ಇಂದು ವಿಶ್ವದೆಲ್ಲೆಡೆ ಕ್ರಿಸ್ಮಸ್ ಹಬ್ಬವನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ. ಕ್ರೈಸ್ತ ಬಾಂಧವರೆಲ್ಲರು ಚರ್ಚ್‌ಗಳಿಗೆ ಭೇಟಿ ನೀಡುವ ಮೂಲಕ, ತಮ್ಮ ಸ್ನೇಹಿತರು ಹಾಗೂ ಕುಟುಂಬ ಸದಸ್ಯರೊಂದಿಗೆ ಸಿಹಿ ಹಾಗೂ ಶುಭಾಶಯಗಳನ್ನು ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲರಿಗೂ ಕ್ರಿಸ್ಮಸ್ ಶುಭಾಶಯವನ್ನು ತಿಳಿಸಿದ್ದಾರೆ.
ಎಲ್ಲರಿಗೂ ಮೆರ್ರಿ ಕ್ರಿಸ್ಮಸ್ ಶುಭಾಶಯಗಳು! ಈ ಹಬ್ಬವು ಎಲ್ಲರಿಗೂ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ತರಲಿ. ಕ್ರಿಸ್‌ಮಸ್ ಸಂಕೇತಿಸುವ ಸೌಹಾರ್ದತೆ ಮತ್ತು ಸಹಾನುಭೂತಿಯ ಚೈತನ್ಯವನ್ನು ಆಚರಿಸೋಣ ಮತ್ತು ಎಲ್ಲರೂ ಸಂತೋಷದಿಂದ ಹಾಗೂ ಆರೋಗ್ಯಕರವಾಗಿರುವ ಜಗತ್ತಿಗಾಗಿ ಕೆಲಸ ಮಾಡೋಣ. ನಾವು ಲಾರ್ಡ್ ಕ್ರೈಸ್ತನ ಉದಾತ್ತ ಬೋಧನೆಗಳನ್ನು ಸಹ ನೆನಪಿಸಿಕೊಳ್ಳೋಣ’ ಎಂದು ಪ್ರಧಾನಿ ನರೇಂದ್ರ ಮೋದಿ ಎಕ್ಸ್(ಹಿಂದಿ ಟ್ವೀಟ್) ಮೂಲಕ ಶುಭಾಶಯಗಳನ್ನು ತಿಳಿಸಿದ್ದಾರೆ.
ಇದರೊಂದಿಗೆ ತಲೆಗೆ ಟೋಪಿ, ಬಿಳಿ ಗಡ್ಡ, ಕೈಗೆ ಗ್ಲೋಜು- ಸಾಂತಾ ಕ್ಲಾಸ್ ಉಡುಪಿನಲ್ಲಿ ಕಾಣಿಸಿಕೊಂಡು ಮೋದಿ ಅವರು ಅಚ್ಚರಿ ಮೂಡಿಸಿದ್ದಾರೆ. ಮೋದಿ ಅವರು ಕ್ರಿಸ್ಮಸ್ ತಾತನಂತೆ ಕಾಣುವ ಫೋಟೋ ವೈರಲ್ ಆಗಿದೆ. ಅದಕ್ಕೆ ಸಾಕಷ್ಟು ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಇದಕ್ಕೆ ಪ್ರತಿಕ್ರಿಯೆಯಾಗಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ‘ಚೆನ್ನಾಗಿ ಕಾಣುತ್ತಿದ್ದಾರೆ ಮೋದಿ ಜೀ! ಕ್ರಿಸ್ಮಸ್ ಶುಭಾಶಯಗಳು’ ಎಂದು ಬರೆದಿದ್ದಾರೆ.