ಬೆಂಗಳೂರು: ತಮ್ಮ ಜಾತಿಗಳ ರಾಜಕೀಯ ನಾಯಕರನ್ನು ಸ್ವಾಮೀಜಿಗಳು ಬೆಂಬಲಿಸುತ್ತಿರುವ ಬೆನ್ನಲ್ಲೇಅಹಿಂದ ಬಣ ಈಗ ಸಿಎಂ ಪರ ದನಿ ಎತ್ತಿದೆ.
ಸಿಎಂ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಅಹಿಂದ ಮುಖಂಡರ ಸಭೆ ನಡೆಸಿದ ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅಹಿಂದ ರಾಜ್ಯಾಧ್ಯಕ್ಷ ಪ್ರಭುಲಿಂಗ ದೊಡ್ಡಣಿ, ‘ಸಿದ್ದರಾಮಯ್ಯರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದರೆ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ. 5 ವರ್ಷ ಅವರೇ ಸಿಎಂ ಆಗಿರಬೇಕು. ಅವರಿಂದಲೇ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವುದು’ ಎಂದಿದ್ದಾರೆ.