ಶ್ರಾವಣದಲ್ಲಿ ಮೊಟ್ಟೆ ಬದಲು ಈ ಆಹಾರಗಳನ್ನು ಸೇವಿಸಿ.. ಮೊಟ್ಟೆಯಷ್ಟೇ ಪೌಷ್ಟಿಕಾಂಶವಿದೆ

ಬಹುತೇಕ ಮಾಂಸಾಹಾರಿಗಳು ಶ್ರಾವಣ ಹಾಗು ಕಾರ್ತಿಕ ಮಾಸದಲ್ಲಿ ಮೊಟ್ಟೆ, ಕೋಳಿ, ಮೀನುಗಳನ್ನು ಮುಟ್ಟುವುದಿಲ್ಲ. ಇಷ್ಟೇ ಪೌಷ್ಟಿಕಾಂಶ ಒದಗಿಸುವ 5 ಆಹಾರಗಳ ಬಗ್ಗೆ ಲೇಖನದಲ್ಲಿ ಮಾಹಿತಿ ನೀಡಲಾಗಿದೆ. ಅವುಗಳಿಂದ ನೀವು ಉತ್ತಮವಾದ ಆರೋಗ್ಯವನ್ನು ನಿರೀಕ್ಷಿಸಬಹುದು.

ಮೊಟ್ಟೆಗಳು ಪೋಷಕಾಂಶಗಳಿಂದ ಸಮೃದ್ಧವಾಗಿರುತ್ತದೆ. ಅತ್ಯುತ್ತಮ ಗುಣಮಟ್ಟದ ಪ್ರೋಟೀನ್‌ಗಳು, ವಿಟಮಿನ್‌ ಡಿ ಹೊಂದಿರುತ್ತದೆ. ಇದು ಉತ್ತಮ ಕೊಲೆಸ್ಟ್ರಾಲ್‌ ಮಟ್ಟವನ್ನು ಸುಧಾರಿಸುತ್ತದೆ. ತೂಕ ನಿರ್ವಹಣೆ ಮಾಡುವವರಿಗೆ ಇದೊಂದು ಅದ್ಭುತ ಆಹಾರವಾಗಿದೆ. ಇಂತಹ ಆಹಾರದ ಪರ್ಯಾಯವಾಗಿ ಯಾವ ಆಹಾರಗಳನ್ನು ನಾವು ಸೇವಿಸಬೇಕು ಎಂಬುದನ್ನು ಇಲ್ಲಿ ತಿಳಿಯಿರಿ.

ಆರೋಗ್ಯಕರ ಬೀಜಗಳು

Advertisement

ಮೊಟ್ಟೆಯ ಪಯಾರ್ಯವಾಗಿ ನೀವು ಚಿಯಾ ಬೀಜಗಳು, ಕುಂಬಳಕಾಯಿ ಬೀಜಗಳು, ಅಗಸೆ ಬೀಜಗಳನ್ನು ಬೆಳಗಿನ ಉಪಹಾರವಾಗಿ ಸೇವಿಸಬಹುದು. ಇವು ದೇಹಕ್ಕೆ ಅಗತ್ಯವಿರುವ ಸಾಕಷ್ಟು ಪ್ರಯಾಣದ ಶಕ್ತಿಯನ್ನು ಒದಗಿಸುತ್ತದೆ. ಇದಲ್ಲದೆ, ಇದರಲ್ಲಿರುವ ಫೈಬರ್‌ಗಳು ಹೊಟ್ಟೆಯನ್ನು ತುಂಬಿಸುತ್ತದೆ.

ಅಗಸೆ ಬೀಜಗಳನ್ನು ನೀವು ನೀರಿನಲ್ಲಿ, ಹಾಲಿನಲ್ಲಿ ನೆನೆಸಿಟ್ಟು ಸೇವಿಸಬಹುದು. ಇಂತಹ ಚಿಕ್ಕ ಚಿಕ್ಕ ಬೀಜಗಳು ಒಮೆಗಾ-3 ಕೊಬ್ಬಿನಾಮ್ಲಗಳಿಂದ ಶ್ರೀಮಂತವಾಗಿವೆ. ಇನ್ನು ಕುಂಬಳಕಾಯಿ ಬೀಜಗಳಲ್ಲಿ ಸತು, ರಂಜಕ, ಖನಿಜಗಳು ಸಮೃದ್ಧವಾಗಿವೆ. ಇದು ಒಂದು ಮೊಟ್ಟೆಗಿಂತ ಹೆಚ್ಚಿನ ಪ್ರೋಟೀನ್‌ ಹೊಂದಿರುತ್ತದೆ.

