ಶಾಲಾ ಬಸ್‌ ಪಲ್ಟಿ: ಆರು ವಿದ್ಯಾರ್ಥಿಗಳು ಸಾವು.!

 

ಚಂಡೀಗಢ: ಶಾಲಾ ಬಸ್‌ವೊಂದು ಮಗುಚಿ ಆರು ವಿದ್ಯಾರ್ಥಿಗಳು ಮೃತಪಟ್ಟಿದ್ದು, 20 ಮಂದಿ ಗಾಯಗೊಂಡಿರುವ ಘಟನೆ ಹರಿಯಾಣದ ಮಹೇಂದ್ರಗಢದಲ್ಲಿ ನಡೆದಿದೆ .

ಗಾಯಾಳು ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಪ್ರಾಥಮಿಕ ವರದಿಗಳ ಪ್ರಕಾರ, ಕನೀನಾ ಪಟ್ಟಣದಲ್ಲಿ ವಾಹನವನ್ನು ಓವರ್‌ಟೇಕ್ ಮಾಡುವಾಗ ಶಾಲಾ ಬಸ್ ಪಲ್ಟಿಯಾಗಿದೆ.

Advertisement

ಬಸ್ ಚಾಲಕನನ್ನು ಬಂಧಿಸಲಾಗಿದೆ. ಆತನನ್ನು ವೈದ್ಯಕೀಯ ಪರೀಕ್ಷೆ ಒಳಪಡಿಸಿದ ಬಳಿಕವಷ್ಟೇ ಪಾನಮತ್ತನಾಗಿದ್ದಾನೆಯೇ ಎಂಬುದು ತಿಳಿದು ಬರಲಿದೆ. ನಿರ್ಲಕ್ಷ್ಯದ ಚಾಲನೆ ಬಗ್ಗೆಯೂ ದೂರುಗಳು ಬಂದಿವೆ. ಈ ಕುರಿತು ತನಿಖೆ ನಡೆಸಲಾಗುತ್ತದೆ’ ಎಂದು ಮಹೇಂದ್ರಗಢ ಪೊಲೀಸ್ ವರಿಷ್ಠಾಧಿಕಾರಿ ಅರ್ಶ್ ವರ್ಮಾ ತಿಳಿಸಿದ್ದಾರೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement