ನವದೆಹಲಿ: ಶಾಲಾ ಪಠ್ಯಪುಸ್ತಕಗಳಲ್ಲಿ ದೇಶದ ಹೆಸರನ್ನು ಇಂಡಿಯಾ ಎಂಬುವುದರ ಬದಲಾಗಿ “ಭಾರತ್” ಎಂದು ಬದಲಿಸಲು, ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಅಂಡ್ ಟ್ರೈನಿಂಗ್(ಎನ್‌ಸಿಇಆರ್‌ಟಿ) ಸಮಿತಿ ಮಾಡಿದ ಶಿಫಾರಸ್ಸನ್ನು ಅದರ ಸದಸ್ಯರು ಸರ್ವಾನುಮತದಿಂದ ಅಂಗೀಕರಿಸಿದ್ದಾರೆ. ಹೀಗಾಗಿ ಇನ್ನು ಮುಂದಿನ ದಿನಗಳಲ್ಲಿ ಎಲ್ಲಾ ವಿಷಯಗಳ ಶಾಲಾ ಪಠ್ಯಕ್ರಮದಲ್ಲಿ”ಭಾರತ್” ಹೆಸರು ಕಾಣಸಿಗಲಿದೆ.
ಸಮಿತಿಯ ಸದಸ್ಯರಲ್ಲಿ ಒಬ್ಬರಾಗಿರುವ ಸಿಐ ಇಸಾಕ್ ಪ್ರಕಾರ, ಹೊಸ ಎನ್‌ಸಿಇಆರ್‌ಟಿ ಪುಸ್ತಕಗಳಲ್ಲಿ ಹೆಸರು ಬದಲಾವಣೆಯಾಗಿರುತ್ತದೆ. ಈ ಪ್ರಸ್ತಾವನೆಯನ್ನು ಕೆಲ ತಿಂಗಳ ಹಿಂದೆಯೇ ಮಂಡಿಸಲಾಗಿದ್ದು, ಈಗ ಅದನ್ನು ಅಂಗೀಕರಿಸಲಾಗಿದೆ ಎಂದು ಇಸಾಕ್ ಹೇಳಿದ್ದಾರೆ.
ಪಠ್ಯಪುಸ್ತಕಗಳಲ್ಲಿ ‘ಪ್ರಾಚೀನ ಇತಿಹಾಸ’ ಬದಲಿಗೆ ‘ಶಾಸ್ತ್ರೀಯ ಇತಿಹಾಸ’ ನಾಮಕರಣವನ್ನು ಅಳವಡಿಸಿಕೊಳ್ಳಲು ಸಮಿತಿಯು ಶಿಫಾರಸು ಮಾಡಿದ್ದು ಅವುಗಳ ಮಹತ್ವವನ್ನು ಸಿಐ ಇಸಾಕ್ ಒತ್ತಿ ಹೇಳಿದ್ದಾರೆ
ವಸಾಹತುಶಾಹಿ ಬ್ರಿಟಿಷ್ ಆಳ್ವಿಕೆಯಲ್ಲಿ, ಭಾರತೀಯ ಇತಿಹಾಸವನ್ನು ಪ್ರಾಚೀನ, ಮಧ್ಯಕಾಲೀನ ಮತ್ತು ಆಧುನಿಕ ಮೂರು ಹಂತಗಳಾಗಿ ವಿಂಗಡಿಸಲಾಗಿದೆ. ಇದು ಪ್ರಾಚೀನ ಭಾರತೀಯ ಇತಿಹಾಸವನ್ನು ಸರಿಯಾಗಿ ಭೋದಿಸಲಾಗುತ್ತಿಲ್ಲ. ಆದ್ದರಿಂದ, ಮಧ್ಯಕಾಲೀನ ಮತ್ತು ಆಧುನಿಕ ಅವಧಿಗಳ ಜೊತೆಗೆ ಭಾರತೀಯ ಇತಿಹಾಸದ ಶಾಸ್ತ್ರೀಯ ಅವಧಿಯನ್ನು ಶಾಲೆಗಳಲ್ಲಿ ಕಲಿಸಬೇಕೆಂದು ನಾವು ಸೂಚಿಸಿದ್ದೇವೆ” ಎಂದು ಅವರು ಹೇಳಿದ್ದಾರೆ.