ದಾವಣಗೆರೆ : ನಗರದ ಶ್ರೀ ಕಾಳಿಕಾದೇವಿ ರಸ್ತೆಯಲ್ಲಿರುವ ಶ್ರೀ ಕಾಳಿಕಾಂಬ ವಿಶ್ವಕರ್ಮ ದೇವಸ್ಥಾನದಲ್ಲಿ ಕಳೆದ ಮಂಗಳವಾರ ಕಡೇ ಕಾರ್ತಿಕೋತ್ಸವವು ವಿಜೃಂಭಣೆಯಿಂದ ಜರುಗಿತು.
ಈ ಸಂದರ್ಭದಲ್ಲಿ ದೇವಸ್ಥಾನ ಟ್ರಸ್ಟ್‌ನ ಉಪಾಧ್ಯಕ್ಷ ವಿ. ಷಣ್ಮುಖಪ್ಪ, ಗೌರವ ಕಾರ್ಯದರ್ಶಿ ನಲ್ಕುಂದ ಕರಿಬಸಪ್ಪ, ಸಹ ಕಾರ್ಯದರ್ಶಿ ಎಂ. ಡಿ. ಮೌನೇಶ್ವರಚಾರ್, ಆರ್. ಎಂ. ಪಂಚಾಕ್ಷರಾಚಾರ್ ಹಾಗೂ ಟ್ರಸ್ಟಿಗಳಾದ ಬಸಾಪುರದ ನಾಗೇಂದ್ರಚಾರ್, ಎಚ್.ಎನ್. ಜಯಚಾರ್, ಶಾಮನೂರು ನಾಗರಾಜಾಚಾರ್, ಕಾಡಜ್ಜಿ ಕಾಳಾಚಾರ್. ಆರ್.ಜಕಣಾಚಾರ್, ಬೇತೂರ್ ವಿಜಯಕುಮಾರ್, ಸಮಾಜದ ಹಿರಿಯರಾದ ಕೆ.ಪಿ. ಪರಮೇಶ್ವರಾಚಾರ್, ಮಾಯಕೊಂಡದ ನಾಗರಾಜಾಚಾರ್, ಜಗನ್ನಾಥಾಚಾರ್ ಮತ್ತು ಸಮಾಜಬಾಂಧವರು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
































