ಚಿತ್ರದುರ್ಗ: ದೇಶದಲ್ಲಿ ಸಂವಿಧಾನ ಎಷ್ಟು ಮುಖ್ಯವೂ ಅಷ್ಟೇ ಪ್ರಮಾಣದಲ್ಲಿ ರಾಮಾಯಣ ಮತ್ತು ಮಹಾಭಾರತ ನಮ್ಮ ಬಹು ಸಂಖ್ಯಾತ ಹಿಂದುಗಳಿಗೆ ಅವಶ್ಯ ಜೀವನ ಪದ್ದತಿಯಾಗಿದೆ ಎಂದು ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವರಾದ ಎ.ನಾರಾಯಣಸ್ವಾಮಿ ತಿಳಿಸಿದರು.
ಚಿತ್ರದುರ್ಗ ನಗರದಿಂದ ಆಯೋಧ್ಯಗೆ ಹೋಗುವ ರಾಮ ಭಕ್ತಾಧಿಗಳಿಗೆ ರೈಲ್ವೆ ನಿಲ್ದಾಣದಲ್ಲಿ ಹಮ್ಮಿಕೊಂಡಿದ್ದ ಬಿಳ್ಕೋಡುಗೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಸಚಿವರು, ಕೇಂದ್ರ ಸರ್ಕಾರ ನರೇಂದ್ರ ಮೋದಿಯವರ ಆಪೇಕ್ಷೆಯಂತೆ ಆಯೋಧ್ಯಯ ರಾಮ ಮಂದಿರದಲ್ಲಿ ರಾಮನ ದರ್ಶನ ಭಾಗ್ಯವನ್ನು ಕರುಣಿಸಿದ್ದಾರೆ. ಕರ್ನಾಟಕದಿಂದಿ ೩೫ ಸಾವಿರ ಮಂದಿಯನ್ನು ರಾಮನ ದರ್ಶನಕ್ಕೆ ಕಳುಹಿಸಲಾಗುತ್ತಿದೆ. ದೇಶದ ಅನೇಕ ಕ್ಯಾಬಿನೆಟ್ ಸಚಿವರುಗಳಿಗೆ ರಾಮನ ದರ್ಶನ ಸಿಕ್ಕಿಲ್ಲ ಆದರೆ ಅತನ ಭಕ್ತರಾದ ನಿಮಗೆ ರಾಮನ ದರ್ಶನ ಮಾಡುವ ಭಾಗ್ಯ ಬಂದಿದೆ. ಚಿತ್ರದುರ್ಗದಿಂದ ಹೊಗುತ್ತಿರುವ ೪೧೫ ರಾಮ ಭಕ್ತಾಧಿಗಳಿಗೆ ರಾಮನ ದರ್ಶನವಾಗುತ್ತದೆ. ರಾಮಮಂದಿರ ನಿರ್ಮಾಣಕ್ಕಾಗಿ ಅನೇಕರು ಹೋರಾಟವನ್ನು ಮಾಡಿದ್ದಾರೆ. ದೇಶದಲ್ಲಿ ಹಲವಾರು ಜನತೆ ತಮ್ಮ ಪ್ರಾಣವನ್ನು ನೀಡಿದ್ದಾರೆ. ರಾಮಂದಿರ ಕಾಶಿ ಮತ್ತು ಮಧುರ ಈ ದೇಶದ ಬಹಸಂಖ್ಯಾತರ ಅಸ್ಮಿತೆ, ಕೋಟ್ಯಾಂತರ ಜನತೆ ಕನಸು ರಾಮ ರಾಜ್ಯವನ್ನು ನಿರ್ಮಾಣ ಮಾಡಬೇಕು, ರಾಮ ರಾಜ್ಯದ ಕನಸು ನನಸಾಗಬೇಕಾದರೆ ರಾಮಮಂದಿರ ನಿರ್ಮಾಣವಾಗಬೇಕು ಎಂಬುದು ಮೋದಿಯವರ ಕನಸಾಗಿತ್ತು ಎಂದರು.
ವೀಧಾನ ಪರಿಷತ್ ಸದಸ್ಯರಾದ ಕೆ.ಎಸ್. ನವೀನ್ , ಮಾಜಿ ಶಾಸಕರಾದ ಜಿ.ಎಚ್. ಭಾಗವಹಿಸಿದ್ದರು, ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ತಿಪ್ಪೇಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷರಾದ ಎ.ಮುರಳಿ, ರೈಲ್ವೆ ಇಲಾಖೆಯ ಡಿಆರ್ಎಂ. ಶಿಲ್ಪ ಆಗರವಾಲ್, ರವಿಚಂದನ್, ವಿಜಯೇಂದ್ರ, ಮೋಹನ್, ಶಿವಣ್ಣಚಾರ್, ನಾಗರಾಜ್ ಬೇದ್ರೇ, ದಗ್ಗೆ ಶಿವಪ್ರಕಾಶ್ ಸಂಪತ್ ಸೇರಿದಂತೆ ಇತರರು ಭಾಗವಹಿಸಿದ್ದರು.