ತೋಫು

ತೋಫು ನೋಡಲು ಪನ್ನೀರಿನಂತೆ ಕಾಣುತ್ತದೆಯಾದರೂ, ಆರೋಗ್ಯದ ವಿಷಯದಲ್ಲಿ ಬಹಳ ಪ್ರಯೋಜನಕಾರಿಯಾಗಿದೆ. ಇದು ತನ್ನ ಮೃದುತ್ವ, ಹಾಗು ಸ್ವಾದದಿಂದ ಹೆಚ್ಚು ಜನಪ್ರಿಯವಾಗಿದೆ. ಅನೇಕ ಆರೋಗ್ಯ ಸಮಸ್ಯೆಗಳನ್ನು ತಡೆಯಬಲ್ಲ ಶಕ್ತಿ ಈ ತೋಫುವಿಗೆ ಇದೆ ಎಂದು ಸಂಶೋಧನೆಗಳೇ ಸಾಬೀತು ಪಡಿಸಿವೆ.

ಪ್ರೋಟೀನ್‌ನ ಉತ್ತಮ ಮೂಲವಾದ ಈ ಪೌಷ್ಟಿಕಾಂಶ ಭರಿತ ಆಹಾರವು ಮೊಟ್ಟೆಯ ಬದಲಿಯಾಗಿ ಕಾರ್ಯ ನಿರ್ವಹಿಸುತ್ತದೆ. ಒಂದು ವೇಳೆ ನೀವು ಸಸ್ಯಾಹಾರಿಗಳಾಗಿದ್ದರೆ ಇದು ನಿಮಗೆ ಮೊಟ್ಟೆಯ ಪರ್ಯಾಯವಾಗಿದೆ.

​​ರಾಜ್ಮಾ ​

ರಾಜ್ಮಾ ಅಥವಾ ಕಿಡ್ನಿ ಬೀನ್ಸ್‌ ಮೊಟ್ಟೆಯ ಪರ್ಯಾಯ ಅತ್ಯುತ್ತಮ ಆಹಾರವಾಗಿದೆ. ಇದರಲ್ಲಿ ಪೋಷಕಾಂಶಗಳು ಸಮೃದ್ಧವಾಗಿದ್ದು, ಕಡಿಮೆ ಗ್ಲೈಸೆಮಿಕ್‌ ಸೂಚ್ಯಂಕವಿದೆ. ಅಷ್ಟೇ ಅಲ್ಲ, ಕಿಡ್ನಿ ಬೀನ್ಸ್‌ನಲ್ಲಿ ಯಥೇಚ್ಚವಾಗಿ ಪ್ರೋಟೀನ್‌ ಇದೆ.

ಈ ಆರೋಗ್ಯಕರ ಆಹಾರವು ಕಬ್ಬಿಣ, ಪೋಟ್ಯಾಶಿಯಂ, ಕಡಿಮೆ ಕೊಬ್ಬಿನ ಗುಣಲಕ್ಷಣಗಳನ್ನು ಹೊಂದಿದೆ. ಇದರಲ್ಲಿರುವ ಪೈಬರ್ ನಿಮ್ಮ ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ.

ಮಸೂರ್‌ ದಾಲ್‌

ಸಾಮಾನ್ಯವಾಗಿ ಧಾನ್ಯಗಳು ಹಲವು ರೀತಿಯಲ್ಲಿ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಇದರಲ್ಲಿ ಅತ್ಯುತ್ತಮ ಫೈಬರ್, ಪ್ರೋಟೀನ್‌, ಪೋಷಕಾಂಶ ಹಾಗು ಜೀವಸತ್ವಗಳಿಂದ ತುಂಬಿದೆ. ಈ ಪಟ್ಟಿಯಲ್ಲಿ ತೊಗರಿ ಬೇಳೆ, ಉದ್ದಿನ ಬೇಳೆ ಕೂಡ ಸೇರಿವೆ. ಇಂತಹ ಧಾನ್ಯಗಳನ್ನು ನೀವು ಮೊಟ್ಟೆಯ ಪರ್ಯಾಯವಾಗಿ ಬಳಸಬಹುದು.

ಚೀಸ್​

ಚೀಸ್‌ನಲ್ಲಿ ಪ್ರೋಟೀನ್, ಕ್ಯಾಲ್ಸಿಯಂ, ವಿಟಮಿನ್ ಬಿ 12, ಐರನ್-ಪನೀರ್ ಅಥವಾ ಕಾಟೇಜ್ ಚೀಸ್‌ನಲ್ಲಿ ಪ್ಯಾಕ್ ಮಾಡಲಾಗಿರುತ್ತದೆ. ಮೊಟ್ಟೆಯ ಬದಲಿಯಾಗಿ ಸಸ್ಯಹಾರಿಗಳು ಸೇವಿಸುತ್ತಾರೆ. ವಿಶೇಷ ರುಚಿಗಾಗಿ ಅನೇಕ ಭಕ್ಷ್ಯಗಳಿಗೆ ಸೇರಿಸಬಹುದು.

ನಾಲಿಗೆಗೆ ರುಚಿಯನ್ನು ಮಾತ್ರ ಒದಗಿಸುವುದಿಲ್ಲ ಬದಲಾಗಿ ಆರೋಗ್ಯವನ್ನು ಕಾಪಾಡುತ್ತದೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement