ಬೆಂಗಳೂರು: ಮೂಡ ಹಗರಣದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಈ ಹಿನ್ನೆಲೆ ಸಿದ್ದರಾಮಯ್ಯ ವಿರುದ್ಧ ಮೈಸೂರು ಲೋಕಾಯುಕ್ತದಲ್ಲಿ ಎಫ್‌ಐಆರ್ ಆಗುವ ಸಾಧ್ಯತೆಯಿದೆ.
ಮೈಸೂರು ಲೋಕಾಯುಕ್ತಕ್ಕೆ ಡಿಜೆ ಅಬ್ರಹಾಂ ಸಿದ್ದರಾಮಯ್ಯ ಮೇಲೆ ದೂರು ನೀಡಿದರು. ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ಪತ್ರವನ್ನು ಟಿಜೆ ಅಬ್ರಹಾಂ ಮೈಸೂರು ಲೋಕಾಯುಕ್ತಕ್ಕೆ ನೀಡಲಿದ್ದಾರೆ. ಇಂದು ರಾಜಭವನದಿಂದ ಟಿಜೆ ಅಬ್ರಹಾಂ ಪ್ರಾಸಿಕ್ಯೂಷನ್ ಸಾಂಕ್ಷನ್ ಪ್ರತಿ ಪಡೆಯು ಸಾಧ್ಯತೆಯಿದ್ದು, ರಾಜಭವನದಿಂದ ಸ್ಯಾಂಕ್ಷನ್ ಪ್ರತಿ ಲೋಕಾಯುಕ್ತಕ್ಕೂ ಸಹ ಹೋಗಲಿದೆ.
ಲೋಕಾಯುಕ್ತಕ್ಕೆ ಪ್ರಾಸಿಕ್ಯೂಷನ್ ಸ್ಯಾಂಕ್ಷನ್ ಪ್ರತಿ ಸಿಕ್ಕ ಬಳಿಕ ಸಿದ್ದರಾಮಯ್ಯ ಮೇಲೆ ಎಫ್‌ಐಆರ್ ಆಗೋ ಸಾಧ್ಯತೆಯಿದೆ. ಪ್ರಿವೆನ್ಷನ್ ಆಫ್ ಕರಪ್ಷನ್ ಆ್ಯಕ್ಟ್ (ಪಿಸಿ) ಅಡಿ ಸಿದ್ದರಾಮಯ್ಯ ಮೇಲೆ ಎಫ್‌ಐಆರ್ ಸಾಧ್ಯತೆಯುದೆ. ಒಂದು ವೇಳೆ ಲೋಕಾಯುಕ್ತದಲ್ಲಿ ಎಫ್‌ಐಆರ್ ಆಗದಿದ್ರೆ ರಾಜ್ಯಪಾಲರ ಪ್ರಾಸಿಕ್ಯೂಷನ್ ಸಾಂಕ್ಷನ್ ಲೆಟರ್ ಮೇಲೆ ಕೋರ್ಟ್ ಮೂಲಕ ಎಫ್‌ಐಆರ್ ಮಾಡಿಸುವ ಸಾಧ್ಯತೆಯಿದೆ.
ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ.