ಪಾಟ್ನಾ : ಬಿಹಾರದ ಪುರ್ನಿಯಾದ ಸ್ವತಂತ್ರ ಪಕ್ಷದ ಸಂಸದ ಪಪ್ಪು ಯಾದವ್‌ಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಕೊಲೆ ಬೆದರಿಕೆ ಸಂದೇಶ ಕಳುಹಿಸಿದೆ.
ಬಾಬಾ ಸಿದ್ದಿಕಿ ಹತ್ಯೆ ಬಳಿಕ ಗ್ಯಾಂಗಸ್ಟರ್ ಲಾರೆನ್ಸ್ ಬಿಷ್ಣೋಯ್‌ನಂತಹ ಕ್ರಿಮಿನಲ್‌ನ ಜಾಲವನ್ನು 24 ಗಂಟೆಗಳ ಒಳಗೆ ಕೆಡವುದಾಗಿ ಸಂಸದ ಪಪ್ಪು ಯಾದವ್ ಸವಾಲು ಹಾಕಿದ್ದರು. ಸವಾಲ್ ಹಾಕಿದ ಬೆನ್ನಲ್ಲೇ ಈ ಬೆದರಿಕೆ ಸಂದೇಶ ಬಂದಿದೆ.
ಸರ್ಕಾರದ ಬೆಂಬಲಿತ ಮಾಜಿ ಸಚಿವರ ಹತ್ಯೆಯು ಮಹಾರಾಷ್ಟ್ರದಲ್ಲಿ ಸಂಪೂರ್ಣ ಕಾನೂನು ಸುವ್ಯವಸ್ಥೆ ಹಾಳಾಗಿರುವುದು ಎತ್ತಿ ತೋರಿಸುತ್ತದೆ. ಬಿಹಾರದ ಮಗ ಬಾಬಾ ಸಿದ್ದಿಕ್ ಹತ್ಯೆ ಇದೊಂದು ದುರಂತವಾಗಿದೆ. ಬಿಜೆಪಿ ನೇತೃತ್ವದ ಸರ್ಕಾರವು ತನ್ನ ಪ್ರಭಾವಿ ನಾಯಕರನ್ನು ರಕ್ಷಿಸಲು ಸಾಧ್ಯವಾಗದಿದ್ದರೆ, ಸಾಮಾನ್ಯ ಜನರಿನ್ನು ರಕ್ಷಿಸುವ ಭರವಸೆ ಇದೆಯಾ? ನಾನು ಈ ಕ್ರಿಮಿನಲ್ ಜಾಲವನ್ನು 24 ಗಂಟೆಗಳ ಒಳಗೆ ಕೆಡವುತ್ತೇವೆ ಎಂದು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ವಿರುದ್ಧ ಮಾತನಾಡಿದ್ದ ಪಪ್ಪು ಯಾದವ್ ಮಾತನಾಡಿದ್ದರು.
ಈ ಹೇಳಿಕೆ ಬೆನ್ನಲ್ಲೇ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಆಡಿಯೋ ಸಂದೇಶದ ಮೂಲಕ ವ್ಯಾಟ್ಸಪ್‌ಗೆ ಬೆದರಿಕೆ ಬಂದಿದೆ. ನಿಮ್ಮ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ನಟ ಸಲ್ಮಾನ್ ಖಾನ್‌ನ ಸಮಸ್ಯೆಗಳಿಂದ ದೂರವಿರಬೇಕು, ಇದನ್ನು ನಿರ್ಲಕ್ಷ್ಯಿಸಿದರೆ ಕೊಲ್ಲುವುದಾಗಿ ಆಡಿಯೋದಲ್ಲಿ ಬೆದರಿಕೆಯೊಡ್ಡಲಾಗಿದೆ.