ಮುಂಬೈ : ಸಹಾರಾ ಗ್ರೂಪ್ ಸಂಸ್ಥಾಪಕ ಮತ್ತು ಅಧ್ಯಕ್ಷ ಸುಬ್ರತ ರಾಯ್ ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು. ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮುಂಬೈನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅವರಿಗೆ ಪತ್ನಿ, ಇಬ್ಬರು ಪುತ್ರರಿದ್ದಾರೆ.
1948ರಲ್ಲಿ ಅವರು ಬಿಹಾರದಲ್ಲಿ ಜನಿಸಿದರು. 1978ರಲ್ಲಿ ಕೇವಲ ₹ 2,000 ಬಂಡವಾಳದೊಂದಿಗೆ ಪ್ರಾರಂಭಿಸಲಾದ ಸಹಾರಾ ಗ್ರೂಪ್ ಕಂಪನಿಯು ಇದೀಗ ಮುಂಚೂಣಿಯಲ್ಲಿದೆ ಎಂದು ಕಂಪನಿ ತನ್ನ ವೆಬ್ಸೈಟ್ನಲ್ಲಿ ಹೇಳಿದೆ
ಸುಬ್ರತಾ ರಾಯ್ ಅವರ ಪರಂಪರೆ ಹಾಗೂ ಉದ್ಯಮದಲ್ಲಿ ಹೊಂದಿದ್ದ ಅವರ ದೃಷ್ಟಿಕೋನವನ್ನು ಮುಂದುವರೆಸಿಕೊಂಡು ಹೋಗಲಾಗವುದು ಎಂದು ಸಹಾರಾ ಗ್ರೂಪ್ ತಿಳಿಸಿದೆ