ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರೋ ದರ್ಶನ್ ಪರಪ್ಪನ ಅಗ್ರಹಾರದಲ್ಲಿ ಒಂದೊಂದು ಕ್ಷಣ ಕಳೆಯಲು ಪರದಾಡ್ತಿದ್ದಾರೆ. ಹೊರಗಡೆ ಜಿಮ್ ಶೂಟಿಂಗ್ ಪಾರ್ಟಿ ಅಂತ ಬ್ಯುಸಿ ಇರ್ತಿದ್ದ ದರ್ಶನ್ ಜೈಲಲ್ಲಿ ಸಂಪೂರ್ಣ ಬದಲಾಗಿದ್ದಾರೆ. ಕೇವಲ ದಿನಚರಿ ಅಷ್ಟೇ ಅಲ್ಲ ತಮ್ಮ ಮಾತು ಮತ್ತು ನಡೆತೆಯಲ್ಲೂ ಸಂಪೂರ್ಣವಾಗಿ ದರ್ಶನ್ ಬದಲಾಗಿದ್ದಾರೆ. ದರ್ಶನ್ ಬೆಳಿಗ್ಗೆ ಹೊತ್ತು ಫ್ರಿ ಎಕ್ಸ್ ಸೈಜ್, ಡಿಪ್ಸ್ ಹೊಡಿತಾ ಫಿಟ್ ನೆಸ್ ಬಗೆ ಒತ್ತು ನೀಡ್ತಿದ್ದಾರೆ. ಯಾರ ಜೊತೆಗೂ ಮಾತನಾಡಕೆ ಇಷ್ಟ ಪಡದ ದರ್ಶನ್ ಬುಕ್ ಓದ್ತಿದ್ದಾರೆ. ಇನ್ನೂ ಸಂಜೆ ಆಗ್ತಿದ್ದಂತೆ ದರ್ಶನ್ ದೇವರ ಧ್ಯಾನ , ಭಜನೆ ಮೊರೆ ಹೋಗಿದ್ದಾರಂತೆ. ಹಗಲೆಲ್ಲಾ ಸಮಯ ಕಳೆಯೋದು ಬಲು ಕಷ್ಟವಂತೆ ಹಗಲಿನ ಹೊತ್ತು ಪ್ರತಿ ಕ್ಷಣವೂ ನರಕದಂತೆ ಭಾಸವಾಗ್ತಿದೆಯಂತೆ. ಸಂಜೆ ನಂತ್ರ ಸಮಯ ದೂಡಲು ಸರಿಯಾದ ಮಾರ್ಗವನ್ನೇ ಆಯ್ಕೆ ಮಾಡಿಕೊಂಡಿರೊ ದರ್ಶನ್ ಸಂಜೆ ಮೇಲೆ ಹನುಮಾನ್ ಚಾಲೀಸ, ಹಾಗು ಭಜನೆ ಮಾಡಿ ಕಾಲ ಕಳೆಯುತ್ತಿದ್ದಾರೆ. ಬ್ಯಾರಕ್ ನಲ್ಲಿ ಖೈದಿಯೊಬ್ಬರು ಹೇಳಿಕೊಡುವ ರೀತಿಯಲ್ಲೇ ಭಜನೆ , ಹನುಮಾನ್ ಚಾಲೀಸ ಪಠಣ ಮಾಡ್ತಿದ್ದಾರಂತೆ.
