ಜ್ಯೂಸ್ ಕುಡಿಯಲು ಹೋದರೆ ಹೆಚ್ಚಾಗಿ ಜನರು ಇಷ್ಟಪಡುವಂತಹ ಜ್ಯೂಸ್ ಎಂದರೆ ಅದು ಚಿಕ್ಕು ಅಥವಾ ಸಪೋಟ ಜ್ಯೂಸ್ ಎಂದು ಹೇಳಬಹುದು. ಯಾಕೆಂದರೆ ಈ ಹಣ್ಣು ತುಂಬಾ ರುಚಿಕರ ಹಾಗೂ ಸಿಹಿ ಹೊಂದಿರುವುದು. ಇದರಿಂದಾಗಿ ಹೆಚ್ಚಿನವರಿಗೆ ಇದು ಇಷ್ಟವಾಗುತ್ತದೆ. ಸಪೋಟ ಹಣ್ಣು ತ್ವಚೆಯ ಆರೋಗ್ಯ ಮತ್ತು ಸೌಂದರ್ಯ ವೃದ್ಧಿಗೆ ಸಹಕಾರಿ. ಇದರಲ್ಲಿರುವ ವಿಟಮಿನ್‌ಗಳು ಚರ್ಮವನ್ನು ಹೈಡ್ರೇಟ್ ಆಗಿಡುತ್ತದೆ.
ಸಪೋಟ ಹಣ್ಣಿಗೆ ಚಿಕ್ಕು ಎಂತಲೂ ಕರೆಯುತ್ತಾರೆ. ಚಿಕ್ಕು ಸೇವನೆಯಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಚಿಕ್ಕು ಹಣ್ಣಿನಲ್ಲಿರುವ ಕೆಲವು ಖನಿಜಾಂಶಗಳು, ಕ್ಯಾಲ್ಸಿಯಂ, ತಾಮ್ರ ಹಾಗೂ ಕಬ್ಬಿಣಾಂಶವು ಮೂಳೆಗಳನ್ನು ಬಲಪಡಿಸುತ್ತದೆ. ನಿಯಮಿತವಾಗಿ ಚಿಕ್ಕು ಹಣ್ಣು ಸೇವಿಸಿದರೆ ಮೂಳೆಗಳ ಆರೋಗ್ಯವು ವೃದ್ಧಿಯಾಗುತ್ತದೆ. ಇದು ಉರಿಯೂತವನ್ನು ಕಡಿಮೆ ಮಾಡುತ್ತದೆ ಹಾಗೂ ನೋವು ಮತ್ತು ಊತ ಚಿಕಿತ್ಸೆಗೆ ಇದು ಪರಿಣಾಮಕಾರಿ.
ಸಪೋಟ ಹಣ್ಣಿನಲ್ಲಿ ವಿಟಮಿನ್ C, A ಮತ್ತು ಕಬ್ಬಿನಾಂಶ, ಪೊಟಾಶಿಯಂ ಮತ್ತು ತಾಮ್ರವಿದೆ. ಆಂಟಿಆಕ್ಸಿಡೆಂಟ್, ಉರಿಯೂತ ಶಮನಕಾರಿ, ವೈರಲ್ ವಿರೋಧಿ, ಬ್ಯಾಕ್ಟೀರಿಯಾ ವಿರೋಧಿ ಮತ್ತು ನಂಜುನಿರೋಧಕ ಗುಣಗಳು ಕೂಡ ಇದರಲ್ಲಿವೆ.ಚಿಕ್ಕು ಹಣ್ಣು ಗ್ಯಾಸ್ಟ್ರಿಕ್ ಹಾಗೂ ಹೊಟ್ಟೆಯ ಸಮಸ್ಯೆಗಳನ್ನು ನಿವಾರಿಸುವುದು.ಇದರಲ್ಲಿ ನಾರಿನಾಂಶ ಅಧಿಕವಾಗಿದ್ದು, ಜೀರ್ಣಕ್ರಿಯೆಗೆ ಸಹಕಾರಿದೆ. ಇದು ಮಲಬದ್ಧತೆ ಇರುವವರಿಗೆ ತುಂಬಾ ಒಳ್ಳೆಯದು.
ಸಪೋಟ ಹಣ್ಣಿನಲ್ಲಿರುವ ಕ್ಯಾಲ್ಸಿಯಂ, ಪೋಸ್ಪರಸ್, ತಾಮ್ರ ಮತ್ತು ಕಬ್ಬಿನಾಂಶವು ಮೂಳೆಯನ್ನು ಬಲಗೊಳಿಸುವಲ್ಲಿ ಸಹಕಾರಿಯಾಗಿವೆ. ಚಿಕ್ಕು ಹಣ್ಣಿನಲ್ಲಿರುವ ಆಂಟಿಆಕ್ಸಿಡೆಂಟ್‍ಗಳು ಪ್ರತಿರೋಧಕ ಶಕ್ತಿಯನ್ನು ಬಲಿಷ್ಠವಾಗಿಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸಪೋಟ ಹಣ್ಣು ದೇಹದ ಶಕ್ತಿಯನ್ನು ವೃದ್ಧಿಸುತ್ತದೆ. ಚರ್ಮದ ಆರೋಗ್ಯ ವೃದ್ಧಿಸುವುದು ಮತ್ತು ದೀರ್ಘಕಾಲಿಕ ಕಾಯಿಲೆಗಳ ಅಪಾಯ ತಗ್ಗಿಸುವುದು. ಇದು ವೈರಸ್, ಬ್ಯಾಕ್ಟೀರಿಯಾಗಳಿಂದ ರಕ್ಷಣೆ ನೀಡುತ್ತದೆ.