ಶಿಸ್ತು ಹಾಗೂ ಛಲ ಇದ್ದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂಬುದಕ್ಕೆ ಐಎಎಸ್ ಅಧಿಕಾರಿಯಾದ ಕುಮುದ್ ಮಿಶ್ರಾ ಸಾಕ್ಷಿ.!

WhatsApp
Telegram
Facebook
Twitter
LinkedIn

 

ಬಿಹಾರ: ಸತತ ಪ್ರಯತ್ನ, ಶಿಸ್ತು ಹಾಗೂ ಛಲ ಮುಖ್ಯ. ಹೀಗೆ ತಮ್ಮ ಸತತ ಪ್ರಯತ್ನದ ಮೂಲಕ ಐಆರ್‌ಎಸ್ ಅಧಿಕಾರಿಯಿಂದ ಐಎಎಸ್ ಅಧಿಕಾರಿಯಾದ ಕುಮುದ್ ಮಿಶ್ರಾ ಅವರ ಯಶೋಗಾಥೆ ಇದು.

ಲಕ್ನೋ ವಿಶ್ವವಿದ್ಯಾಲಯದಿಂದ ರಾಜ್ಯಶಾಸ್ತ್ರದಲ್ಲಿ ಪದವಿ ಪಡೆದಿರುವ ಕುಮುದ್ ಮಿಶ್ರಾ ಅವರು ನಿವೃತ್ತ ಸೇನಾ ಅಧಿಕಾರಿಯ ಪುತ್ರಿ. ಇವರು ತಮ್ಮ ಶಾಲಾ ಶಿಕ್ಷಣವನ್ನು ಹಿಮಾಚಲ ಪ್ರದೇಶ ಮತ್ತು ಲಕ್ನೋದ ಕೇಂದ್ರೀಯ ವಿದ್ಯಾಲಯಗಳಲ್ಲಿ ಪೂರೈಸಿದ್ದಾರೆ.

ಮೊದಲ ಬಾರಿಗೆ ಯುಪಿಎಸ್‌ಸಿ ಪರೀಕ್ಷೆ ಬರೆದ ಕುಮುದ್ ಅವರು 259ನೇ ರ‍್ಯಾಂಕ್ ಪಡೆದು ಐಆರ್‌ಎಸ್ ಗೆ ಆಯ್ಕೆಯಾದರು. ಆದರೆ ಅವರು ತಾವು ಐಎಎಸ್ ಗುರಿಯನ್ನು ತಲುಪುವ ಉದ್ದೇಶದಿಂದ ಮತ್ತೊಮ್ಮೆ ಪರೀಕ್ಷೆ ಬರೆಯಲು ಸಿದ್ಧತೆ ನಡೆಸಿದರು.

ಕುಮುದ್ ಅವರು ಪದವಿಯಲ್ಲಿ ಓದಿದ್ದ ರಾಜ್ಯಶಾಸ್ತ್ರ ಮತ್ತು ಅಂತರರಾಷ್ಟ್ರೀಯ ಸಂಬಂಧಗಳನ್ನು ಐಚ್ಛಿಕ ವಿಷಯವನ್ನಾಗಿ ಆಯ್ಕೆಮಾಡಿಕೊಂಡಿದ್ದರು. 2024ರಲ್ಲಿ ಮತ್ತೊಮ್ಮೆ ಯುಪಿಎಸ್‌ಸಿ ಪರರೀಕ್ಷೆ ಬರೆದ ಕುಮುದ್ ಅವರು 69ನೇ ಅಖಿಲ ಭಾರತ ರ‍್ಯಾಂಕ್ ಪಡೆದು ಉತ್ತೀರ್ಣರಾಗುತ್ತಾರೆ. ಈ ಮೂಲಕ ಐಎಎಸ್ ಅಧಿಕಾರಿಯಾಗುವಲ್ಲಿ ಸಫಲರಾಗುತ್ತಾರೆ.

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon