ಹೊಸದಿಲ್ಲಿ: ಸಿಂಗಾಪುರದ ಆಡಳಿತಾರೂಢ ಪಕ್ಷದ ಸದಸ್ಯ, ಮಾಜಿ ಸಚಿವ, ಭಾರತ ಮೂಲದ ಧರ್ಮನ್ ಷಣ್ಮುಗರತ್ನಂ ಸಿಂಗಾಪುರದ ಅಧ್ಯಕ್ಷೀಯ ಚುನಾವಣೆಯಲ್ಲಿ ಭರ್ಜರಿ ಗೆಲುವು ಪಡೆದಿದ್ದಾರೆ.
66 ವರ್ಷ ವಯಸ್ಸಿನ ಷಣ್ಮುಗರತ್ನಂ, ಭಾರತ ಮೂಲದ ಮೂರನೇ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಇದಕ್ಕೂ ಮುನ್ನ ತರಣ್ ಜುರಾಂಗ್ ಫುಡ್ ಸೆಂಟರ್ನಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಧರ್ಮನ್, ಸಿಂಗಾಪುರದ ಜನತೆಯ ಅಭೂತಪೂರ್ವಬೆಂಬಲದಿಂದ ಪುನೀತನಾಗಿದ್ದೇನೆ ಎಂದು ಹೇಳಿದ್ದರು.
2001ರಲ್ಲಿ ರಾಜಕೀಯಕ್ಕೆ ಸೇರಿದ್ದ ಅವರು, ಆಡಳಿತಾರೂಢ ಪೀಪಲ್ಸ್ ಆ್ಯಕ್ಷನ್ ಪಾರ್ಟಿಯಲ್ಲಿ ಎರಡು ದಶಕಗಳ ಕಾಲ ಸಾರ್ವಜನಿಕ ವಲಯದಲ್ಲಿ ಮತ್ತು ಸಚಿವ ಸ್ಥಾನದಲ್ಲಿ ಸೇವೆ ಸಲ್ಲಿಸಿದ್ದರು. ಹಾಲಿ ಅಧ್ಯಕ್ಷೆ ಮೇಡಮ್ ಹಲೀಮ್ಹ್ ಜಾಕೋಬ್ ಅವರ ಆರು ವರ್ಷಗಳ ಅಧಿಕಾರಾವಧಿ ಸೆಪ್ಟೆಂಬರ್ 13ರಂದುಮುಕ್ತಾಯವಾಗಲಿದೆ. ಇವರು ದೇಶದ 8ನೇ ಹಾಗೂ ಮೊಟ್ಟಮೊದಲ ಮಹಿಳಾ ಅಧ್ಯಕ್ಷರಾಗಿದ್ದರು.