ಶಿವಮೊಗ್ಗ ಗಲಭೆ ಸಣ್ಣ ವಿಚಾರವಾ..? – ಪೇಜಾವರ ಶ್ರೀ

ಧಾರವಾಡ ; ಮನೆ ಮನೆಗೆ ಕಲ್ಲು ಹೊಡೆಯೋದು, ಕತ್ತಿ ತಗೊಂಡು ಹೊಡೆಯೋದು ಸಣ್ಣ ವಿಚಾರವಾ..? ಇದನ್ನೆಲ್ಲಾ ಸರ್ಕಾರದಿಂದ ನಿಯಂತ್ರಿಸುವ ಕೆಲಸ ಆಗಬೇಕು ಎಂದು ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು. ನಗರದಲ್ಲಿ ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದ ಗಲಭೆ ಪ್ರಕರಣದ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಗಲಭೆಗಳನ್ನು ಮೂಲದಲ್ಲಿಯೇ ಹತ್ತಿಕ್ಕಬೇಕು, ಯಾರೂ ಸಹ ಸಣ್ಣ ವಿಚಾರ ಅಂತಾ ತಿಳಿಯಬಾರದು ಸರ್ಕಾರ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು. ನಮ್ಮ ಸಂತೋಷದ ಪ್ರಯತ್ನ ಮತ್ತೊಬ್ಬರ ದುಃಖವಾಗಬಾರದು ಎಲ್ಲರೂ ಸಂತೋಷದಿಂದ ಇರಬೇಕು. ಧರ್ಮ ಎಂದರೆ ಸಮಾಜವನ್ನು ನಿರಂತರ ಮುನ್ನಡೆಸುವ ಬದುಕಿನ ಸೂತ್ರವಾಗಿದೆ. ಎಲ್ಲರೂ ಸುಖ ಸಂತೋಷದಿಂದ ಇರಬೇಕು, ಅದಕ್ಕಾಗಿ ಅಳವಡಿಸಿಕೊಳ್ಳವೇಕಾದ ನೀತಿ ನಿಯಮವೇ ಸನಾತನ ಧರ್ಮ ಎಂದು ತಿಳಿಸಿದರು. ಎಲ್ಲರಿಗೂ ಸುಖ ಸಿಗುವಂತೆ ನಾವು ಪ್ರಯತ್ನಿಸಬೇಕು, ಮಳೆ ಬಂದಾಗ ಇಡೀ ಊರಿಗೆ ಬರುತ್ತದೆ ಹಾಗೇ ಸುಖ ಎಲ್ಲರೂ ನೆಮ್ಮದಿಯಿಂದ ಬದುಕುವಂತೆ ಮಾಡುತ್ತದೆ. ನಾವು ಇನ್ನೊಬ್ಬರ ಸುಖ ಬಯಸಿದರೆ ಮಾತ್ರ ಸುಖವಾಗಿರಲು ಸಾಧ್ಯ ಎಂದು ತಿಳಿಸಿದರು. ಸನಾತನ ಧರ್ಮ ವಿರೋಧಿಸುವ ಮಟ್ಟಕ್ಕೆ ಕೈ ಹಾಕುವುದು ಸರಿಯಲ್ಲ, ಒಮ್ಮೆ ಕಿಡಿ ಹೊತ್ತಿದರೆ ಶಾಂತಿ ಬೇಗ ಸಿಗುವುದಿಲ್ಲ. ಇದಕ್ಕೆ ಮಣಿಪುರ ರಾಜ್ಯ ಉದಾಹರಣೆ ಎಂದು ಎಚ್ಚರಿಸಿದರು. ರಾಜಕಾರಣಿಗಳು ಒಂದು ಪಕ್ಷಕ್ಕೆ ಸೀಮಿತವಲ್ಲ. ಸಮಾಜದ ಎಲ್ಲರ ಸುಖ ಶಾಂತಿಗೆ ಬೇಕಾದ ಸೂತ್ರಗಳನ್ನು ಅಳವಡಿಸಿಕೊಳ್ಳಬೇಕು. ಎಲ್ಲರೂ ಸಮಾನರು ಎಲ್ಲವೂ ನಮ್ಮದು ಎಂಬ ಭಾವನೆ ಬರಬೇಕು. ಎಲ್ಲರ ಸುಖವನ್ನು ಬಯಸುವ ಕಾರ್ಯ ಆಗಬೇಕು ಎಂದು ಪೇಜಾವರ ಶ್ರೀ ತಿಳಿಸಿದರು.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement