ಬೆಂಗಳೂರು: ಸಕ್ಕರೆ ಖಾಯಿಲೆ ಇದೆ ಸಿಹಿ ತಿನ್ನಂಗಿಲ್ಲ ಅಂತ ಯೋಚನೆಗೆ ನಂದಿನಿಯಿಂದ ಸಕ್ಕರೆರಹಿತ ಸಿಹಿತಿಂಡಿಗಳು ಮಾರುಕಟ್ಟೆಗೆ ಬಂದಿದೆ.
KMFನ ನಂದಿನಿ ಬ್ರಾಂಡ್ನಡಿ ಮೊದಲ ಬಾರಿಗೆ ಸಕ್ಕರೆರಹಿತ ಸಿಹಿತಿಂಡಿಗಳನ್ನು ಬಿಡುಗಡೆ ಮಾಡಲಾಗಿದ್ದು, ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಆರೋಗ್ಯ ಕಾಳಜಿ ಹೆಚ್ಚುತ್ತಿರುವ ಈ ದಿನಗಳಲ್ಲಿ, ಗ್ರಾಹಕರ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ‘ನಂದಿನಿ ಶುಗರ್ ಫ್ರೀ’ ಸಿಹಿತಿಂಡಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು KMF ವ್ಯವಸ್ಥಾಪಕ ನಿರ್ದೇಶಕ ಬಿ. ಶಿವಸ್ವಾಮಿ ತಿಳಿಸಿದ್ದಾರೆ. ಸಕ್ಕರೆರಹಿತ ಸಿಹಿತಿಂಡಿಗಳು ಮಧುಮೇಹಿಗಳಿಗೆ ಸುರಕ್ಷಿತವಾಗಿದ್ದು, ಎಲ್ಲರಿಗೂ ರುಚಿಕರ ಆಯ್ಕೆಯಾಗಲಿದೆ ಎಂದಿದ್ದಾರೆ.