ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರ ಹುದ್ದೆ: ಅರ್ಜಿ ಆಹ್ವಾನ

 

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯಲ್ಲಿ ಖಾಲಿ ಇರುವ ಬಿ.ಐ.ಇ.ಆರ್.ಟಿ ( ಪ್ರಾಥಮಿಕ-ಹಂತ 1 ರಿಂದ 5ನೇ ತರಗತಿ) ಹುದ್ದೆಗಳನ್ನು ತಾತ್ಕಾಲಿಕವಾಗಿ ನೇರಗುತ್ತಿಗೆ ಆಧಾರದ ಮೇಲೆ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಸೆಪ್ಟೆಂಬರ್ 16 ಅರ್ಜಿ ಸಲ್ಲಿಸಲು ಕೊನೆಯ ದಿನ.

ಸಮಗ್ರ ಶಿಕ್ಷಣ ಕರ್ನಾಟಕ ರಾಜ್ಯ ಯೋಜನಾ ನಿರ್ದೇಶಕರು 2023-24ನೇ ಸಾಲಿನಿಂದ ಸಮನ್ವಯ ಶಿಕ್ಷಣ ಮಧ್ಯವರ್ತನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ

Advertisement

ಜಿಲ್ಲೆಯಲ್ಲಿ ಖಾಲಿ ಇರುವ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರುಗಳ (ಪ್ರಾಥಮಿಕ ಹಂತ 1 ರಿಂದ 5ನೇ ತರಗತಿ) ಹುದ್ದೆಗಳನ್ನು ನೇರ ಗುತ್ತಿಗೆಯಡಿಲ್ಲಿ ಭರ್ತಿ ಮಾಡುವ ಕುರಿತು ಆದೇಶಿಸಿರುತ್ತಾರೆ.

ಅದರಂತೆ ವಿಶೇಷ ಶಿಕ್ಷಣದಲ್ಲಿ ಆರ್‍ಸಿಐ ನಿಯಮದಂತೆ (ವಿಶೇಷ ಚೇತನ ಮಕ್ಕಳಿಗೆ) ಪ್ರಾಥಮಿಕ ಬಿ.ಐ.ಇ.ಆರ್.ಟಿ ಹುದ್ದೆಗೆ D.Ed in special education from a RCI approved institution and possess a valid RCI CRR nuber OR D.EL.Ed with a recognised Qualification (Certificate/Diploma) from RCI approved institution equivalent to D.ed in special education and possess a valid RCI CRR number ºÁUÀÆ 6 Month Training of teaching in cross disability area in inclusive education  ವಿದ್ಯಾರ್ಹತೆಯನ್ನು ಹೊಂದಿರುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಹ ಅಭ್ಯರ್ಥಿಗಳು ಸಂಬಂಧಿಸಿದ ವಿದ್ಯಾರ್ಹತೆಯ ದಾಖಲೆಗಳ್ನು ಉಪನಿರ್ದೇಶಕರು (ಆಡಳಿತ) ಹಾಗೂ ಪದನಿಮಿತ್ತ ಜಿಲ್ಲಾ ಯೋಜನಾಧಿಕಾರಿಗಳ ಕಚೇರಿ, ಸಮಗ್ರ ಶಿಕ್ಷಣ ಕರ್ನಾಟಕ, ಚಿತ್ರದುರ್ಗ ಇಲ್ಲಿಗೆ ಮುದ್ದಾಂ ಆಗಿ ಇದೇ ಸೆಪ್ಟೆಂಬರ್ 16ರ ಮಧ್ಯಾಹ್ನ 1.30ರ ಒಳಗೆ ಅರ್ಜಿಗಳನ್ನು ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 8073269824 ಗೆ ಸಂಪರ್ಕಿಸಬಹುದು.

ಬ್ಲಾಕ್‍ಗಳಲ್ಲಿ ಖಾಲಿ ಇರುವ ಪ್ರಾಥಮಿಕ ಹಂತದ 1 ರಿಂದ 5ನೇ ತರಗತಿ ಬಿ.ಐ.ಇ.ಆರ್.ಟಿ. ಹುದ್ದೆಗಳ ಮಾಹಿತಿ: ಹಿರಿಯೂರು-01, ಹೊಳಲ್ಕೆರೆ-02, ಮೊಳಕಾಲ್ಮುರು-02 ಖಾಲಿ ಹುದ್ದೆಗಳು ಸೇರಿದಂತೆ ಒಟ್ಟು 05 ಹುದ್ದೆಗಳು ಖಾಲಿ ಇವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement