ಬೆಂಗಳೂರು: ಸಾರಿಗೆ ಸಿಬ್ಬಂದಿಗೆ ಇನ್ಮುಂದೆ ಪಿಂಚಣಿ ನೀಡಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಘೋಷಣೆ ಮಾಡಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಈ ಹಿಂದೆ ಪ್ರತಿಭಟನೆ ನಡೆದಾಗ ಕೆಲವರನ್ನು ವಜಾ ಮಾಡಲಾಗಿತ್ತು. 2020ರಲ್ಲಿ ರಾಜ್ಯದಲ್ಲಿ ನಮ್ಮ ಸರ್ಕಾರ ಇರಲಿಲ್ಲ. ನಮ್ಮ ಸರ್ಕಾರದ ಅವಧಿಯಲ್ಲಿ ಯಾರನ್ನೂ ಕೆಲಸದಿಂದ ವಜಾಗೊಳಿಸಿಲ್ಲ ಎಂದರು.
ಇನ್ನು ಬಿಎಂಟಿಸಿ ನೌಕರರ ವಿರುದ್ಧದ ಕೇಸ್ ಕೋರ್ಟ್ನಲ್ಲಿರುವುದರಿಂದ ವಿಳಂಬವಾಗುತ್ತಿದ್ದು, ವಜಾಗೊಂಡಿದ್ದ ಬೇರೆ ನಿಗಮದ ನೌಕರರು ಕೆಲಸಕ್ಕೆ ಹಾಜರಾಗಿದ್ದಾರೆ ಎಂದಿದ್ದಾರೆ,
ಶಕ್ತಿ ಯೋಜನೆಯಿಂದ ಸಾರಿಗೆ ಸಂಸ್ಥೆಗಳಿಗೆ ನಷ್ಟವಾಗುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸಾರಿಗೆ ಸಂಸ್ಥೆಗಳಿಗೆ ಯಾವುದೇ ನಷ್ಟ ಇಲ್ಲ. ಸರ್ಕಾರ ಆ ಹಣವನ್ನು ಸಂಸ್ಥೆಗಳಿಗೆ ನೀಡುತ್ತದೆ ಎಂದು ಹೇಳಿದರು.