ನವದೆಹಲಿ: ಲೋಕಸಭೆಯಲ್ಲಿ ಕಲಾಪ ನಡೆಯುತ್ತಿದ್ದ ಸಂದರ್ಭದಲ್ಲಿ ವೀಕ್ಷಕರ ಗ್ಯಾಲರಿಯಿಂದ ಸದನಕ್ಕೆ ನುಗ್ಗಿ ದುರ್ಷ್ಕರ್ಮಿಗಳು ಟಿಯರ್ ಗ್ಯಾಸ್ ಸಿಡಿದ ವೇಳೆ ಇವರನ್ನು ಸೆರೆಹಿಡಿದವರು ನಾಲ್ವರು ಧೈರ್ಯಶಾಲಿ ಸಂಸದರು.
ಆರೋಪಿಗಳಾದ ಸಾಗರ್ ಶರ್ಮಾ ಮತ್ತು ಮನೋರಂಜನ್ ಮತ್ತು ಇತರೆ ಇಬ್ಬರನ್ನು ಗುಪ್ತಚರ ಅಧಿಕಾರಿಗಳ ತಂಡ ವಶಕ್ಕೆ ಪಡೆದಿದ್ದು, ತೀವ್ರ ವಿಚಾರಣೆ ನಡೆಸಿದೆ. ಸಂಸತ್ತಿನಲ್ಲಿ ಶೂನ್ಯ ವೇಳೆಯಲ್ಲಿ ಸಂದರ್ಶಕರ ಗ್ಯಾಲರಿಯಿಂದ ಮಹಡಿಗೆ ಹಾರಿ ಕಲಾಪಕ್ಕೆ ಅಡ್ಡಿಪಡಿಸಿದ್ದರು.
ಏಕಾಏಕಿ ಏನಾಗುತ್ತಿದೆ ಎಂದು ಅರಿಯದೇ ಇದ್ದಾಗ ಹೆಚ್ಚಿನ ರಾಜಕಾರಣಿಗಳು ಸದನದಿಂದ ಓಡಿ ಹೋಗಿದ್ದಾರೆ. ಸದನದೊಳಗೆ ನುಗ್ಗಿದ ಆ ಇಬ್ಬರು ವ್ಯಕ್ತಿಗಳು ಘೋಷಣೆಗಳನ್ನು ಕೂಗುತ್ತಿದ್ದು, ಸ್ಪೀಕರ್ ಕುರ್ಚಿಯತ್ತ ಓಡಲು ಪ್ರಯತ್ನಿಸಿದ್ದಾರೆ.
ಆದರೆ ಈ ದಾಳಿ ನಡೆಯುವ ಸಂದರ್ಭದಲ್ಲಿ ಎಸ್‌ಎಸ್‌ಬಿಟಿ ಸಂಸದ ಅರವಿಂದ್ ಸಾವಂತ್, ಕಾಂಗ್ರೆಸ್ ಸಂಸದ ಗುರ್ಜೀತ್ ಸಿಂಗ್ ಔಜ್ಲಾ, ಬಿಜೆಪಿ ಸಂಸದ ಆರ್‌ಕೆ ಸಿಂಗ್ ಪಟೇಲ್ ಮತ್ತು ಆರ್‌ಎಲ್‌ಪಿ ಸಂಸದ ಹನುಮಾನ್ ಬೇನಿವಾಲ್ ಇವರು ಬಹಳ ಧೈರ್ಯಶಾಲಿಯಾಲಿ ದಾಳಿಕೋರರನ್ನು ಹಿಡಿದು ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದರು.