ಸದೃಢ ಹಾಗೂ  ಸಮಸ್ಥಿತಿಯ ಆರೋಗ್ಯಕ ಕಾಪಿಟ್ಟುಕೊಳ್ಳುವುದು ಬಹಳ ಮುಖ್ಯ: ಎಸ್‌.ವಿ .ಗುರುಮೂರ್ತಿ.!

WhatsApp
Telegram
Facebook
Twitter
LinkedIn

 

ಚಿತ್ರದುರ್ಗ:  ಸದೃಢ ಹಾಗೂ  ಸಮಸ್ಥಿತಿಯ ಆರೋಗ್ಯಕ ಕಾಪಿಟ್ಟುಕೊಳ್ಳುವುದು ಇಂದು ಸವಾಲಿನ ಸಂಗತಿ.ಇದನ್ನರಿತು. ತಮ್ಮ ಜೀವನದ ಅರ್ಧ ಭಾಗವನ್ನು ಈ ಭಾಗದ ಸಾರ್ವಜನಿಕರಿಗಾಗಿ ಯೋಗವನ್ನು ಪರಿಚಯಿಸಿ ,ಅದನ್ನ ತಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಪರಿಗಣಿಸಿದರೆ ರೋಗಗಳು ದೇಹಕ್ಕೆ ಅಷ್ಟು ಸುಲಭವಾಗಿ ಅಂಟುವುದಿಲ್ಲ ಎನ್ನುವುದನ್ನ ಮನವರಿಕೆ ಮಾಡುತ್ತಾ  ಬಂದಿರುವ  ಯೋಗಾಚಾರ್ಯ ಎಲ್.ಎಸ್. ಚಿನ್ಮಯಾಂದ ಅವರ ಕೊಡುಗೆ ಅನನ್ಯವಾದದು ಎಂದು ಶಾರದಾ  ಬ್ರಾಸ್ ಬ್ಯಾಂಡ್  ನ  ಸಂಸ್ಥಾಪಕರು, ಬಸವೇಶ್ವರ ಪುನರ್ಜೋತಿ’ ಐ’  ಬ್ಯಾಂಕ್ ನ ನಿರ್ದೇಶಕರು ,ಹತ್ತಾರು ಸಂಘ-ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಎಸ್‌.ವಿ .ಗುರುಮೂರ್ತಿ ಅವರು ಸದಭಿಪ್ರಾಯ ವ್ಯಕ್ತಪಡಿಸಿದರು.

ಅವರು ಇಂದು ಮುಂಜಾನೆ ನಗರದ ರೋಟರಿ ಬಾಲ ಭವನದಲ್ಲಿ ಕಳೆದ ಎರಡೂವರೆ ಮೂರು ದಶಕಗಳಿಂದ ಯೋಗಭ್ಯಾಸ ಮಾಡಿಸುತ್ತಾ ಅದರೊಂದಿಗೆ ಸಾಮಾಜಿಕ ಕೆಲಸಗಳನ್ನು ಹಮ್ಮಿಕೊಂಡು ಜಿಲ್ಲೆಯಲ್ಲಿ ಹೆಸರುವಾಸಿಯಾಗಿರುವ ಯೋಗಾಚಾರ್ಯ ಚಿನ್ಮಯಾನಂದ ಅವರ ಅರವತ್ತನೆ ವರ್ಷದ ಜನ್ಮದಿನ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮಿಗಳ ತರುವಾಯ ಯೋಗಾಸನ ಕ್ಷೇತ್ರದಲ್ಲಿ ಮತ್ತೆ ಆ ಹೆಸರನ್ನ ಉಳಿಸುವ ನಿಟ್ಟಿನಲ್ಲಿ ಚಿನ್ಮಯಾನಂದ ಅವರು ಶ್ರೀಗಳವರ ಶಿಷ್ಯರಾಗಿ ಕೆಲಸ ಮಾಡುತ್ತಿರುವುದು ಅಭಿನಂದನಾರ್ಹ… ಅದರೊಂದಿಗೆ  ಸಮಾಜಕ್ಕೆ ಅಗತ್ಯ ಎನಿಸುವ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ.  ಹಾಗೆಯೇ ಇಂದು ಜೋಗಿಮಟ್ಟಿ ರಸ್ತೆಯ ಹಿಂದೂ ರುದ್ರಭೂಮಿಯಲ್ಲಿ  ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅದು ಅವರಿಗೆ ಇಷ್ಟವಾದ ಕೆಲಸವೂ ಹೌದು ಎಂದು ಆಶಿಸಿದರು.

ಮತ್ತೋರ್ವ ಅತಿಥಿ ರೋಟೇರಿಯನ್ ಟಿ. ವೀರಭದ್ರಸ್ವಾಮಿ ಅವರು ಮಾತನಾಡಿ ಶಿಸ್ತು, ಸಮಯಪಾಲನೆ ಮತ್ತು ಬದ್ಧತೆಗೆ ಮತ್ತೊಂದು ಹೆಸರು ಚಿನ್ಮಯಾನಂದ ಅವರು.ನಾವು ಅವರಿಂದ ಕಲಿಯುವುದು ಬಹಳವೇ ಇದೆ. ನಮ್ಮ ಆರೋಗ್ಯ ಸದೃಢವಾಗಿರಿಸಿಕೊಳ್ಳಲು ಯೋಗ ತರಬೇತಿ ಅವರಿಂದ ಪಡೆಯುವ ಮೂಲಕ ಅವರನ್ನ ಸದ್ಬಳಕೆ ಮಾಡಿಕೊಳ್ಳುವ ಪ್ರಯತ್ನ ಮಾಡೋಣ ಎಂದು ಸಲಹೆ ಮಾಡಿದರು.

ಇನ್ನೋರ್ವ ಅತಿಥಿಗಳಾಗಿದ್ದ ನಿವೃತ್ತ ಮುಖ್ಯ ಶಿಕ್ಷಕರಾದ  ಹುರುಳಿ ಎಂ. ಬಸವರಾಜ್  ಮಾತನಾಡಿ  ತಾಯಿ ತಂದೆ ಹೊರತುಪಡಿಸಿದರೆ ನಂತರದ್ದು ಗುರುವಿನ ಸ್ಥಾನ.ಅವರು ನಮ್ಮ ಬದುಕಿನಲ್ಲಿ ಶ್ರೇಷ್ಠ ಜವಾಬ್ದಾರಿಯನ್ನು ಅವರು ನಿರ್ವಹಿಸುತ್ತಿರೆ.ಚಿನ್ಮಯಾನಂದ ಅವರು ಯೋಗದ ಬಗ್ಗೆ  ಪ್ರಾಮಾಣಿಕವಾಗಿ ಜನರಿಗೆ ತಿಳಿಸುತ್ತಾ, ಜನ ಆರೋಗ್ಯದಿಂದ ಇರುವ ಬಗ್ಗೆ ಅವರು ಸೇವೆ ಸಲ್ಲಿಸುತ್ತಿದ್ದಾರೆ. ಹಾಗೆಯೇ  ಸರಳ, ಸದುವಿನಯದೊಂದಿಗೆ ತಮ್ಮ ಹೆಸರಿಗೆ ತಕ್ಕಂತೆ ಯೋಗದ ಮೂಲಕ ಆನಂದವನ್ನು ಹಂಚುವ ಕೆಲಸ ಮಾಡುತ್ತಿದ್ದಾರೆ ಚಿನ್ಮಯಾಂದ ಅವರು. ಜನಪರ , ಪರೋಕಾರದ ಕೆಲಸಗಳು ಅವರಿಂದ ನಡೆದಿವೆ. ಅವರನ್ನು ನಾವು ಅನುಸರಿಸುವುದು ಬಹಳವೇ ಇದೆ ಎಂದು ಅಭಿಪ್ರಾಯ ಪಟ್ಟರು.

ಯೋಗಾಭ್ಯಾಸಿಗಳಾದ ಮಮತಾ ಮಾತನಾಡಿ ಯೋಗ ತರಗತಿಗಳಲ್ಲಿ ಲಿಂಗ ತಾರತಮ್ಯ ಎಣಿಸದೆ, ನಮ್ಮ ಬೆನ್ನು ತಟ್ಟಿ ಕಠಿಣ ಅಭ್ಯಾಸಗಳನ್ನು ತಿದ್ದುತ್ತಾ, ಸುಲಲಿತ ರೀತಿಯಲ್ಲಿ ಮಾಡಿಸುತ್ತಾ  ಪ್ರೇರೇಪಿಸುತ್ತಾರೆ .ಅಂತಹವರು ನಮ್ಮೊಂದಿಗೆ ಇರುವುದೇ ಒಂದು ಸಂತಸದ ಸಂಗತಿ ಎಂದರು. ಮತ್ತೋರ್ವ ಅಭ್ಯಾಸಿಗಳಾದ ರೀನಾ ವೀರಭದ್ರಪ್ಪ ಮಾತನಾಡಿ ಯಾವುದೇ ಪ್ರತಿ ಫಲಾಪೇಕ್ಷೆ, ನಿರೀಕ್ಷೆ ಇಲ್ಲದೆ ಯೋಗವನ್ನು ಮಾರಾಟದ ಸರಕನ್ನಾಗಿಸದೆ ಅತ್ಯಂತ ಕಡಿಮೆ ದರವನ್ನು ಪಡೆದು ಯೋಗವನ್ನು ಕಲಿಸುವ, ಆ ಮೂಲಕ ಸದೃಢ  ದೇಹ ಮತ್ತು ಮನವನ್ನು  ಹೊಂದೋಣ ಎನ್ನುವ ಅವರ ಸಹೃದಯ ನಮಗೆ ಆನಂದ ತಂದಿದೆ. ಹಾಗೆಯೇ  ಸಮಾಜದ ಹಿತಕ್ಕಾಗಿ ಶ್ರಮಿಸುತ್ತಿದ್ದಾರೆ ಎಂದು ನುಡಿದರು.

ಈ ಸಂದರ್ಭದಲ್ಲಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ನಗರದ ವಿವಿಧ ಬಡಾವಣೆಗಳ ಯೋಗಾಸನ ತರಬೇತಿದಾರರು ಭಾಗವಹಿಸಿ ಶ್ರೀಯುತರಿಗೆ ಅಭಿನಂದನೆ ಸಲ್ಲಿಸಿ ,ಶುಭ ಹಾರೈಸಿದರು. ಕೋಕಿಲ ಎಂ .ಜೆ ಅವರು ಎಲ್ಲೋ ಹುಡುಕಿದೆ ಇಲ್ಲದ ದೇವರ ಎಂಬ ಕವನ ಗಾಯನೊಂದಿಗೆ ಪುಟ್ಟ, ಅರ್ಥಪೂರ್ಣ ಸಮಾರಂಭ ಆರಂಭವಾಯಿತು. ಯೋಗಾಭ್ಯಾಸಿ ಹಾಗೂ ಶಿಕ್ಷಕರು ಆಗಿರುವ ವಿಮಲಾ ಅವರು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.

ಇದಾದ ನಂತರ ನಗರದ ಜೋಗಿಮಟ್ಟಿ ರಸ್ತೆಯ ಪಕ್ಕದಲ್ಲಿರುವ  ಹಿಂದೂ ರುದ್ರಭೂಮಿಯಲ್ಲಿ ವಿವಿಧ ತಳಿಯ ಸಸಿಗಳನ್ನು ನೆಡಲಾಯಿತು.ಈ ಸಂದರ್ಭದಲ್ಲಿ  ಅಲ್ಲಿಯೂ ಸಹ ಜನಪರ ಕಾಳಜಿಯ ಅನೇಕರು ಹಾಗೂ ಚಿನ್ಮಯಾನಂದರ ಅಭಿಮಾನಿಗಳು  ಭಾಗವಹಿಸಿ ಸಮಾರಂಭವನ್ನು ಯಶಸ್ವಿಗೊಳಿಸಿದರು.

ಶ್ರೀಯುತ ಚಿನ್ಮಯಾಂದ ಅವರು ಕಳೆದ ಅಕ್ಟೋಬರ್ 6 ರಿಂದ 20ನೇ ತಾರೀಕಿನವರೆಗೂ ಅಂದರೆ ನಿನ್ನೆಯವರೆವಿಗೂ ತಮ್ಮ ಮನೆಯ ಮಹಡಿಯ ಮೇಲೆ ಸುಮಾರು 20ರಿಂದ 30 ಜನರಿಗೆ ವಿವಿಧ ವಸ್ತುಗಳನ್ನು ಬಳಸಿ ಯೋಗಾಸನ ಮಾಡುವ ಯೋಗಾಭ್ಯಾಸವನ್ನ ಉಚಿತವಾಗಿ ಮಾಡಿಸಿದ್ದನ್ನು ಸ್ಮರಿಸಬಹುದಾಗಿದೆ.

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon