ಪಡಿತರ ಕಾರ್ಡ್‌ಗಳಿಗಾಗಿ ಸಲ್ಲಿಕೆಯಾಗಿರುವ ಅರ್ಜಿಗಳ ಪೈಕಿ 1.73 ಲಕ್ಷ ಅರ್ಜಿದಾರರಿಗೆ ಶೀಘ್ರದಲ್ಲೇ ಪಡಿತರ ಚೀಟಿ
ನೀಡಲಾಗುವುದು ಎಂದು ಆಹಾರ ಸರಬರಾಜು ಸಚಿವ KH ಮುನಿಯಪ್ಪ ತಿಳಿಸಿದ್ದಾರೆ.
ವಿಧಾನ ಪರಿಷತ್‌ನಲ್ಲಿ BJP ಪ್ರತಾಪಸಿಂಹ ನಾಯಕ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪಡಿತರ ಕಾರ್ಡ್‌ಗಾಗಿ 2,95,986 ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಪೈಕಿ ಪರಿಶೀಲನೆ ನಂತರ 55,950 ಅರ್ಜಿಗಳು ಬಿಪಿಎಲ್ ಅಡಿಯಲ್ಲಿ ಬರುವುದಿಲ್ಲ ಎಂಬುದು
ತಿಳಿದುಬಂದಿದೆ. ಬಾಕಿಯಿರುವ 1.73 ಲಕ್ಷ ಅರ್ಜಿಗಳನ್ನು ಪರಿಶೀಲಿಸಿ ಆದಷ್ಟು ಬೇಗ ವಿತರಿಸಲಾಗುವುದು ಎಂದರು.