ಗುಜರಾತ್ ಸರ್ಕಾರವು ರಾಜ್ಯ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆಯನ್ನು 4% ರಷ್ಟು ಹೆಚ್ಚಿಸಿದೆ. ಸಿಎಂ ಭೂಪೇಂದ್ರ ಪಟೇಲ್ ಅವರ ಕಚೇರಿಯ ಪ್ರಕಾರ, ಏಳನೇ ವೇತನ ಆಯೋಗದ ಅಡಿಯಲ್ಲಿ ಬರುವ ಉದ್ಯೋಗಿಗಳಿಗೆ ಈ ನಿರ್ಧಾರವು ಜನವರಿ 1, 2024 ರಿಂದ ಜಾರಿಗೆ ಬರಲಿದೆ. ಹೆಚ್ಚುವರಿ ಆರು ತಿಂಗಳಿಗೆ ಅಂದರೆ ಜನವರಿ 1ರಿಂದ ಜೂನ್ 30 ರವರೆಗಿನ ಡಿಎ ವ್ಯತ್ಯಾಸವನ್ನು ಸಂಬಳದ ಜೊತೆಗೆ ಪಾವತಿಸಲಾಗುತ್ತದೆ.
