ಬೆಂಗಳೂರು: ಕೆಲವೊಂದು ಸಲ ಸರಕಾರದ ಕೆಲ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಶಿಷ್ಟಾಚಾರವನ್ನು ಮರೆತು ಕೆಲ ಚುನಾಯಿತ ಪ್ರತಿನಿಧಿಗಳನ್ನು ಕೈ ಬಿಡುತ್ತಾರೆ. ಆದರೆ ಸರಕಾರದ ಸುತ್ತೋಲೆ ಏನು ಹೇಳುತ್ತೆ.?
ವಿಧಾನಸೌಧದಿಂದ ಕರ್ನಾಟಕ ಸರ್ಕಾರದ ಸಚಿವಾಲಯ ಸಂಖ್ಯೆ:ಸಿಆಸುಇ. 34 ಹೆಚ್‍ಪಿಎ 2028(1) ದಿನಾಂಕ:16.04/2029 ರಂದು ಶಿಷ್ಟಾಚಾರ ಬಗ್ಗೆ ಸುತ್ತೋಲೆ ಹೊರಡಿಸಿದೆ.
* ಸಮಾನ್ಯ ಸೂಚನೆಗಳಂತೆ ವಿಧಾನ ಸಭಾ ಕ್ಷೇತ್ರದ ಶಾಸಕರ ಅಧ್ಯಕ್ಷತೆಯಲ್ಲಿಯೇ ಕಾರ್ಯಕ್ರಮ ನಡೆಸಬೇಕು.
* ಹೋಬಳಿ ಅಥವಾ ತಾಲ್ಲೂಕು ಕೇಂದ್ರದಲ್ಲಿ ಕಾರ್ಯಕ್ರಮ ಆಯೋಜಿಸಿದಾಗಲೂ ಸದರಿ ತಾಲ್ಲೂಕು ಕೇಂದ್ರ ಇನ್ನೂಂದು ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟರೂ ಯಾವ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುತ್ತದೆ ಆ ಕ್ಷೇತ್ರದ ಶಾಸಕರೇ ಅಧ್ಯಕ್ಷತೆ ವಹಿಸಬೇಕು.
*ಶಾಸಕರ ಸ್ಥಾನ ತೆರವಾದ ವೇಳೆ ಸಿಎಂ ಉದ್ಘಾಟನೆ ಮಾಡಿದರೆ ಜಿಲ್ಲಾ ಸಚಿವರು ಅಧ್ಯಕ್ಷತೆವಹಿಸಬಹುದು.
* ಕೆಲವು ಸಂದರ್ಭದಲ್ಲಿ ಇಲಾಖೆ ಸಚಿವರು ಗೈರು ಸಂದರ್ಭದಲ್ಲಿ ಮಾತ್ರ ಜಿಲ್ಲಾ ಸಚಿವರೇ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಬಹುದು.
ಕಾರ್ಯಕ್ರಮಕ್ಕೆ ಆಹ್ವಾನಿಸುವ ಬಗ್ಗೆ :-
* ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಆಯೋಜಿಸಿ ಸಂಬಂಧ ಪಟ್ಟ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸಂಸದರು, ರಾಜ್ಯಸಭಾ ಸದಸ್ಯರು ಒಳಗೊಂಡಂತೆ ಆ ಕ್ಷೇತ್ರದಿಂದ ಆಯ್ಕೆಗೊಂಡ ಜನಪ್ರತಿನಿಧಿಗಳನ್ನು ಆಹ್ವಾನಿಸಬೇಕು.
* ರಾಜ್ಯ ಮಟ್ಟದ ಕಾರ್ಯಕ್ರಮ ನಡೆದರೂ ಸಹ ಆ ಕ್ಷೇತ್ರದ ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿಯೇ ಕಾರ್ಯಕ್ರಮ ಆಯೋಜನೆ ಮಾಡಬೇಕು.
* ಲೋಕಸಭಾ ಸದಸ್ಯರು ನಂತರ ರಾಜ್ಯಸಭಾ ಸದಸ್ಯರು ಹಾಗೂ ವಿಧಾನಸಭಾ ಸದಸ್ಯರು ನಂತರ ವಿಧಾನಪರಿಷತ್ ಸದಸ್ಯರುಗಳ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ನಮೂದಿಸಬೇಕು.
* ಸಮಾರಂಬಗಳಲ್ಲಿ ಪಾಲ್ಗೊಳ್ಳುವಂತ ಸಂದರ್ಭ ರಾಜ್ಯ ಆದ್ಯತಾ ಸೂಚಿ ಪಟ್ಟಿ ಮತ್ತು ಇತರೆ ಸನ್ನಿವೇಶಗಳನ್ನು ಆದರಿಸಿ ಕೇಂದ್ರ ಸಚಿವರು, ಸಂಪುಟ ದರ್ಜೆ ಸಚಿವರು ರಾಜ್ಯ ಸಚಿವರು, ಸಂಸತ್ ಮತ್ತು ರಾಜ್ಯ ವಿಧಾನ ಮಂಡಳ ಸದಸ್ಯರುಗಳಿಗೆ ಘನ ಉಪಸ್ಥಿತಿ, ಉದ್ಘಾಟನೆ/ಶಂಕುಸ್ಥಾಪನೆ ಲೋಕಾರ್ಪಾಣೆ ಅಧ್ಯಕ್ಷರು ಮುಖ್ಯ ಅತಿಥಿಗಳು ವಿಶೇಷ ಆಹ್ವಾನಿತರು ಹೀಗೆ ಸ್ಥಾನ ನೀಡಬೇಕು.
* ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಥಳೀಯ ಶಾಸಕರೇ ಆಗಿರತಕ್ಕದ್ದು.