ಸಾಲದ ಬಡ್ಡಿ ಮನ್ನಾ ಘೋಷಣೆ ..! ಈ ಕೆಳಗಿನ ವಿವರ ಗಮನಿಸಿ

ರಾಜ್ಯ ಸರ್ಕಾರದಿಂದ ಸಹಾಯಧನ :

ಕರ್ನಾಟಕದಲ್ಲಿ ಈ ವರ್ಷ ಸರಿಯಾದ ಸಮಯಕ್ಕೆ ಮಳೆ ಬಾರದ ಕಾರಣ ಮುಂಗಾರು ರೈತರಿಗೆ ಸಂಕಷ್ಟದ ಪರಿಸ್ಥಿತಿ ತಂದಿತ್ತು ಹಾಗಾಗಿ ಸರ್ಕಾರದಿಂದ ಸಹಾಯ ನೀಡಲಾಗುತ್ತಿದೆ.

ಕರ್ನಾಟಕ ರಾಜ್ಯದಲ್ಲಿ ಸಹಕಾರಿ ಸಂಸ್ಥೆಗಳ ಮೂಲಕ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲದ ಬಡ್ಡಿಮನ್ನು ಮಾಡಲು ಆದೇಶ ನೀಡಲಾಗಿದೆ .ಸರ್ಕಾರದ ಈ ಆದೇಶದಲ್ಲಿ ಒಟ್ಟು 223 ತಾಲೂಕುಗಳನ್ನು ಒಳಗೊಂಡಿರುತ್ತದೆ .ಇವುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ.

ಯೋಜನೆ ಹೆಸರು ರೈತರ ಸಾಲದ ಬಡ್ಡಿ ಮನ್ನಾ
ಬರಪೀಡಿತ ಒಟ್ಟು ತಾಲೂಕು 223 ತಾಲೂಕು
ಯಾವ ಸಂಸ್ಥೆಗಳ ಬಡ್ಡಿ ಮನ್ನಾ ಸಹಕಾರಿ ಸಂಸ್ಥೆ
ಬಡ್ಡಿ ಮನ್ನಾ ಮಾಡುತ್ತಿರುವ ರಾಜ್ಯ ಕರ್ನಾಟಕ

ಆದೇಶದ ವಿವರ ಗಮನಿಸಿ :

ಕರ್ನಾಟಕ ರಾಜ್ಯದಲ್ಲಿ ಸೃಷ್ಟಿಯಾಗಿರುವ ಅನಾವೃಷ್ಟಿಗಳಿಂದ ರಾಜ್ಯದ ರೈತರ ಸಾಲ ಮನ್ನಾವನ್ನು ಮಾಡದೆ ಕೃಷಿ ಸಾಲಕ್ಕೆ ಪಡೆದಂತಹ ಬಡ್ಡಿಯನ್ನು ಮನ್ನಾ ಮಾಡಲು ತೀರ್ಮಾನಿಸಲಾಗಿದೆ ಹಾಗೂ ಅನೇಕ ಸಹಕಾರಿ ಸಂಸ್ಥೆಗಳ ಮೂಲಕ ಸಾಲವನ್ನು ಪಡೆಯದೆ ಇರುವಂತ ರೈತರು ಮತ್ತೆ ಸಾಲ ಪಡೆಯಲು ಯಾವುದೇ ರೀತಿ ಸಂಕಷ್ಟ ಆಗಬಾರದು ಎನ್ನುವ ಕಾರಣಕ್ಕೆ ರೈತರಿಗೆ ನೆರವಾಗಲೆಂದು ಕೃಷಿ ಚಟುವಟಿಕೆಗಳಿಗಾಗಿ ಸಾಲ ಪಡೆದಿರುವಂತಹ ರೈತರ ಬಡ್ಡಿಮನ್ನ ಮಾಡಲಾಗಿರುತ್ತದೆ.

