ಶರಣ ಸಂಸ್ಕೃತಿ ಉತ್ಸವ: ಶ್ರೀ ಜಯದೇವ ಮುರುಘಾರಾಜೇಂದ್ರ ಮಹಾಸ್ವಾಮಿಗಳವರ 150ನೇ ಜಯಂತೋತ್ಸವ

WhatsApp
Telegram
Facebook
Twitter
LinkedIn

 

ಚಿತ್ರದುರ್ಗ: ಚಿತ್ರದುರ್ಗ ಶೂನ್ಯಪೀಠದ 24ನೇ ಅದ್ಯಕ್ಷರು ತ್ರಿವಿಧ ದಾಸೋಹಿ ಶ್ರೀಮನ್ ಮಹಾರಾಜ ನಿರಂಜನ ಜಗದ್ಗುರು ಶ್ರೀ ಜಯದೇವ ಮುರುಘಾರಾಜೇಂದ್ರ ಮಹಾಸ್ವಾಮಿಗಳವರ 150ನೇ ಜಯಂತೋತ್ಸವ ಹಾಗೂ ಶರಣ ಸಂಸ್ಕೃತಿ ಉತ್ಸವದ ಪ್ರಯುಕ್ತ ಶ್ರೀ ಮುರುಘರಾಜೇಂದ್ರ ಬೃಹನ್ಮಠದಲ್ಲಿ ವಚನ ಕಮ್ಮಟ ಶಿP್ಷÀಣವನ್ನು ಏರ್ಪಡಿಸಲಾಗಿತ್ತು.

ದಿನಾಂಕ 5.10.24 ರಿಂದ 11.10.24.ರವರೆಗೆ ಒಟ್ಟು ಏಳು ದಿವಸಗಳ ಕಾಲ ಬಸವ ಟಿವಿಯ ಸಹಯೋಗದಲ್ಲಿ ವಚನ ಕಂಮಟ ಶಿP್ಷÀಣ ಮಾಲಿಕೆ ತರಬೇತಿ ಶಿಬಿರವನ್ನು ಏರ್ಪಡಿಸಲಾಗಿತ್ತು. ಇಂದು ಎಲ್ಲರಿಗೂ ತರಬೇತಿ ಪಡೆದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಶ್ರೀ ಬಸವಲಿಂಗ ಮೂರ್ತಿ ಶರಣರು ವಚನ ಸಾಹಿತ್ಯವೆಂಬುದು ಸಾವಿಲ್ಲದ ಒಂದು ತತ್ವಸಿದ್ಧಾಂತ. ಇದನ್ನು ಯಾರು ಅಧ್ಯಯನ ಮಾಡುತ್ತಾರೋ, ಅರಿಯುತ್ತಾರೋ, ಆಚರಿಸುತ್ತಾರೋ ಅವರ ಜೀವನ ಸುಗಮವಾಗಿರುತ್ತದೆ. ಶರಣಸಂಸ್ಕೃತಿಯು ಭಾರತ ದೇಶದ ಜೀವಂತ ಸಂಸ್ಕೃತಿಯಾಗಿದೆ. ಯಾರು ಶರಣಸಂಸ್ಕೃತಿಯಲ್ಲಿ ಬದುಕುತಿz್ದÁರೋ ಅಂತಹವರಿಗೆ ಯಾವುದೇ ಸಮಸ್ಯೆಗಳು ಉಲ್ಬಣಿಸುವುದಿಲ್ಲ. ಕುಟುಂಬ ಸಮೇತರಾಗಿ ಎಲ್ಲರೂ ಆನಂದದಿAದ ಕಾಲ ಕಳೆಯುತ್ತಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಬಸವ ಟಿವಿಯ ಈ. ಕೃಷ್ಣಪ್ಪನವರು ಪ್ರಮಾಣ ಪತ್ರಗಳನ್ನು ವಿತರಣೆ ಮಾಡಿದರು. ಕಾರ್ಯಕ್ರಮದಲ್ಲಿ ದಿವ್ಯಸಾನಿಧ್ಯವನ್ನು ಶ್ರೀ ಬಸವಲಿಂಗ ಮೂರ್ತಿ ಶರಣರು ವಹಿಸಿದ್ದರು ಹಾಗೂ ಶ್ರೀ ಬಸವನಾಗಿದೇವಸ್ವಾಮಿಗಳು ಉಪಸ್ಥಿತರಿದ್ದರು. ಹಾಗೂ ಇತರೆ ಹರ ಗುರು ಚರಮೂರ್ತಿಗಳು ಮಾತಾಜಿಯವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಕಾರ್ಯಕ್ರಮವು ಶ್ರೀಮಠದ ಅಲ್ಲಮಪ್ರಭು ಸಂಶೋಧನ ಕೇಂದ್ರದಲ್ಲಿ ಜರುಗಿತ್ತು. 300ಕ್ಕೂ ಹೆಚ್ಚು ಜನ ಶಿಬಿರಾರ್ಥಿಗಳು ಪಾಲ್ಗೊಂಡು ಪ್ರಮಾಣಪತ್ರಗಳನ್ನು ಸ್ವೀಕರಿಸಿದರು.

BC Suddi   About Us
For Feedback - [email protected]

Related News

LATEST Post

WhatsApp Icon Telegram Icon