‘ಶೋಭಾ ಕರಂದ್ಲಾಜೆಗೆ ನನ್ನ ತಾಕತ್ತಿನ ಬಗ್ಗೆ ಮಾತಾಡುವ ಕಿಂಚಿತ್ತೂ ಯೋಗ್ಯತೆಯಿಲ್ಲ’- ಸೋಮಶೇಖರ್

ಬೆಂಗಳೂರು : ಶೋಭಾ ಕರಂದ್ಲಾಜೆಯವರಿಗೆ ನನ್ನ ತಾಕತ್ತಿನ ಬಗ್ಗೆ ಮಾತಾಡುವ ಕಿಂಚಿತ್ತೂ ಯೋಗ್ಯತೆ ಇಲ್ಲ. ತಾಕತ್ತು ನೋಡಲೇಬೇಕು ಅಂತಾದರೆ ಅವರು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲಿ ಮತ್ತು ಶಾಸಕ ಸ್ಥಾನಕ್ಕೆ ನಾನು ರಾಜೀನಾಮೆ ನೀಡುತ್ತೇನೆ ಎಂದು ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಕಿಡಿಕಾರಿದ್ದಾರೆ.

ಶೋಭಾ ಕರಂದ್ಲಾಜೆ ತಮ್ಮ ವಿರುದ್ಧ ಮಾಡಿರುವ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಇಬ್ಬರೂ ಯಶವಂತಪುರದಲ್ಲಿ ಸ್ಪರ್ಧೆ ಮಾಡೋಣ, ಜನ ತಿರ್ಮಾನ ತೆಗೆದುಕೊಳ್ಳುತ್ತಾರೆ, ಅಗ ಯಾರ ತಾಕತ್ತು ಎಷ್ಟು ಅನ್ನೋದು ಗೊತ್ತಾಗುತ್ತದೆ, ಚಿಕ್ಕಮಗಳೂರು ಜನ ಉಗಿದಿದ್ದಕ್ಕೆ ಅವರು ಯಶವಂತಪುರ ಬರಬೇಕಾಯಿತು, ತಮ್ಮ ಕೆಲಸ ತಾವು ಮಾಡಿಕೊಂಡು ಸುಮ್ಮನಿರದಿದ್ದರೆ ಅವರ ಪಾಪದ ಕೊಡ ತುಂಬುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ಪರ ಮತ ಯಾಚಿಸುತ್ತಿರುವುದನ್ನು ಅವರು ಸಮರ್ಥಿಸಿಕೊಂಡಿದ್ದಾರೆ. ಚನ್ನಪಟ್ಟಣ ನನ್ನ ಹುಟ್ಟೂರು, ಅಲ್ಲಿ ಯಾರಾದರೂ ಸಲಹೆ ಕೇಳಿದರೆ ಕೊಡುತ್ತೇನೆ, ಯೋಗೇಶ್ವರ್ ಗೆ ಬಿಜೆಪಿಯಲ್ಲಿ ಅನ್ಯಾಯವಾಗಿದೆ ಎಂದು ಹೇಳಿದ್ದಾರೆ.

Advertisement

 

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement