ನವದೆಹಲಿ: ಲೋಕಸಭೆಯಲ್ಲಿ ಸಂಭವಿಸಿದ ಭದ್ರತಾ ಲೋಪದ ಹಿನ್ನೆಲೆಯಲ್ಲಿ ಸಂಸತ್ತಿನ ಭದ್ರತಾ ವ್ಯವಸ್ಥೆಯನ್ನು ಹೆಚ್ಚಿಸುವ ದೃಷ್ಟಿಯಿಂದ ಕೊಂಚ ಬದಲಾವಣೆ ಮಾಡಲಾಗಿದ್ದು, , ಪ್ರವೇಶದ್ವಾರದಲ್ಲಿ ಬಾಡಿ ಸ್ಕ್ಯಾನರ್ ಅಳವಡಿಸಲಾಗುತ್ತದೆ ಎಂದು ಸ್ಪೀಕರ್ ಓಂ ಬಿರ್ಲಾ ತಿಳಿಸಿದ್ದಾರೆ.
ಸರ್ವಪಕ್ಷಗಳ ಸಭೆ ನಡೆಸಿದ ಸ್ಪೀಕರ್ ಓಂ ಬಿರ್ಲಾ ಭದ್ರತಾ ಪರಿಶೀಲನೆ ನಡೆಸುವಂತೆ ಗೃಹ ಸಚಿವಾಲಯದ ವಿಶೇಷ ಕಾರ್ಯದರ್ಶಿಗೆ ಪತ್ರ ಬರೆದಿರುವುದಾಗಿ ಓಂ ಬಿರ್ಲಾ ಪಕ್ಷದ ನಾಯಕರಿಗೆ ತಿಳಿಸಿದ್ದಾರೆ.
ಸಂಸತ್ತಿನ ಎಲ್ಲಾ ವಿವಿಧ ಗೇಟ್‌ಗಳಲ್ಲಿ ಪ್ರವೇಶ ವ್ಯವಸ್ಥೆಯನ್ನು ನವೀಕರಿಸಲಾಗುವುದು ಮತ್ತು ಪೂರ್ಣ ದೇಹದ ಸ್ಕ್ಯಾನರ್‌ಗಳನ್ನು ಅಳವಡಿಸಲಾಗುವುದು ಎಂದು ಲೋಕಸಭೆ ಸ್ಪೀಕರ್ ಹೇಳಿದ್ದಾರೆ ಎಂದು ತಿಳಿದುಬಂದಿದೆ.
ಸಂಸತ್ತಿನ ಪ್ರವೇಶಕ್ಕಾಗಿ ನಾಲ್ಕು ಹಂತದ ಭದ್ರತಾ ತಪಾಸಣೆ ಜಾರಿಯಲ್ಲಿದೆ. ಸಿಆರ್‌ಪಿಎಫ್ ಹೊರ ವರ್ತುಲದ ಭದ್ರತೆಯ ಉಸ್ತುವಾರಿ ವಹಿಸಿದ್ದರೆ, ವಿಶೇಷ ಭದ್ರತಾ ತಂಡವು ಮುಖ್ಯ ಕಟ್ಟಡದ ಉಸ್ತುವಾರಿ ವಹಿಸಿಕೊಂಡಿದೆ. ಇದಲ್ಲದೆ, ಎರಡೂ ಸದನಗಳು ತಮ್ಮದೇ ಆದ ಭದ್ರತಾ ನಿರ್ದೇಶಕರನ್ನು ಹೊಂದಿವೆ.