ಬೆಂಗಳೂರು: ರಾಜ್ಯದ 430 ಪದವಿ, 102 ಪಾಲಿಟೆಕ್ನಿಕ್ ಹಾಗೂ 16 ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಹೊಸ ಹುದ್ದೆ ಸೃಷ್ಟಿ ಜತೆಗೆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅನುಮತಿ ನೀಡುವಂತೆ ಉನ್ನತ ಶಿಕ್ಷಣ ಇಲಾಖೆಯು ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ.
ಮೂಲಗಳ ಪ್ರಕಾರ, ಸದ್ಯ ಪದವಿ ಕಾಲೇಜುಗಳಲ್ಲಿ 400 ಸಹಾಯಕ ಪ್ರಾಧ್ಯಾಪಕ ಹುದ್ದೆಗಳು ಖಾಲಿ ಇದ್ದು, 5,800ಕ್ಕೆ ಪ್ರಸ್ತಾವ ಇಡಲಾಗಿದೆ. ಎಲ್ಲಾ ಕಾಲೇಜುಗಳಲ್ಲಿ ಒಟ್ಟು 7100 ಹುದ್ದೆಗಳ ಭರ್ತಿಗೆ ಅನುಮತಿ ಕೋರಲಾಗಿದೆ.