ಚಿತ್ರದುರ್ಗ: ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ರಜತಾ ಮಹೋತ್ಸವ ಹಾಗೂ ದ್ವಿತೀಯ ಮಹಾ ಕುಂಭಾಭಿಷೇಕ ಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
. ಮೊದಲ ದಿನ ದಂದು 5-7-2024 ಸಂಜೆ ಕೇರಳದ ತಂತ್ರಿಗಳಾದ ವಿಷ್ಣು ಭಟ್ಟಾದ್ರಿ ಪಾಡ್ ಹಾಗೂ ದೇವಸ್ಥಾನದ ಪ್ರಧಾನ ಅರ್ಚಕರಾದ ಸತೀಶ್ ಶರ್ಮ ರವರ ಸಂಗಡಿಗರಿಂದ ಸಂಧ್ಯಾಕಾಲದಲ್ಲಿ ವಿಶೇಷವಾಗಿ ದೇವಸ್ಥಾನದ ಆವರಣದಲ್ಲಿ ಆಚಾರ್ಯ ವರ್ಣಂ, ಸ್ಥಳ ಶುದ್ಧೀಕರಣ, ವಾಸ್ತುಶಾಂತಿ, ವಾಸ್ತು ಬಲಿ, ಅಂಕುರಾರ್ಪಣ ಪೂಜಾ ಕಾರ್ಯಕ್ರಮದೊಂದಿಗೆ ಪ್ರಾರಂಭಿಸಲಾಯಿತು.
ವಾಸ್ತು ಹೋಮ, ತತ್ವ ಕಲಶ ಅಭಿಷೇಕ, ಬ್ರಹ್ಮಾದಿ ಪರಿಕಲಾ ಅಭಿಷೇಕಗಳು, ಅಯ್ಯಪ್ಪ ಕೇರಳದ ಚoಡೆ ವಾದ್ಯ ಧ್ವನಿ ಮೊಳಗಿಸುವುದರೊಂದಿಗೆ ಪೂಜಾ ಕಾರ್ಯಕ್ರಮ ಪ್ರಾರಂಭ ಮಾಡಲಾಯಿತು ದೇವಸ್ಥಾನದ ಅಧ್ಯಕ್ಷರಾದ ಶರಣ್ ಕುಮಾರ್ ಹಾಗೂ ಕಾರ್ಯದರ್ಶಿಯಾದ ಎಂ ಪಿ ವೆಂಕಟೇಶ್, ಉಪಾಧ್ಯಕ್ಷರಾದ ಮಲ್ಲಿಕಾರ್ಜುನ್ ಹಾಗೂ ದೇವಸ್ಥಾನದ ಸಮಿತಿ ಯವರು ಉಪಸ್ಥಿತರಿದ್ದರು. ಅಯ್ಯಪ್ಪ ಸ್ವಾಮಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು