ಸುಪ್ರೀಂ ಕೋರ್ಟ್ ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಲು ಸಾಧ್ಯವಿಲ್ಲ ಎಂದು ಮಹತ್ವದ ತೀರ್ಪು ಕೊಟ್ಟ ಬೆನ್ನಲ್ಲೆ ನಟಿ ಲಕ್ಷ್ಮೀ ಮಂಚು ಈ ತೀರ್ಪು ದೇಶಕ್ಕೆ ಮಾಡಿದ ಅಪಮಾನ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇನ್ನು ಅಕ್ಟೋಬರ್ 17 ಸುಪ್ರೀಂ ಕೋರ್ಟ್ ಪಂಚಸದಸ್ಯ ಪೀಠ ತೀರ್ಪು ನೀಡಿತ್ತು. ಈ ಬಗ್ಗೆ ಪರ-ವಿರೋಧದ ಚರ್ಚೆ ನಡೆಯುತ್ತಿದೆ. ಹೀಗಿರುವಾಗ ನಟಿ ಲಕ್ಷ್ಮಿ ಮಂಚು ಕೂಡ ಟ್ವೀಟ್ ಮಾಡಿ ಪ್ರತಿಕ್ರಿಯೆ ನೀಡಿದ್ದಾರೆ. ಸಲಿಂಗ ವಿವಾಹವನ್ನು ಕಾನೂನು ಬದ್ಧಗೊಳಿಸಲು ಸುಪ್ರೀಂ ಕೋರ್ಟ್ ತೀರ್ಪು ನನಗೆ ನಿರಾಸೆಗೊಳಿಸಿದೆ. ನನ್ನ ಹೃದಯ ಒಡೆದಿದೆ. ಎಲ್ಲಾ ರೀತಿಯ ಪ್ರೀತಿಯನ್ನು ಸ್ವೀಕರಿಸುವ, ಪ್ರಪಂಚದಲ್ಲಿನ ಪ್ರೀತಿಯ ಬಗ್ಗೆ ಬೋಧಿಸಿದ ದೇಶಕ್ಕೆ ಇದು ನಿಜವಾಗಿಯೂ ಅವಮಾನ ಎಂದಿದ್ದಾರೆ. ನಟಿಯ ಈ ಟ್ವೀಟ್ ಸಖತ್ ವೈರಲ್ ಆಗುತ್ತಿದೆ.