ನವದೆಹಲಿ: ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಅವರ ಡೀಫ್ ಫೇಕ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ಸಚಿನ್ ಕಳವಳ ವ್ಯಕ್ತಪಡಿಸಿದ್ದಾರೆ. ಆನ್‌ಲೈನ್ ಗೇಮಿಂಗ್ ಆ‍್ಯಪ್‌ವೊಂದನ್ನು ಸಚಿನ್ ಅವರು ಪ್ರಚಾರ ಮಾಡುತ್ತಿರುವ ವಿಡಿಯೊವನ್ನು ಡೀಪ್‌ಫೇಕ್ ಮಾಡಿ ಹರಿಬಿಡಲಾಗಿದೆ.
ವಿಡಿಯೊವನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿರುವ ಸಚಿನ್ ಅವರು, ‘ಈ ವಿಡಿಯೊ ನಕಲಿ. ತಂತ್ರಜ್ಞಾನದ ದುರ್ಬಳಕೆಯಾಗುತ್ತಿರುವುದನ್ನು ನೋಡಿದರೆ ಬೇಸರವಾಗುತ್ತದೆ. ಈ ರೀತಿಯ ವಿಡಿಯೊಗಳು, ಜಾಹೀರಾತುಗಳು ಮತ್ತು ಅಪ್ಲಿಕೇಶನ್‌ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ರಿಪೋರ್ಟ್ ಮಾಡಲು ಎಲ್ಲರಿಗೂ ವಿನಂತಿಸಿ. ಸಾಮಾಜಿಕ ಮಾಧ್ಯಮ ವೇದಿಕೆಗಳು ಎಚ್ಚರಿಕೆ ಮತ್ತು ದೂರುಗಳಿಗೆ ಸ್ಪಂದಿಸುವ ಅಗತ್ಯವಿದೆ. ತಪ್ಪು ಮಾಹಿತಿ ಮತ್ತು ಡೀಪ್‌ಫೇಕ್‌ಗಳ ಹರಡುವಿಕೆಯನ್ನು ನಿಲ್ಲಿಸಲು ತ್ವರಿತ ಕ್ರಮ ತೆಗೆದುಕೊಳ್ಳುವ ಅಗತ್ಯವಿದೆ’ ಎಂದು ಬರೆದುಕೊಂಡಿದ್ದಾರೆ.