ಲಕ್ನೋ: ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯಲ್ಲಿ ಸತ್ತ ಮಹಿಳೆ ಬದುಕಿ ಬಂದಿದ್ದಾಳೆ. ಆಕೆಯ ಹೆತ್ತವರು, ಸಂಬಂಧಿಕರು ಸತ್ತೋಗಿದ್ದಾಳೆ ಎಂದುಕೊಂಡಿದ್ರೆ, ಆಕೆ ಲವರ್ ಜೊತೆ ಜೀವಂತವಾಗಿ ಪ್ರತ್ಯಕ್ಷವಾಗಿದ್ದಾಳೆ. ಲಕ್ನೋದಲ್ಲಿ ಪ್ರಿಯತಮ ಸತ್ಯನಾರಾಯಣ್ ಗುಪ್ತಾ ಜೊತೆ ನೆಮ್ಮದಿಯಾಗಿ ಜೀವನ ನಡೆಸುತ್ತಿದ್ದಳು. ಗೊಂಡಾ ಜಿಲ್ಲೆಯ ವಿನಯ್ ಜೊತೆ 2017 ರಂದು ಕವಿತಾ ಮದುವೆಯಾಗಿದ್ದರು. ನಾಲ್ಕು ವರ್ಷದವರೆಗೂ ಇಬ್ಬರ ಸಂಸಾರದಲ್ಲಿ ಸಣ್ಣ ಬಿರುಕು ಇರಲಿಲ್ಲ.
ಆದ್ರೆ, 2021 ಮೇ5ರಂದು ಇದ್ದಕ್ಕಿದ್ಹಾಗೆ ಮನೆಯಿಂದ ಕವಿತಾ ನಾಪತ್ತೆಯಾಗಿದ್ದಳು. ತಕ್ಷಣ ವಿನಯ್ ಕುಮಾರ್ ಕವಿತಾ ಪೋಷಕರಿಗೆ ಪತ್ನಿ ಕಾಣಿಸ್ತಿಲ್ಲ ಎಂದು ತಿಳಿಸಿದ್ದ. ಆದ್ರೆ, ಕವಿತಾ ಪೋಷಕರು ವಿನಯ್ ವಿರುದ್ಧವೇ ಮಗಳನ್ನು ಕೊಲೆಗೈದಿರೋ ದೂರು ನೀಡಿದ್ರು. ವರದಕ್ಷಿಣೆ ಕಿರುಕುಳದ ಆರೋಪ ಮಾಡಿದ್ರು, ಈ ಹಿನ್ನೆಲೆ, ವಿನಯ್, ಆತನ ಪೋಷಕರು ಮತ್ತು ಸಹೋದರನ ಮೇಲೆ ಎಫ್ಐಆರ್ ದಾಖಲಾಗಿತ್ತು. ಆದ್ರೆ, ವಿನಯ್ ಕವಿತಾ ಪೋಷಕರ ವಿರುದ್ಧ ಪತ್ನಿ ಕಿಡ್ನಾಪ್ ಮಾಡಿ ಗೃಹಬಂಧನದಲ್ಲಿರಿಸಿರೋದಾಗಿ ದೂರು ನೀಡಲು ಮುಂದಾದ್ರು. ಆದ್ರೆ, ಪೊಲೀಸರು ದಾಖಲಿಸಿಕೊಳ್ಳಲಿಲ್ಲ. ನಂತರ ವಿನಯ್ ದೂರು ದಾಖಲಿಸಿಕೊಳ್ಳಲು ನಿರ್ದೇಶನ ಕೋರಿ ವಿನಯ್ ಕೋರ್ಟ್ ಮೆಟ್ಟಿಲೇರುತ್ತಿದ್ದಂತೆ, ಎಚ್ಚೆತ್ತುಕೊಂಡ ಪೊಲೀಸರು ತನಿಖೆ ಶುರು ಮಾಡಿದ್ದರು. ಯಾವಾಗ ಪೊಲೀಸರು ತನಿಖೆಗಿಳಿದ್ರೋ ಕವಿತಾ ನಾಪತ್ತೆ ಹಿಂದಿನ ಅಸಲಿ ಸತ್ಯ ಬಯಲಾಗಿತ್ತು.
ತನಿಖೆ ಶುರು ಮಾಡಿದ ಪೊಲೀಸರು ಫೇಸ್ ಬುಕ್‌ನಿಂದಾಗಿ ಕವಿತಾಳನ್ನ ಪತ್ತೆ ಹಚ್ಚಿದರು. ಲಕ್ನೋದಲ್ಲಿ ಸತ್ಯನಾರಾಯಣ್ ಗುಪ್ತಾ ಜೊತೆ ಕವಿತಾ ವಾಸವಾಗಿರೋದು ಪತ್ತೆಯಾಗಿತ್ತು. ಪ್ರಿಯತಮ ಸತ್ಯನಾರಾಯಣ್ ಜೊತೆ ಕವಿತಾ ಲಕ್ನೋದಲ್ಲಿ ನೆಮ್ಮದಿ ಜೀವನ ನಡೆಸುತ್ತಿದ್ದ ಬಗ್ಗೆ ಮಾಹಿತಿ ಲಭ್ಯವಾಗಿತ್ತು.
ಬಳಿಕ ಕವಿತಾಳನ್ನ ಕರೆದುಕೊಂಡು ಬಂದು ಗೊಂಡಾದ ಕೋರ್ಟ್ನಲ್ಲಿ ಪೊಲೀಸರು ಹೇಳಿಕೆ ದಾಖಲಿಸಿದ್ರು. ಸತ್ಯನಾರಾಯಣ್ ಗುಪ್ತಾ ಗೊಂಡಾದಲ್ಲಿ ಅಂಗಡಿ ನಡೆಸುತ್ತಿದ್ದ. ಕವಿತಾಗೆ ಸತ್ಯನಾರಾಯಣ್ ಗುಪ್ತಾ ಮೇಲೆ ಪ್ರೇಮಾಂಕುರವಾಗಿತ್ತು. ಬಳಿಕ ಕವಿತಾ-ಸತ್ಯನಾರಾಯಣ್ ಇಬ್ಬರೂ ಲಕ್ನೋಗೆ ಬಂದು ವಾಸವಿದ್ದರು. ಸದ್ಯ ಪತಿ ಮತ್ತು ಆತನ ಪೋಷಕರ ಮೇಲೆ ದಾಖಲಾಗಿದ್ದ ವರದಕ್ಷಿಣೆ, ಹತ್ಯೆ ಕೇಸ್ನಿಂದ ರಿಲೀಫ್ ಸಿಕ್ಕಿದೆ.
ಇತ್ತ ಪತ್ನಿಯನ್ನ ಅತ್ತೆ ಮಾವ ಕಿಡ್ನಾಪ್ ಮಾಡಿದ್ದಾರೆ ಅಂತ ದೂರು ಕೊಟ್ಟಿದ್ರೆ, ಅತ್ತ ಅತ್ತೆ ಮಾವ ಮಗಳನ್ನ ವರದಕ್ಷಿಣೆಗಾಗಿ ಅಳಿಯ ಕೊಲೆಗೈದಿದ್ದಾನೆ ಎಂದು ಪರಸ್ಪರ ದೂರು ಕೊಟ್ಕೊಂಡು ಕಿತ್ತಾಡಿದ್ದರು. ಅತ್ತ ಕವಿತಾ ಪ್ರಿಯಕರನ ಜೊತೆ ನೆಮ್ಮದಿಯಾಗಿ ಜೀವನ ನಡೆಸುತ್ತಿದ್ದಳು.