ದಿಸ್ಪುರ್: ಸರ್ಕಾರಿ ನೌಕರರು 2ನೇ ಮದುವೆ ಆಗುವಂತಿಲ್ಲ ಎಂದು ಅಸ್ಸಾಂ ಸರ್ಕಾರ ನಿರ್ಬಂಧಿಸಿ ಆದೇಶ ಹೊರಡಿಸಿದೆ.
ಸರ್ಕಾರಿ ನೌಕರನ ಧರ್ಮ 2ನೇ ಮದುವೆಗೆ ಅನುಮತಿಸಿದರೂ ಸರ್ಕಾರದ ಅನುಮತಿ ಇಲ್ಲದೇ 2ನೇ ಮದುವೆ ಮಾಡಿಕೊಳ್ಳುವಂತಿಲ್ಲ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.
ಇನ್ನು 2 ಮದುವೆಗಳಿಂದ ಸರ್ಕಾರಿ ನೌಕರನ ಪಿಂಚಣಿಗಾಗಿ ಇಬ್ಬರು ಪತ್ನಿಯರು ಹೋರಾಟ ಮಾಡುವುದನ್ನು ನಾವು ಗಮನಿಸಿದ್ದೇವೆ. ಅಸ್ಸಾಂನಲ್ಲಿ ಈ ಕಾನೂನು ಮೊದಲೇ ಇತ್ತು. ಅದನ್ನು ಕಠಿಣವಾಗಿ ಜಾರಿಗೆ ನಿರ್ಧಾರ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.