ಸರ್ದಾರ್​ 2 ಸೆಟ್ ನಲ್ಲಿ ಅವಘಡ: 20 ಅಡಿ ಎತ್ತರದಿಂದ ಬಿದ್ದು ಸ್ಟಂಟ್ ಮ್ಯಾನ್ ಮೃತ್ಯು

ಚೆನ್ನೈ: ತಮಿಳು ನಟ ಕಾರ್ತಿ ಹೊಸ ಸಿನಿಮಾ ‘ಸರ್ದಾರ್​ 2’ ಚಿತ್ರದ ಚಿತ್ರೀಕರಣದ ಸೆಟ್ ನಲ್ಲಿ ಅವಘಡ ಸಂಭವಿಸಿ ಸ್ಟಂಟ್ ಮ್ಯಾನ್ ಮೃತಪಟ್ಟಿರುವ ಘಟನೆ ನಡೆದಿದೆ.

ಸಾಹಸದೃಶ್ಯವೊಂದರ ಶೂಟಿಂಗ್ ನಡೆಯುತ್ತಿದ್ದ ವೇಳೆ ಬೃಹತ್​ ಸೆಟ್‌ನಲ್ಲಿ ಸ್ಟಂಟ್‌ಮ್ಯಾನ್ ಎಜುಮಲೈ ಸುಮಾರು 20 ಅಡಿ ಎತ್ತರದಿಂದ ಕುಸಿದುಬಿದ್ದು, ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾರೆ.

ಎಜುಮಲೈ ಆಯಕ್ಷನ್ ಸೀಕ್ವೆನ್ಸ್‌ನ ಚಿತ್ರೀಕರಣದ ವೇಳೆ ದಿಢೀರ್​ 20 ಅಡಿ ಎತ್ತರದಿಂದ ಕುಸಿದು ಬಿದ್ದು, ತೀವ್ರ ರಕ್ತಸ್ರಾವದಿಂದ ಮೃತಪಟ್ಟಿರುವುದಾಗಿ ವರದಿಯಾಗಿದೆ. ಇತ್ತೀಚೆಗಷ್ಟೇ ಮಹೂರ್ತ ಈಡೇರಿಸಿ, ಶುಭಾರಂಭ ಮಾಡಿದ್ದ ಸಿನಿಮಾ ತಂಡಕ್ಕೆ ಇದೀಗ ಎಜುಮಲೈ ಅವರ ಅಕಾಲಿಕ ಸಾವಿನಿಂದ ಅತೀವ ದುಃಖ ಉಂಟಾಗಿದೆ. ಪಿ.ಎಸ್. ಮಿತ್ರನ್ ನಿರ್ದೇಶನದ ಚಿತ್ರ ಇದಾಗಿದೆ.

Advertisement

ಇದೇ ಜುಲೈ 15ರಂದು ‘ಸರ್ದಾರ್ 2’ ಚಿತ್ರೀಕರಣ ಪ್ರಾರಂಭವಾಗಿತ್ತು.

 

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement