ನವದೆಹಲಿ: ಚೀನದಲ್ಲಿ ನಡೆಯುತ್ತಿರುವ 19 ನೇ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಶತಕ ಪದಕಗಳನ್ನು ಗೆದ್ದು ಇತಿಹಾಸ ಸೃಷ್ಟಿಸಿದೆ. ಕ್ರೀಡಾಕೂಟದ ಅಂತಿಮ ದಿನವಾದ ಶನಿವಾರ ಭಾರತವು ಮೊದಲ ಬಾರಿಗೆ ಕ್ರೀಡಾಕೂಟದಲ್ಲಿ ತನ್ನ 100 ನೇ ಪದಕವನ್ನು ಗೆದ್ದುಕೊಂಡಿದೆ.
ಭಾರತೀಯ ಕ್ರೀಡಾ ಇತಿಹಾಸದಲ್ಲಿ ದೇಶಕ್ಕೆ ಪದಕಗಳ ಸಿಹಿ ಶತಕ ಸಿಗುವ ಜೊತೆಗೆ ಅಕ್ಟೋಬರ್ 7 2023 ಶಾಶ್ವತವಾಗಿ ಸ್ವರ್ಣಾಕ್ಷರದಲ್ಲಿ ಬರೆದಿಡುವ ದಿನವಾಯಿತು.
ಮೊದಲ ಬಾರಿಗೆ ಗೇಮ್ಸ್‌ನಲ್ಲಿ ತನ್ನ 100 ನೇ ಪದಕವನ್ನು ಗೆದ್ದಿದೆ. ಕುಸ್ತಿ, ಆರ್ಚರಿ (ರಿಕರ್ವ್), ಹಾಕಿ, ಸೆಪಕ್ಟಕ್ರಾ ಮತ್ತು ಬ್ರಿಡ್ಜ್ ಮತ್ತು ಪುರುಷರ ಕ್ರಿಕೆಟ್ ಮತ್ತು ಎರಡೂ ಕಬಡ್ಡಿ ತಂಡಗಳು ದೃಢಪಡಿಸಿದ ಪದಕಗಳ ನಂತರ ಪದಕಗಳ ಪಟ್ಟಿಯಲ್ಲಿ ಶತಕದ ಗಡಿ ದಾಟುವುದು ಖಚಿತವಾಗಿತ್ತು. ಆದರೆ ಇಂದು ಅದಕ್ಕೆ ಶನಿವಾರ ಅಧಿಕೃತ ಮುದ್ರೆ ಬಿದ್ದಿತು.
“ಭಾರತಕ್ಕೆ ಈ ಐತಿಹಾಸಿಕ ಮೈಲಿಗಲ್ಲಿಗೆ ಕಾರಣರಾದ ನಮ್ಮ ಅಸಾಧಾರಣ ಕ್ರೀಡಾಪಟುಗಳಿಗೆ ನಾನು ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ” ಎಂದು ಭಾರತೀಯ ಕ್ರೀಡಾಪಟುಗಳಿಗೆ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.
ಮಾತ್ರವಲ್ಲದೇ ಅ.10 ರಂದು ಏಷ್ಯನ್ ಗೇಮ್ಸ್ ನಲ್ಲಿ ಭಾಗವಹಿಸಿದ ತಂಡವನ್ನು ಮತ್ತು ಕ್ರೀಡಾಪಟುಗಳೊಂದಿಗೆ ಸಂವಾದ ನಡೆಸಲು ಎದುರು ನೋಡುತ್ತಿದ್ದೇನೆ ಎಂದು ತಮ್ಮ ಟ್ವೀಟರ್ ನಲ್ಲಿ ಬರೆದುಕೊಂಡಿದ್ದಾರೆ.