ಸಂಬಳ ಕೊಡಲು ಸ್ವಂತ ಮನೆಯನ್ನೇ ಅಡವಿಟ್ಟ ಬೈಜುಸ್​ ಸಂಸ್ಥಾಪಕ!

ಬೆಂಗಳೂರು: ಎಡ್ಟೆಕ್ ಮೇಜರ್ ಬೈಜುಸ್‌ನ ಸಂಸ್ಥಾಪಕರಾದ ಬೈಜು ರವೀಂದ್ರನ್, ಕಂಪನಿಯು ಹಣದ ಕೊರತೆಯನ್ನು ಎದುರಿಸುತ್ತಿದ್ದನ್ನು ಗಮನಿಸಿ, ತಮ್ಮ ಉದ್ಯೋಗಿಗಳಿಗೆ ತಿಂಗಳ ಸಂಬಳವನ್ನು ಪಾವತಿಸಲು ತಮ್ಮದೇ ಸ್ವಂತ ಮನೆ ಹಾಗೂ ಕುಟುಂಬದವರ ಒಡೆತನದ ಮನೆಗಳನ್ನು ಅಡ ಇಟ್ಟಿರುವ ಸುದ್ದಿ ಸದ್ಯ ಅನೇಕರನ್ನು ಭಾರೀ ಅಚ್ಚರಿಗೆ ದೂಡಿದೆ.

ಬ್ಲೂಮ್‌ಬರ್ಗ್‌ನ ವರದಿಯ ಪ್ರಕಾರ, ಬೆಂಗಳೂರಿನಲ್ಲಿ ರವೀಂದ್ರನ್ ಅವರ ಕುಟುಂಬದ ಒಡೆತನದ ಎರಡು ಮನೆಗಳು ಮತ್ತು ನಗರದ ಎಪ್ಸಿಲಾನ್‌ನಲ್ಲಿರುವ ಅವರ ನಿರ್ಮಾಣ ಹಂತದ ವಿಲ್ಲಾವನ್ನು 12 ಡಾಲರ್ ಮಿಲಿಯನ್​ಗೆ ಅಡವಿಟ್ಟು ಅದರ ಮೇಲಾಧಾರವಾಗಿ ಬರುವ ಹಣವನ್ನು ತಮ್ಮ ಬೈಜು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ 15,000 ಉದ್ಯೋಗಿಗಳಿಗೆ ಸಂಬಳ ನೀಡಲು ಬಳಸಿಕೊಂಡಿದ್ದಾರೆ ಎನ್ನಲಾಗಿದೆ. ಹಲವು ದಿನಗಳಿಂದ ಬೈಜು ಸಂಸ್ಥೆ, ಥಿಂಕ್ & ಲರ್ನ್ ಪ್ರೈವೇಟ್ ಲಿಮಿಟೆಡ್. ಎಡ್ಟೆಕ್ ಕಂಪನಿಯು ಆರ್ಥಿಕ ಮುಗ್ಗಟ್ಟು ಸೇರಿದಂತೆ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದೆ. ರವೀಂದ್ರನ್ ಅವರು ತಮ್ಮ ಎಲ್ಲಾ ಷೇರುಗಳನ್ನು ಮಾತೃ ಸಂಸ್ಥೆಯಲ್ಲಿ ಅಡವಿಟ್ಟು, ಸುಮಾರು 400 ಮಿಲಿಯನ್ ಡಾಲರ್ ಹಣವನ್ನು ಪಡೆಯಲು ಮುಂದಾಗಿದ್ದಾರೆ. ಇದಲ್ಲದೆ ಅವರು ಕಳೆದೆರಡು ವರ್ಷಗಳಲ್ಲಿ ಷೇರು ಮಾರಾಟದ ಮೂಲಕ ಸಂಗ್ರಹಿಸಿದ 800 ಮಿಲಿಯನ್ ಡಾಲರ್‌ ಹಣವನ್ನೂ ಕಂಪನಿಗೆ ಹೂಡಿಕೆ ಮಾಡಿದ್ದಾರೆ. ಈ ಎಲ್ಲಾ ಕಾರಣಗಳಿಂದ ಅವರು ಭಾರೀ ನಗದು ಕೊರತೆ ಎದುರಿಸುತ್ತಿದ್ದಾರೆ.

ಕಳೆದ ವರ್ಷ ಕಂಪನಿಯು ಹಣವನ್ನು ಉಳಿಸಲು 2,500 ಉದ್ಯೋಗಿಗಳನ್ನು ವಜಾಗೊಳಿಸಿದಾಗ ಬೈಜುಸ್‌ಗೆ ಹಲವು ಸವಾಲುಗಳು ಎದುರಾದವು. ಈ ವರ್ಷದ ಆರಂಭದಲ್ಲಿ, ಎಡ್-ಟೆಕ್ ಕಂಪನಿಯು ಸುಮಾರು 1,000 ಉದ್ಯೋಗಿಗಳನ್ನು ವಜಾಗೊಳಿಸಿತು ಮತ್ತು ಇತರ ಉದ್ಯೋಗಿಗಳನ್ನು ಸ್ವಯಂಪ್ರೇರಣೆಯಿಂದ ರಾಜೀನಾಮೆ ನೀಡುವಂತೆ ಕೇಳಿಕೊಂಡಿತು ಎಂದು ವರದಿ ತಿಳಿಸಿದೆ.

Advertisement

ಮತ್ತೊಂದು ವರದಿ ಪ್ರಕಾರ, ಬೈಜುಸ್ ಎಂಟ್ರಿಯಾಗುತ್ತಿದ್ದ ಉದ್ಯೋಗಿಗಳಿಗೆ ಆಫರ್ ಲೆಟರ್‌ಗಳನ್ನು ಆರು ತಿಂಗಳವರೆಗೆ ಮುಂದೂಡಿದೆ. ಇನ್ನು ಕೆಲವರಿಗೆ ತಮ್ಮ ಸೇರ್ಪಡೆಯನ್ನು ಜನವರಿ 2024 ರವರೆಗೆ ವಿಳಂಬಗೊಳಿಸಲಾಗಿದೆ ಎಂದು ತಿಳಿಸಿದೆ. ನವೆಂಬರ್ 21 ರಂದು, ಜಾರಿ ನಿರ್ದೇಶನಾಲಯವು (ED) ರವೀಂದರನ್ ಮತ್ತು ಅವರ ಕಂಪನಿ ಥಿಂಕ್ & ಲರ್ನ್ ಪ್ರೈವೇಟ್ ಲಿಮಿಟೆಡ್ಗೆ ಸಂಬಂಧಿಸಿದ ಪ್ರಕರಣದಲ್ಲಿ ಬೆಂಗಳೂರಿನ ಮೂರು ಸ್ಥಳಗಳಲ್ಲಿ ಶೋಧದ ಬಳಿಕ ಬೈಜು 9,000 ಕೋಟಿ ರೂಪಾಯಿ ಮೊತ್ತದ ವಿದೇಶಿ ವಿನಿಮಯ ಉಲ್ಲಂಘನೆಯನ್ನು ಪತ್ತೆ ಹಚ್ಚಿದೆ. ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ (FEMA) ಮೇ. ಇದನ್ನು ಫೆಮಾಗೆ ಲಿಂಕ್ ಮಾಡುವ ವರದಿಗಳನ್ನು ಬೈಜು ನಿರಾಕರಿಸಿತ್ತು ಎಂಬುದನ್ನು ವರದಿ ಉಲ್ಲೇಖಿಸಿದೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement