ಬೆಂಗಳೂರು: ಮುಡಾ ಹಗರಣದಲ್ಲಿ ತಮ್ಮ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದ ಕ್ರಮವನ್ನು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠವು ವಜಾಗೊಳಿಸಿದೆ. ಇದರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಯೇ ಫಲಾನುಭವಿಯಾಗಿರುವ ಮುಡಾ ನಿವೇಶನ ಹಂಚಿಕೆ ಹಗರಣದ ತನಿಖೆಯ ಅಗತ್ಯವನ್ನು ಕರ್ನಾಟಕ ಹೈಕೋರ್ಟ್ ಒತ್ತಿಹೇಳಿದೆ. ಮುಡಾದಲ್ಲಿ ಬದಲಿ ನಿವೇಶನ ಹಂಚಿಕೆ ಪ್ರಕ್ರಿಯೆಗೆ ತಾನು ಯಾವುದೇ ಶಿಫಾರಸು ಮಾಡಿಲ್ಲ. ಅಥವಾ ದಾಖಲೆಗಳಿಗೆ ಸಹಿ ಹಾಕಿಲ್ಲ ಎಂಬ ವಾದವನ್ನು ಪುರಸ್ಕರಿಸಲು ಸಾಧ್ಯವಿಲ್ಲ. ತಮ್ಮ ಪತ್ನಿ ಜೀವನದಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಅರ್ಜಿದಾರರಿಗೆ ಅರಿವಿಲ್ಲದಿರಲು ಸಾಧ್ಯವಿಲ್ಲ. ಪ್ರಕರಣ ನಡೆದಿರುವುದು ಮಂಜಿನ ತೆರೆ ಹಿಂದೆಯಲ್ಲ. ಪರದೆಯ ಹಿಂದೆ ನಡೆದಿರುವುದಾಗಿದೆ. ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸುವ ಅಗತ್ಯವಿದೆ. ಹೀಗಾಗಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದು ಸಮಂಜಸವಾಗಿದೆ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ. ಸಿದ್ದರಾಮಯ್ಯ ಅವರು 2013ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅವರ ಪತ್ನಿ ಮುಡಾಗೆ ಮನವಿ ಸಲ್ಲಿಸಿ, 2001 ರಲ್ಲಿ ಮುಡಾ ಸ್ವಾಧೀನ ಪಡಿಸಿಕೊಂಡು ನಿವೇಶನಗಳನ್ನು ರಚನೆ ಮಾಡಿದೆ. ಹೀಗಾಗಿ 50*50 ಅನುಪಾತದಲ್ಲಿ ನಿವೇಶನಗಳನ್ನು ಪರಿಹಾರವಾಗಿ ನೀಡಬೇಕು ಎಂದು ಕೋರಿದ್ದರು. ಆದರೆ, ಮನವಿ ಸಲ್ಲಿಸಿದ್ದ ಸಂದರ್ಭದಲ್ಲಿ 60*40 ಅನುಪಾತದ ನಿವೇಶನಗಳ ಹಂಚಿಕೆಗೆ ಮಾತ್ರ ಅವಕಾಶವಿತ್ತು. ಇದಾದ ಕೆಲವು ದಿನಗಳಲ್ಲಿಯೇ 2015ರಲ್ಲಿ 50*50 ಅನುಪಾತದಲ್ಲಿ ನಿವೇಶನಗಳನ್ನು ಮಂಜೂರು ಮಾಡಲು ನಿಯಮಗಳಿಗೆ ತಿದ್ದುಪಡಿ ಮಾಡಲಾಗಿದೆ. ಕುತೂಹಲಕಾರಿ ಸಂಗತಿಯೆಂದರೆ ನಿಯಮಗಳಿಗೆ ತಿದ್ದುಪಡಿ ಮಾಡುವ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರ ಮಗ ಭಾಗಿಯಾಗಿದ್ದು, ನಿರ್ಣಯವನ್ನು ಅಂಗೀಕರಿಸಲಾಗಿದೆ ಎಂದು ಪೀಠ ಹೇಳಿದೆ. 3.56 ಲಕ್ಷದಿಂದ 56 ಕೋಟಿ: ಈ ಎಲ್ಲಾ ಪ್ರಕ್ರಿಯೆಯಲ್ಲಿ ಪರಿಹಾರ ಮೊತ್ತವನ್ನು 3.56 ಲಕ್ಷ ರೂ.ಗಳಿಂದ 56 ಕೋಟಿ ರೂ.ಗಳಿಗೆ ನಿರ್ಧರಿಸುವ ಸಂಪೂರ್ಣ ವಹಿವಾಟಿನ ಫಲಾನುಭವಿ ಅರ್ಜಿದಾರರ ಕುಟುಂಬದವರಾಗಿದ್ದಾರೆ. ಮುಖ್ಯಮಂತ್ರಿಗಳ ಕುಟುಂಬದ ಪರವಾಗಿ ನಿಯಮಗಳನ್ನು ಹೇಗೆ ಮತ್ತು ಏಕೆ ಸಡಿಲಗೊಳಿಸಲಾಗಿದೆ ಎಂಬುದರ ಕುರಿತು ತನಿಖೆ ನಡೆಸಬೇಕಾಗಿದೆ. ಪ್ರಕರಣದಲ್ಲಿ ಫಲಾನುಭವಿಯಾಗಿರುವವರು ಅರ್ಜಿದಾರ (ಸಿದ್ದರಾಮಯ್ಯ) ಅವರ ಕುಟುಂಬದ ಸದಸ್ಯರಾಗಿದ್ದು, ಪರಿಹಾರ ಮೊತ್ತವೂ ಹೆಚ್ಚಾಗಿದ್ದು, ಭಾರಿ ಲಾಭವಾಗಿದೆ. ಒಂದು ವೇಳೆ ಫಲಾನುಭವಿ ಬೇರೊಬ್ಬರಿದ್ದಿದ್ದರೆ ಅರ್ಜಿದಾರರ ಪ್ರಕರಣದಿಂದ ಮುಕ್ತಿ ನೀಡಬಹುದಾಗಿತ್ತು. 1996 ರಿಂದ 1999ರ ವರೆಗೆ ಮತ್ತು 2004 ರಿಂದ 2005 ರ ವರೆಗೆ ಸಿದ್ದರಾಮಯ್ಯ ರಾಜ್ಯದ ಉಪ ಮುಖ್ಯಮಂತ್ರಿಯಾಗಿದ್ದರು. 2013 ರಿಂದ 2018 ರ ವರೆಗೆ ಮುಖ್ಯಮಂತ್ರಿಯಾಗಿದ್ದರು. ಪ್ರಸ್ತುತ 2023 ರಿಂದ ಮತ್ತೆ ಸಿಎಂ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. 2018 ಮತ್ತು 2023 ರ ಸಂದರ್ಭದಲ್ಲಿ ಅವರ ಮಗ ಶಾಸಕರಾಗಿದ್ದರು. 1935 ರಲ್ಲಿ ಕೇವಲ 300 ರೂ. ಗಳ ಸಣ್ಣ ಬೆಲೆಯಲ್ಲಿ ಈ ಆಸ್ತಿಯನ್ನು ಖರೀದಿಸಲಾಗಿತ್ತು. 1997 ರಲ್ಲಿ ಮಾಲೀಕರ ಪರವಾಗಿ ನಿರ್ಧರಿಸಿದ ಪರಿಹಾರ ಮೊತ್ತ 3,56,000 ಆಗಿದೆ. 2021 ರಲ್ಲಿ 56 ಕೋಟಿ ರು.ಗಳಿಗೆ ಏರಿಕೆಯಾಗಿದೆ. ಒಂದು ವೇಳೆ ಸಿದ್ದರಾಮಯ್ಯ ಅವರು ಅಧಿಕಾರ ಚುಕ್ಕಾಣಿ ಹಿಡಿಯದೇ ಇದ್ದಿದ್ದರೆ ಇಷ್ಟು ದೊಡ್ಡ ಪ್ರಮಾಣದ ಲಾಭ ಹರಿದು ಬರುವುದಕ್ಕೆ ಸಾಧ್ಯವೇ ಇರಲಿಲ್ಲ. ಆದರೆ, ಸಾಮಾನ್ಯ ಮನುಷ್ಯರು ನಿಯಮಗಳನ್ನು ಬದಲಾಯಿಸಿ ಇಷ್ಟು ಶೀಘ್ರದಲ್ಲಿ ಇಷ್ಟರ ಪ್ರಮಾಣದಲ್ಲಿ ಲಾಭ ಗಳಿಸುವುದು ಸಾಧ್ಯವಾಗದ ಸಂಗತಿಯಾಗಿದೆ ಎಂದು ಪೀಠ ಹೇಳಿದೆ. ಪ್ರಕರಣದಲ್ಲಿ ಕುತೂಹಲಕರ ಸಂಗತಿಯೆಂದರೆ ಮುಖ್ಯಮಂತ್ರಿ (ಅರ್ಜಿದಾರ) ಪತ್ನಿಯ ಹೆಸರಿನಲ್ಲಿ 14 ಮಾರಾಟ ಪತ್ರಗಳನ್ನು ನೋಂದಾಯಿಸಿದ ನಂತರ ಮಾರ್ಗಸೂಚಿಗಳನ್ನು ರೂಪಿಸುವವರೆಗೂ ಪರಿಹಾರ ನಿವೇಶನಗಳ ಹಂಚಿಕೆಯನ್ನು ಸ್ಥಗಿತಗೊಳಿಸುವಂತೆ ನಗರಾಭಿವೃದ್ಧಿ ಇಲಾಖೆಯಿಂದ ಮುಡಾ ಆಯುಕ್ತರಿಗೆ ನಿರ್ದೇಶನ ನೀಡಲಾಗಿತ್ತು. ಬದಲಿ ನಿವೇಶನ ಹಂಚಿಕೆ ಮಾಡಿರುವುದು ಭೂ ಸ್ವಾಧೀನ ನಿಯಮಗಳು 2009 ಮತ್ತು 1991 ರ ಸ್ವಯಂಪ್ರೇರಿತ ಭೂಮಿ ಬಿಟ್ಟುಕೊಡುವ ನಿಯಮಗಳಿಗೆ ತದ್ವಿರುದ್ಧವಾಗಿದೆ. ಈ ಅಂಶಗಳನ್ನು ಪರಿಶೀಲಿಸಿದಲ್ಲಿ ಕೆಲವು ತಪ್ಪುಗಳಿರುವುದು ಗೊತ್ತಾಗಲಿದೆ ಎಂದು ಪೀಠ ತಿಳಿಸಿದೆ.
ಸಿದ್ದರಾಮಯ್ಯ ಪತ್ನಿಯೇ 56 ಕೋಟಿ ಫಲಾನುಭವಿ, ತನಿಖೆ ಅಗತ್ಯ : ಹೈಕೋರ್ಟ್ ತೀರ್ಪಿನ ಸಂಪೂರ್ಣ ವಿವರ ಇಲ್ಲಿದೆ
- By BC Suddi
- —
- -
WhatsApp
Telegram
Facebook
Twitter
LinkedIn
Join Our WhatsApp Channel
BC Suddi About Us
For Feedback - [email protected]
Join Our WhatsApp Channel
Related News
ಅಕ್ರಮವಾಗಿ ಅಮೇರಿಕಾದಲ್ಲಿ ನೆಲೆಸಿದ್ದ 104 ಭಾರತೀಯ ಪ್ರಜೆಗಳು ವಾಪಾಸ್
5 February 2025
ಬೈಕ್ ಆಕ್ಸಿಡೆಂಟ್ ಗಂಡ ಹೆಂಡತಿ ಸೇರಿ ಮೂವರು ಸಾವು.!
5 February 2025
SSLC ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ ಭರ್ಜರಿ ಉದ್ಯೋಗಾವಕಾಶ
5 February 2025
ಸಾರಿಗೆ ಇಲಾಖೆಯ ಆದಾಯದ ನಿರೀಕ್ಷೆಯಲ್ಲಿದ್ದ ಸರ್ಕಾರಕ್ಕೆ ಶಾಕ್
5 February 2025
ಗೃಹಲಕ್ಷ್ಮಿಯರಿಗೆ ಶುಭ ಸುದ್ದಿ: ಮಾಸಿಕ ಹಣ ಹೆಚ್ಚಳ ಸಾಧ್ಯತೆ..!
5 February 2025
ಬೆಸ್ಕಾಂನಿಂದ ಖಾಲಿಯಿರುವ ಹುದ್ದೆಗಳಿಗೆ ಅರ್ಜಿ ಆಹ್ವಾನ
5 February 2025
LATEST Post
ಸಂಸತ್ ನಲ್ಲಿ ಖರ್ಗೆ ಆಕ್ರೋಶಕ್ಕೆ ತುತ್ತಾಗಿದ್ದಾದರೂ ಯಾರು ಗೊತ್ತಾ….?
5 February 2025
18:18
ಸಂಸತ್ ನಲ್ಲಿ ಖರ್ಗೆ ಆಕ್ರೋಶಕ್ಕೆ ತುತ್ತಾಗಿದ್ದಾದರೂ ಯಾರು ಗೊತ್ತಾ….?
5 February 2025
18:18
ಬ್ಯಾಂಕ್ ಗಳಿಂದ ವಸೂಲಿಯಾದ ಸಾಲದ ವಿವರ ಕೋರಿ ಹೈಕೋರ್ಟ್ ಗೆ ವಿಜಯ್ ಮಲ್ಯ ಅರ್ಜಿ
5 February 2025
17:24
“ಕ್ಯಾಬ್ನಲ್ಲಿ ದಯವಿಟ್ಟು ರೋಮ್ಯಾನ್ಸ್ ಮಾಡ್ಬೇಡಿ ಇದು ಓಯೋ ರೂಮ್ ಅಲ್ಲ” – ಚಾಲಕನ ಮನವಿ
5 February 2025
16:51
ಅಕ್ರಮವಾಗಿ ಅಮೇರಿಕಾದಲ್ಲಿ ನೆಲೆಸಿದ್ದ 104 ಭಾರತೀಯ ಪ್ರಜೆಗಳು ವಾಪಾಸ್
5 February 2025
16:42
ಬೈಕ್ ಆಕ್ಸಿಡೆಂಟ್ ಗಂಡ ಹೆಂಡತಿ ಸೇರಿ ಮೂವರು ಸಾವು.!
5 February 2025
16:32
SSLC ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ ಭರ್ಜರಿ ಉದ್ಯೋಗಾವಕಾಶ
5 February 2025
16:04
ಸಾರಿಗೆ ಇಲಾಖೆಯ ಆದಾಯದ ನಿರೀಕ್ಷೆಯಲ್ಲಿದ್ದ ಸರ್ಕಾರಕ್ಕೆ ಶಾಕ್
5 February 2025
15:38
ಗೃಹಲಕ್ಷ್ಮಿಯರಿಗೆ ಶುಭ ಸುದ್ದಿ: ಮಾಸಿಕ ಹಣ ಹೆಚ್ಚಳ ಸಾಧ್ಯತೆ..!
5 February 2025
14:57
ಪ್ರಯಾಗ್ರಾಜ್ನಲ್ಲಿ ಪ್ರಧಾನಿ ಮೋದಿ, ಯೋಗಿ ಆದಿತ್ಯನಾಥ್ ಜೊತೆಗೆ ದೋಣಿ ವಿಹಾರ
5 February 2025
14:31
ಬೆಸ್ಕಾಂನಿಂದ ಖಾಲಿಯಿರುವ ಹುದ್ದೆಗಳಿಗೆ ಅರ್ಜಿ ಆಹ್ವಾನ
5 February 2025
14:17
ಚಳಿಗಾಲದಲ್ಲೂ ಸುಡುತ್ತಿದೆ ಬಿಸಿಲು – ರಾಜ್ಯದಲ್ಲಿ 30 ಡಿಗ್ರಿ ಸೆಲ್ಸಿಯಸ್ ಗಡಿ ದಾಟಿದ ಉಷ್ಣಾಂಶ
5 February 2025
12:49
ಸಿಐಎಸ್ಎಫ್ ನಲ್ಲಿ ಕಾನ್ಸ್ಟೇಬಲ್/ ಚಾಲಕ ಹುದ್ದೆಗಳಿಗೆ ಅರ್ಜಿ ಆಹ್ವಾನ
5 February 2025
12:10
ಮಹಾ ಕುಂಭ ಮೇಳ: ತ್ರಿವೇಣಿ ಸಂಗಮದಲ್ಲಿ ಪ್ರಧಾನಿ ಮೋದಿ ಪುಣ್ಯ ಸ್ನಾನ
5 February 2025
12:04
‘ಗೃಹಲಕ್ಷ್ಮಿ’ ಹಣ ಕೂಡಿಟ್ಟು ಸರ್ಕಾರಿ ಶಾಲೆಗೆ ದೇಣಿಗೆ ನೀಡಿದ ಆಶಾ ಕಾರ್ಯಕರ್ತೆ
5 February 2025
11:16
ರಾಜ್ಯದ 30ಕ್ಕೂ ಹೆಚ್ಚು ಕಡೆ ಐಟಿ ಅಧಿಕಾರಿಗಳ ದಾಳಿ
5 February 2025
11:14
ಮೋದಿ ಉಲ್ಲೇಖಿಸಿರುವ ಪುಸ್ತಕದಲ್ಲಿ ನೆಹರು ಬಗ್ಗೆ ಇರುವುದಾದರೂ ಏನು ಗೊತ್ತಾ…?
5 February 2025
11:02
ಮೈಸೂರು : ಗುತ್ತಿಗೆದಾರ ರಾಮಕೃಷ್ಣೇಗೌಡ ಮನೆ ಸೇರಿ ಹಲವೆಡೆ ಐಟಿ ದಾಳಿ
5 February 2025
10:58
ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಚಿಕನ್ ಪಾಕ್ಸ್ ಆತಂಕ
5 February 2025
10:30
ಮುಂದಿನ ತಿಂಗಳು ಅನುಶ್ರೀ ಮದುವೆನಾ?
5 February 2025
10:27
ಈ ಕಾರಣಕ್ಕೆ ರಥಸಪ್ತಮಿ ಪ್ರಯುಕ್ತ 108 ಸೂರ್ಯ ನಮಸ್ಕಾರ…!
5 February 2025
10:19
ಇಂದು ದೆಹಲಿಯಲ್ಲಿ 70 ಕ್ಷೇತ್ರಗಳಿಗೆ ಚುನಾವಣೆ
5 February 2025
09:52
ಸ್ವೀಡನ್ನ ಶಾಲೆಯಲ್ಲಿ ಗುಂಡಿನ ದಾಳಿ – 11 ಜನರ ಮಾರಣಹೋಮ
5 February 2025
09:51
ನಿಮ್ಮ ಮನೆಯಲ್ಲಿ ಇಂತಹ ಸಂಕೇತಗಳು ಕಂಡುಬಂದರೆ ಅದು ಮಾಟ ಮಂತ್ರದ ಪ್ರಭಾವ..!
5 February 2025
09:10
ಐಪಿಎಸ್ ಅಧಿಕಾರಿ ಪೂಜಾ ಯಾದವ್ ಕಠಿಣ ಪರಿಶ್ರಮದ ಕಥೆ
5 February 2025
09:02
ಒಣ ಕೆಮ್ಮು, ಕಫದಂತಹ ಸಮಸ್ಯೆಯಿಂದ ಕಿರಿಕಿರಿ ಅನುಭವಿಸುತ್ತಿದ್ದೀರಾ..? ಈ ಮನೆಮದ್ದುಗಳನ್ನು ಅನುಸರಿಸಿ
5 February 2025
09:01
ವಚನ-ಗುಪ್ತ ಮಂಚಣ್ಣ !
5 February 2025
07:25
ಇಂದು ಎಸ್ಎಸ್ಎಲ್ಸಿ ಇಂಗ್ಲೀಷ್ ಭಾಷೆಗೆ ಸಮಬಂಧಿಸಿದಂತೆ ಫೆ.05ರಂದು ಇಂದು ನೇರ ಫೋನ್ ಇನ್ ಕಾರ್ಯಕ್ರಮ.!
5 February 2025
07:24
ದ.ಕ. ಜಿಲ್ಲಾ ಕಾಂಗ್ರೆಸ್ ನಾಯಕ ಬೊಂಡಾಲ ಚಿತ್ತರಂಜನ್ ಶೆಟ್ಟಿ ಅವರ ಮೇಲೆ ಫೈರಿಂಗ್..!
4 February 2025
19:55
ಬ್ಯಾಂಕ್ ಸಹಾಯವಾಣಿ ಹೆಸರಿನಲ್ಲಿ ಬಂದ ಕರೆಗೆ ಒಂದನ್ನು ಒತ್ತಿ 2 ಲಕ್ಷ ಕಳೆದುಕೊಂಡ ಮಹಿಳೆ!
4 February 2025
18:43
ಮಾರ್ಚ್ 7ರಂದು ರಾಜ್ಯ ಬಜೆಟ್ ಮಂಡನೆ ಸಾಧ್ಯತೆ
4 February 2025
18:11
ನಾಳೆಯಿಂದ ಏರ್ ಶೋ ಆರಂಭ- ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟದಲ್ಲಿ ವ್ಯತ್ಯಯ
4 February 2025
18:10
ಬಾಲ್ಯವಿವಾಹಕ್ಕೆ ಕಡಿವಾಣ ಹಾಕಲು ಹೆಚ್ಚಿನ ಜಾಗೃತಿ ಅಗತ್ಯ: ಸಿವಿಲ್ ನ್ಯಾಯಾಧೀಶೆ ಎ.ಎಂ.ಚೈತ್ರ
4 February 2025
17:19
ಮಹಾಕುಂಭದಲ್ಲಿ ಕಾಲ್ತುಳಿತದ ಹಿಂದೆ ಪಿತೂರಿ..? 16 ಸಾವಿರ ಮೊಬೈಲ್ ಸಂಖ್ಯೆಗಳ ವಿವರ ಪರಿಶೀಲನೆ
4 February 2025
16:17