ಬೆಳಗಾವಿ: ಸಮಾಜ ಪರಿವರ್ತನೆ ಮಾಡುವವರು, ಪ್ರಗತಿಪರ ಚಿಂತಕರಿಗೆ ಜೀವ ಬೆದರಿಕೆಗಳು ಬರುತ್ತಲೆ ಇವೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಅವರಿಗೆ ಜೀವ ಬೆದರಿಕೆಯ ಪತ್ರ ಬಂದಿರುವ ವಿಚಾರದ ಕುರಿತು ಮಾತನಾಡಿದ ಅವರು, ಈ ವಿಚಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗಮನಕ್ಕೆ ತರುತ್ತೇನೆ ಎಂದರು.
ಇನ್ನು ಸಮಾಜ ಪರಿವರ್ತನೆ ಮಾಡುವವರು, ಪ್ರಗತಿಪರ ಚಿಂತಕರಿಗೆ ಜೀವ ಬೆದರಿಕೆಗಳು ಬರುತ್ತಲೆ ಇವೆ. ಆದರೆ ನನಗೆ ಯಾವುದೇ ಜೀವ ಬೆದರಿಕೆಗಳು ಬಂದಿಲ್ಲ. ಈ ರೀತಿಯ ಜೀವ ಬೆದರಿಕೆಗಳು ಬಂದಾಗ, ಸರ್ಕಾರ, ಕಾನೂನು, ಪೋಲೀಸ್ ಇಲಾಖೆ ಇದ್ದು ಈ ಬಗ್ಗೆ ಕ್ರಮ ಕೈಗೊಳ್ಳುತ್ತಾರೆ ಎಂದಿದ್ದಾರೆ.