Advertisement

ರೈತರು ಪಡೆದ ಸಾಲ ಮಾಹಿತಿ :

ಕರ್ನಾಟಕದಲ್ಲಿ ಅನೇಕ ಸಹಕಾರ ಸಂಘಗಳ ಮೂಲಕ ರೈತರು ಮಧ್ಯಮಾವಧಿ ಹಾಗೂ ದೀರ್ಘಾವಧಿ ಸಾಲಗಳನ್ನು ಈ ದಿನಾಂಕಕ್ಕೆ 31/12/2023 ಹೋಲಿಸಿದರೆ ರೈತರು ಕೊಟ್ಟು 44.030.50 ಲಕ್ಷಗಳೆಂದು ಸಾಲವನ್ನು ಪಡೆದಿರುತ್ತಾರೆ/

ಬಡ್ಡಿ ಮನ್ನ ಮಾಹಿತಿ :

ಸರ್ಕಾರದ ಪ್ರಸ್ತಾವನೆಯಲ್ಲಿ ವಿವರಿಸಿದಂತೆ ಅನೇಕ ರೈತರ ಬಡ್ಡಿ ಮನ್ನಾ ಮಾಡಲು ಈ ಕೆಳಕಂಡ ಸಹಕಾರ ಸಂಘಗಳು ಹಾಗೂ ಬ್ಯಾಂಕುಗಳ ಸಂಬಂಧಿಸಿದ ಬಡ್ಡಿಮನ್ನು ಮಾಡಲು ತಿಳಿಸಲಾಗಿರುತ್ತದೆ.

  1. ಸಹಕಾರಿ ಸಂಘಗಳು.
  2. ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ.
  3. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್.
  4. ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಬ್ಯಾಂಕ್.

ಈ ಮೇಲ್ಕಂಡ ಬ್ಯಾಂಕುಗಳ ಸಾಲ ಪಡೆದ ದಿನಾಂಕದಿಂದ 29/02/2024 ಒಳಗಾಗಿ ಸಂಬಂಧಪಟ್ಟಂತಹ ಬ್ಯಾಂಕುಗಳ ಬಾಕಿ ಇರುವಂತಹ ಬಡ್ಡಿಮನ್ನ ಮಾಡಲು ಸಹಕಾರಿ ಸಂಘಗಳ ಹಣವನ್ನು ಸರ್ಕಾರ ಭರ್ತಿ ಮಾಡಲು ತೀರ್ಮಾನಿಸಿದೆ.

ಈ ಮೇಲ್ಕಂಡ ಸಂಸ್ಥೆಗಳಲ್ಲಿ ಸಾಲ ಪಡೆದಂತಹ ರೈತರು ಬಡ್ಡಿ ಮನ್ನಾ ಮಾಡಲು ತಿಳಿಸಲಾಗಿರುತ್ತದೆ ಹಾಗಾಗಿ ಮೊತ್ತವನ್ನು ಮರುಪಾವತಿಸುವ ದಿನಾಂಕದವರೆಗೆ ಮಾತ್ರ ಬಡ್ಡಿ ಮನ್ನಾ ಮಾಡಲು ಅವಕಾಶವಿರುತ್ತದೆ .ಯಾವುದೇ ಕಾರಣಕ್ಕೂ ಮೊತ್ತ ಬಿಡುಗಡೆ ಆಗುವುದರಲ್ಲಿ ವಿಳಂಬದ ಅವಧಿಗೆ ಹೆಚ್ಚಾಗಿದ್ದರೆ ಬಡ್ಡಿಮನ್ನ ಆಗುವುದಿಲ್ಲ.

 

ರೈತರ ಷರತ್ತುಗಳನ್ನು ಗಮನಿಸಿ :

  • ರೈತರು ಈ ಸೌಲಭ್ಯವನ್ನು ಪಡೆಯಬೇಕಾದರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಹಾಗೂ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕು ಹಾಗೂ ಗ್ರಾಮೀಣ ಅಭಿವೃದ್ಧಿ ಬ್ಯಾಂಕುಗಳಿಂದ ಮಧ್ಯಮಾವಧಿ ಹಾಗೂ ದೀರ್ಘಾವಧಿ ಕೃಷಿಗೆ ಸಂಬಂಧಿಸಿದ ಸಾಲಗಳನ್ನು ಪಡೆದಿರಬೇಕು.
  • ಈ ಯೋಜನೆಯಲ್ಲಿ ರೈತರು ಕೃಷಿಯೇತರ ಸಾಲ ಪಡೆದಿದ್ದರೆ ಬಡ್ಡಿಮನ್ನ ಅನ್ವಯಿಸುವುದಿಲ್ಲ ಹಾಗೂ ಕೆಲವು ಸಂಸ್ಥೆಗಳನ್ನು ಹೊರತುಪಡಿಸಿ ಇತರೆ ಸಹಕರಿ ಸಂಸ್ಥೆಗಳಿಂದ ನೀವು ಸಾಲಗಳನ್ನು ಪಡೆದಿದ್ದರೆ ಬಡ್ಡಿಮನ್ನ ಅನ್ವಯಿಸುವುದಿಲ್ಲ.

ಈ ಸಾಲಗಳಿಗೆ ಮಾತ್ರ ಬಡ್ಡಿಮನ್ನ :

ರೈತರು ಕೃಷಿಗೆ ಸಂಬಂಧಿಸಿದ ಮಧ್ಯಮಾವಧಿ ಹಾಗೂ ದೀರ್ಘಾವಧಿ ಸಾಲಗಳನ್ನು ಈ ಸಂಬಂಧಿಸಿದ ಕೃಷಿಗಳಿಗೆ ಮಾತ್ರ ಅನ್ವಯವಾಗಲಿದೆ.

  • ಲಘು ನೀರಾವರಿ.
  • ಭೂ ಅಭಿವೃದ್ಧಿ.
  • ಸಾವಯವ ಕೃಷಿ .
  • ಹೈನುಗಾರಿಕೆ.
  • ಪಶು ಸಂಗೋಪನೆ.
  • ಮೀನು ಕೃಷಿ .
  • ರೇಷ್ಮೆ ಕೃಷಿ.
  • ಕೃಷಿ ಯಂತ್ರೋಪಕರಣ ಖರೀದಿಸಲು.
  • ಪ್ಲಾಂಟೇಶನ್ .
  • ತೋಟಗಾರಿಕೆ ಅಭಿವೃದ್ಧಿ .

ಈ ಮೇಲ್ಕಂಡ ಅಭಿವೃದ್ಧಿ ಉದ್ದೇಶಗಳಿಗೆ ಸಾಲ ಪಡೆದಿದ್ದರೆ ಮಾತ್ರ ಸರ್ಕಾರದಿಂದ ಬಡ್ಡಿಯಾಯಿತಿ ನಿಮಗೆ ದೊರೆಯಲಿದೆ.

ಅನೇಕ ರೈತರಿಗೆ ಉಪಯೋಗಕರವಾಗಲಿದ್ದು ಈ ಮಾಹಿತಿಯನ್ನು ರೈತರಿಗೆ ತಲುಪಿಸಿ ಯಾರು ಸಹಕಾರಿ ಸಂಘಗಳಿಂದ ಸಾಲವನ್ನು ವಿವಿಧ ಕೃಷಿ ಚಟುವಟಿಕೆಗಳಿಗೆ ಪಡೆದಿರುತ್ತಿರೋ ಅಂತಹ ರೈತರ ಬಡ್ಡಿಮನ್ನ ಮಾಡಲು ತೀರ್ಮಾನಿಸಲಾಗಿರುತ್ತದೆ ಹಾಗಾಗಿ ನಿಮ್ಮ ಹತ್ತಿರದ ಸಹಕಾರಿ ಸಂಸ್ಥೆಗಳಿಗೆ ಭೇಟಿ ನೀಡಿ ಇದರ ಬಗ್ಗೆ ಹೆಚ್ಚಿನ ವಿವರವನ್ನು ಪಡೆದುಕೊಳ್ಳಿ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement