ಕೊರೊನಾ ಕಾಟ ಮುಗಿತು ಅಂತ ಇಷ್ಟು ದಿನ ಆರಾಮವಾಗಿ ಇದ್ದ ಜನರಿಗೆ ಈಗ ಮತ್ತೆ ರಾಜ್ಯದಲ್ಲಿ ಕೋವಿಡ್ ಆತಂಕ ಶುರುವಾಗಿದೆ. ಇಷ್ಟು ದಿನ ಸೈಲೆಂಟ್ ಇದ್ದ ಕೊರೊನಾ ಈಗ ಮತ್ತೆ ರೂಪ ಬದಲಿಸಿ ಆರ್ಭಟಿಸಲು ಶುರುವಾಗಿದೆ.
ರಾಜ್ಯಕ್ಕೆ ಓಮಿಕ್ರಾನ್‍ನ ಉಪ ತಳಿಯಾದ ಜೆಎನ್.1 ಆತಂಕ ಹೆಚ್ಚಾಗಿದೆ.ಕೇರಳದಲ್ಲಿ ಕೊರೊನಾ ಹಾವಳಿ ಇದೀಗ ಶುರುವಾಗಿದೆ.ನಿನ್ನೆ ಒಂದು ದಿನ 237 ಪ್ರಕರಣ ದಾಖಲಾಗಿದೆ. ಈ ಮೊದಲ ವಾರವೆ 825 ಕೇಸ್ ದಾಖಲಾಗಿದ್ದು. ಒಟ್ಟು ಪ್ರಕರಣಗಳ ಪೈಕಿ 90% ಕೇರಳದಲ್ಲೆ ಕೊರೊನಾ ದಾಖಲಾಗಿದೆ.
ಇದೀಗ ಶಬರಿಮಲೆಗೆ ಅಯ್ಯಪ್ಪ ಸ್ವಾಮಿ ಭಕ್ತರು ಭೇಟಿ ನೀಡೊದ್ರಿಂದ ಆತಂಕ ಸೃಷ್ಟಿಯಾಗಿದೆ.ಈ ಹಿನ್ನೆಲೆ ನಮ್ಮಲಿಯೂ ಕೊರೊನಾ ಆತಂಕ ಮತ್ತೆ ಶುರುವಾಗಿದೆ. ಕೇರಳದಲ್ಲಿ ಸಾಂಕ್ರಾಮಿಕ ರೋಗದ ಪ್ರಕರಣಗಳು ಹೆಚ್ಚಾಗುತ್ತಿದೆ. ಈ ಹಿನ್ನೆಲೆ ನಿರಂತರ ಮುಂಜಾಗ್ರತೆ ವಹಿಸುವಂತೆ ಕೇಂದ್ರ ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ಕೋವಿಡ್ ಲಕ್ಷಣಗಳು ಜ್ವರ, ಕೆಮ್ಮು, ಮೂಗುಕಟ್ಟುವಿಕೆ, ತಲೆ ನೋವು, ಸುಸ್ತು ಈ ರೀತಿಯ ಲಕ್ಷಣಗಳು ಕಂಡುಬರುತ್ತವೆ.
ಒಂದು ಕಡೆ ಬೆಂಗಳೂರಿನಲ್ಲಿ ಡೆಂಗ್ಯೂ ಕೇಸ್‍ಗಳು ಹೆಚ್ಚಾಗುತ್ತಿವೆ. ಈಗ ಕೋವಿಡ್ ಆತಂಕ ಹೆಚ್ಚಾಗುತ್ತಿದೆ. ಈ ಕಾರಣದಿಂದ ಸಿಲಿಕಾನ್ ಸಿಟಿ ಮಂದಿ ಎಚ್ಚರದಿಂದ ಇರಬೇಕಾಗಿದೆ.