ಹ್ಯಾರೋಡ್ಸ್ ಮಾಲೀಕ ಈಜೆಪ್ಟ್ ನ ಬಿಲಿಯನೇರ್ ದಿವಂಗತ ಮೊಹಮ್ಮದ್ ಅಲ್-ಫಯೀದ್ ವಿರುದ್ಧ ಇದ್ದಂತಹ ಲೈಂಗಿಕ ದೌರ್ಜನ್ಯದ ಆರೋಪಗಳ ಕುರಿತು ಲಂಡನ್‌ನ ಮೆಟ್ರೋಪಾಲಿಟನ್ ಪೊಲೀಸರು ಶಾಕಿಂಗ್ ಮಾಹಿತಿಯೊಂದನ್ನು ನೀಡಿದ್ದಾರೆ.ಈತ ಸಾಯುವವರೆಗೂ ಸುಮಾರು 90 ಹೆಣ್ಣು ಮಕ್ಕಳನ್ನು ರೇಪ್ ಮಾಡಿದ್ದಾನಂತೆ.
400 ಕ್ಕೂ ಹೆಚ್ಚು ಮಹಿಳೆಯರು ಈತನಿಂದ ಲೈಂಗಿಕ ಶೋಷಣೆಗೆ ಒಳಗಾಗಿರುವುದಾಗಿ ಒಪ್ಪಿಕೊಂಡು ಮುಂದೆ ಬರುತ್ತಿದ್ದಾರೆ.ಇಷ್ಟೆಲ್ಲಾ ಕಾಮ ಪಿಶಾಚಿಯಾಗಿದ್ದ ಈತನನ್ನು ಪೊಲೀಸರು ಯಾಕೆ ಹಿಡಿಯಲಿಲ್ಲ ಎನ್ನುವುದು ಪ್ರಶ್ನೆಯಾಗಿದೆ. ಈ ಕೃತ್ಯದಲ್ಲಿ ಭಾಗಿಯಾದ ಪೊಲೀಸರ ವಿರುದ್ಧ ಕ್ರಮಕ್ಕೂ ಒತ್ತಾಯ ಕೇಳಿಬರುತ್ತಿದೆ. ಆತ ಸತ್ತ ನಂತರ ಕಾಮ ಕ್ರೀಡೆಗಳು ಒಂದೊಂದೆ ಹೊರ ಬರುತ್ತಿದ್ದು ಶಿಕ್ಷೆಯಿಂದ ಮೊಹಮ್ಮದ್ ತಪ್ಪಿಸಿಕೊಂಡು ನೇರ 94ನೇ ವಯಸ್ಸಿನಲ್ಲಿ ನರಕಕ್ಕೇ ಹೋಗಿದ್ದಾನೆ. ಅಲ್-ಫಯೆದ್‌ಗೆ ಸಹಾಯ ಮಾಡಿದ್ದ ಐವರು ಶಂಕಿತ ವ್ಯಕ್ತಿಗಳನ್ನು ತನಿಖೆ ಮಾಡಲಾಗುತ್ತಿದೆ.