋದು ಗೊತ್ತಾಗಲಿದೆ.

ವ್ಯಾಟ್ಸ್ಆ್ಯಪ್‌ಗೆ ಬಂದಿರುವ ಫೋಟೋ ಮಾತ್ರವಲ್ಲ, ಇತರ ಫೋಟೋಗಳನ್ನು ವ್ಯಾಟ್ಸ್ಆ್ಯಪ್ ವೆಬ್ ಸರ್ಚ್ ಮೂಲಕ ಮೂಲ ಪತ್ತೆ ಹಚ್ಚಲು ಸಾಧ್ಯವಿದೆ. ಇದರಿಂದ ಬಳಕೆದಾರನಿಗೆ  ಸ್ಪಷ್ಟ ಹಾಗೂ ನಿರ್ದಿಷ್ಟ ಮಾಹಿತಿ ಲಭ್ಯವಾಗಲಿದೆ. ತಪ್ಪ ಮಾಹಿತಿಗಳಿಂದ ಎಚ್ಚರವಾಗಿರಲು ಸಾಧ್ಯವಾಗಲಿದೆ. ಇತ್ತ ಯಾವುದೇ ಇಮೇಜ್‌ಗಳನ್ನು ಫಾರ್ವರ್ಡ್ ಮಾಡುವ ಮುನ್ನ ಅಸಲಿಯೋ, ನಕಲಿಯೋ ಅನ್ನೋದು ಪತ್ತೆ ಹಚ್ಚಲು ಅನುಕೂಲವಾಗಲಿದೆ.

ಈ ಫೀಚರ್ ಬಳಕೆ ಮಾಡುವುದು ಹೇಗೆ? ವ್ಯಾಟ್ಸ್ಆ್ಯಪ್ ವೆಬ್ ಫೀಚರ್ ಬಳಕೆ ಮಾಡುವುದು ಅತೀ ಸುಲಭ. ವ್ಯಾಟ್ಸ್ಆ್ಯಪ್ ಚಾಟ್‌ನಲ್ಲಿ ಇಮೇಜ್ ಓಪನ್ ಮಾಡಬೇಕು. ಬಳಿಕ ಮೆನುವಿನಲ್ಲಿರುವ 3 ಡಾಟ್ ಟ್ಯಾಪ್ ಮಾಡಬೇಕು, ಇಲ್ಲಿ ಸರ್ಚ್ ಆನ್ ವೆಬ್ ಆಯ್ಕೆ ಮಾಡಿಕೊಳ್ಳಬೇಕು. ಕೆಲ ಹೊತ್ತಲ್ಲೇ ಇಮೇಜ್ ಜಾತಕವನ್ನು ವ್ಯಾಟ್ಸ್ಆ್ಯಪ್ ವೆಬ್ ಬಿಚ್ಚಿಡಲಿದೆ. ಫೋಟೋದ ಪ್ರಮುಖ ವಿಷಯಗಳನ್ನು ಈ ಫೀಚರ್ ನೀಡಲಿದೆ. ಫೋಟೋ ಮೊದಲು ಆನ್‌ಲೈನ್‌ನಲ್ಲಿ ಅಪ್ಲೋಡ್ ಆಗಿರುವ ಮಾಹಿತಿ, ಫೋಟೋವನ್ನು ಮರು ಬಳಕೆ ಮಾಡಲಾಗುತ್ತಿದೆಯಾ? ಸಂದರ್ಭಕ್ಕೆ ತಕ್ಕಂತೆ ಎಡಿಟ್ ಮಾಡಲಾಗಿದೆಯಾ ಅನ್ನೋದು ಈ ವೆಬ್ ಸರ್ಚ್‌ನಿಂದ ತಿಳಿಯಲಿದೆ.

ಕೇವಲ ಒಂದೆರೆಡು ಟ್ಯಾಪ್ ಮೂಲಕ ಹಂಚಿಕೊಳ್ಳುವ ಇಮೇಜ್ ಅಥವಾ ಮಾಹಿತಿ ಸರಿಯೋ ಅಥವಾ ತಪ್ಪೋ ಅನ್ನೋದು ಗೊತ್ತಾಗಲಿದೆ. ವ್ಯಾಟ್ಸ್ಆ್ಯಪ್ ಬಳಕೆದಾರ ಇಮೇಜ್ ಕುರಿತ ಅಥವಾ ಮಾಹಿತಿ ಕುರಿತ ಸ್ಪಷ್ಟತೆಗಾಗಿ ಮತ್ತೊಂದು ಆ್ಯಪ್ ಹಾಗೂ ನೆರವು ಪಡೆಯಬೇಕಾದ ಅವಶ್ಯಕತೆ ಇರುವುದಿಲ್ಲ, ವ್ಯಾಟ್ಸ್ಆ್ಯಪ್ ಮೂಲಕವೇ ಇಮೇಜ್ ಹಿಂದಿನ ಅಸಲಿ ಕತೆ ಬಹಿರಂಗವಾಗಲಿದೆ.  ವ್ಯಾಟ್ಸ್ಆ್ಯಪ್ ಹೊಸ ಫೀಚರ್ ಈಗಾಗಲೇ ಬೀಟಾ ವರ್ಶನ್‌ನಲ್ಲಿ ಲಭ್ಯವಿದೆ. ಪ್ರಯೋಗಾತ್ಮಕವಾಗಿ ನೀಡಲಾಗಿದೆ. ಪ್ರಯೋಗ ಬಹುತೇಕ ಯಶಸ್ವಿಗೊಂಡಿದೆ. ಇದೀಗ ಶೀಘ್ರದಲ್ಲೇ ಎಲ್ಲಾ ಬಳಕೆದಾರರಿಗೆ ಹೊಸ ಫೀಚರ್ ಲಭ್ಯವಾಗಲಿದೆ. ತಪ್ಪು ಮಾಹಿತಿ, ನಕಲಿ ಮಾಹಿತಿಗಳು ವ್ಯಾಟ್ಸ್ಆ್ಯಪ್ ಮೂಲಕ ಹರಿದಾಡುತ್ತಿದ್ದ ಕಾರಣ ಹಲವರು ಟೀಕಿಸಲು, ವ್ಯಂಗ್ಯಕ್ಕಾಗಿ ವ್ಯಾಟ್ಸ್ಆ್ಯಪ್ ಯೂನಿವರ್ಸಿಟಿ ಅನ್ನೋ ಪದ ಪ್ರಯೋಗ ಪದೇ ಪದೇ ಮಾಡುತ್ತಿರುವುದು ಹೊಸದೇನಲ್ಲ. ಇದೀಗ ಈ ರೀತಿ ತಪ್ಪು ಮಾಹಿತಿಗಳಿಂದ ವ್ಯಾಟ್ಸ್ಆ್ಯಪ್ ಮುಕ್ತವಾಗಲಿದೆ. ಯಾರಾದರು ಉದ್ದೇಶಪೂರ್ವಕವಾಗಿ ಈ ರೀತಿ ಹಳೇ ಫೋಟೋ ಅಥವಾ ಬೇರೆ ಸ್ಥಳಗಳ ಫೋಟೋ, ಅಥವಾ ನಕಲಿ ಮಾಹಿತಿಗಳ ಫೋಟೋಗಳನ್ನು ಹಂಚಿಕೊಂಡರೆ ಅಸಲಿಯತ್ತು ಬಹಿರಂಗವಾಗಲಿದೆ.

BC Suddi   About Us
For Feedback - [email protected]

Related News

LATEST Post

WhatsApp Icon Telegram Icon