ನವದೆಹಲಿ: ಇತ್ತೀಚಿಗೆ ಪ್ರಧಾನಿ ಮೋದಿ ಅವರನ್ನು ಕನ್ನಡದ ಶ್ರೇಷ್ಠ ಕಾದಂಬರಿಕಾರ ಎಸ್.ಎಲ್ ಭೈರಪ್ಪ ಅವರು ಭೇಟಿಯಾದ ಸಂದರ್ಭದ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ಒಬ್ಬರನೊಬ್ಬರು ಪರಿಚಯ ಮಾಡಿಕೊಂಡ ಪ್ರಸಂಗದ ಬಗ್ಗೆಯೂ ಭೈರಪ್ಪ (ಎಸ್‌ಎಲ್‌ಬಿ) ಅವರು ಸಂಕ್ಷಿಪ್ತವಾಗಿ ಬರೆದುಕೊಂಡಿದ್ದಾರೆ. ಎಸ್‌ಎಲ್‌ಬಿ: ‘ನಾನು ಕರ್ನಾಟಕದ ಎಸ್‌ಎಲ್ ಭೈರಪ್ಪ, ಕನ್ನಡ ಕಾದಂಬರಿಕಾರ’ ಪರಿಚಯ ಮಾಡಿಕೊಂಡಿದ್ದಾರೆ.. ನರೇಂದ್ರ ಮೋದಿ: “ಸರ್… ನಿಮ್ಮನ್ನು ಯಾರು ತಿಳಿದಿಲ್ಲ ಹೇಳಿ..? ಹೇಗಿದ್ದೀರಿ.. ನೀವು ಈಗ ಯಾವ ಪುಸ್ತಕವನ್ನು ಬರೆಯುತ್ತಿದ್ದೀರಿ! ಎಂದು ಕೇಳಿದ್ದಾರೆ.. ಎಸ್‌ಎಲ್‌ಬಿ: ಈಗ ಯಾವುದೇ ಹೊಸ ಪುಸ್ತಕ ಇಲ್ಲ ಎಂದಿದ್ದಾರೆ.. ಪ್ರಧಾನಿ ಮೋದಿ: “ದಯವಿಟ್ಟು ಬರೆಯುವುದನ್ನು ನಿಲ್ಲಿಸಬೇಡಿ ಸರ್,,, ಭಾರತದಾದ್ಯಂತ ನಿಮ್ಮ ಓದುಗರು ನಿಮ್ಮ ಪುಸ್ತಕಗಳು ಮತ್ತು ನಿಮ್ಮ ಬುದ್ಧಿ ಶಕ್ತಿಯನ್ನು ಮೆಚ್ಚುತ್ತಾರೆ… ಜೊತೆಗೆ ನಿಮ್ಮ ಬರವಣಿಗೆಯ ಪುಸ್ತಕಗಳನ್ನು ಬಯಸುತ್ತಾರೆ. ಈ ರೀತಿ ಮಾತುಕತೆ ಸಾರಂಶವನ್ನು ಎಸ್‌ಎಲ್ ಭೈರಪ್ಪನವರು ತಮ್ಮ ಎಕ್ಸ್ ಖಾತೆಯನಲ್ಲಿ ತಿಳಿಸಿದ್ದಾರೆ.
ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