ನಿರ್ಮಾಪಕ ಕೆ ಮಂಜು ಅಧ್ಯಕ್ಷತೆಯ 36 ಮಂದಿ ನಿರ್ಮಾಪಕರನ್ನು ಒಳಗೊಂಡ ಸಮಿತಿಯಿಂದ ಹೊಸ ವೇತನ ಪರಿಷ್ಕರಣೆ ವರದಿಯನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘಕ್ಕೆ ಹಸ್ತಾಂತರ ಮಾಡಲಾಯಿತು. ಕೊರೋನಾ ಸೇರಿದಂತೆ ಬೇರೆ ಬೇರೆ ಕಾರಣಗಳಿಗಾಗಿ ಕಳೆದ ನಾಲ್ಕು ವರ್ಷಗಳಿಂದ ಸಿನಿಮಾ ಕಾರ್ಮಿಕರ ವೇತನ ಪರಿಷ್ಕರಣೆಗೆ ಕೊನೆಗೂ ಮುಕ್ತಿ ಸಿಕ್ಕಿದೆ. ನಿರ್ಮಾಪಕ ಕೆ ಮಂಜು ಅಧ್ಯಕ್ಷತೆಯಲ್ಲಿ 36 ಕ್ಕೂ ಹೆಚ್ಚು ನಿರ್ಮಾಪಕರನ್ನು ಒಳಗೊಂಡ ಸಿನಿಮಾ ಕಾರ್ಮಿಕರ ವೇತನ ಪರಿಷ್ಕರಣೆ ಸಮಿತಿಯಿಂದ ಹೊಸ ವೇತನ ವರದಿಯನ್ನು ರೂಪಿಸಿಲಾಗಿದ್ದು, ಸಮಿತಿ ಸೂಚಿಸಿರುವ ವರದಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘ ಸಂಪೂರ್ಣವಾಗಿ ಒಪ್ಪಿಗೆ ಸೂಚಿಸಿದೆ. ಆ ಮೂಲಕ ನಿರ್ಮಾಪಕರಿಗೆ ಹೊರೆ ಅನಿಸಿದರೂ ಚಿತ್ರೋದ್ಯಮದ ಕುಟುಂಬದ ಸದಸ್ಯರಾಗಿರುವ ಸಿನಿಮಾ ಕಾರ್ಮಿಕರಿಗೆ ಒಳ್ಳೆಯದಾಗಬೇಕು ಎನ್ನುವ ಆಲೋಚನೆಯಲ್ಲಿ ಕಾರ್ಮಿಕರ ಎಲ್ಲ ಬೇಡಿಕೆಗಳನ್ನು ಒಳಗೊಂಡಂತೆಯೇ ಹೊಸ ವೇತನ ಪರಿಷ್ಕರಣೆ ಮಾಡಲಾಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಸಿನಿಮಾ ಕಾರ್ಮಿಕರಿಗಾಗಿ ರೂಪಿಸಿರುವ ಹೊಸ ವೇತನದ ಕುರಿತು ನೀಡಿದ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್ ಎಂ ಸುರೇಶ್, ಮೂರು ತಿಂಗಳ ಕಾಲ ಹಲವು ಹಂತಗಳಲ್ಲಿ ಸಭೆಗಳನ್ನು ನಡೆಸುವ ಜತೆಗೆ ಹಲವರ ಅಭಿಪ್ರಾಯಗಳನ್ನು ಸಂಗ್ರಹಿಸಿ ನೀಡಿರುವ ವೇತನ ಪರಿಷ್ಕರಣಾ ವರದಿ ಅತ್ಯಂತ ಸಮಂಜಸವಾಗಿದೆ. ರಜೆ ಹಾಗೂ ಹಬ್ಬದ ದಿನಗಳಲ್ಲಿ ಕೆಲಸ ಮಾಡಿದರೆ ಸಂಬಳದ (ದಿನದ ವೇತನ) ಜತೆಗೆ ಹೆಚ್ಚುವರಿ ಕೆಲಸದ ಬಾಟಾ (ದಿನಗೂಲಿ), ಪ್ರಯಾಣದ ಬಾಟಾ ವೇತನದಲ್ಲಿ ಅರ್ಧ ಮಾತ್ರ ಕಡಿತ ಮಾಡಲಾಗಿದೆ. ಆದರೂ ಪೂರ್ತಿ ಬಾಟಾ ಕೋಡಲೇಬೇಕು ಎಂದು ಪಟ್ಟು ಹಿಡಿದಿರುವುವುದು ಸರಿಯಲ್ಲ. ದಿನದ ವೇತನ ಜತೆಗೆ ಪೂರ್ತಿ ಹೆಚ್ಚುವರಿ ಬಾಟಾ ಬದಲು ಅರ್ಧ ಕೂಲಿ ಕೊಡಲು ಸಮಿತಿ ಸೂಚಿಸಿದೆ. ನಿರ್ಮಾಪಕರಿಗೆ ಸ್ವಲ್ಪ ಹೊರೆಯಾದರೂ ನಿರ್ಮಾಪಕರು ಈ ಹೊಸ ವೇತನಕ್ಕೆ ಒಪ್ಪಿಕೊಂಡಿದ್ದಾರೆ. ಆದರೂ ಕೆಲವರು ದಿನದ ಬಾಟಾದಲ್ಲಿ ಕಡಿತ ಮಾಡಿದ್ದಾರೆ ಎಂದು ನೆಪ ಒಡ್ಡಿ ಹೊಸ ವೇತನಕ್ಕೆ ವಿರೋಧ ಮಾಡುತ್ತಿದ್ದಾರೆ. ಜತೆಗೆ ಶೂಟಿಂಗ್‌ನಲ್ಲಿರುವ ಸಿನಿಮಾಗಳ ಕೆಲಸಗಳನ್ನು ನಿಲ್ಲಿಸುತ್ತೇವೆ ಎಂದು ಬೆದರಿಸುತ್ತಿದ್ದಾರೆ. ಇದು ಸರಿಯಾದ ನಡೆ ಅಲ್ಲ. ಒಂದು ವೇಳೆ ಈ ಬೆದರಿಕೆ ವರ್ತನೆಗಳು ಮುಂದುವರಿದರೆ ಕಾನೂನು ವ್ಯಾಪ್ತಿಯ ಜತೆಗೆ ಚಿತ್ರರಂಗದ ನಿಯಮಗಳ ಪ್ರಕಾರ ನಾವೂ ಕೂಡ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು. ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಮಾತನಾಡಿ, ಕೆ ಮಂಜು ಅವರ ಅಧ್ಯಕ್ಷತೆಯ ವೇತನ ಪರಿಷ್ಕರಣೆ ಸಮಿತಿ ನೀಡಿರುವ ವರದಿಗೆ ನಿರ್ಮಾಪಕರ ಸಂಘದ ಒಪ್ಪಿಗೆ ಇದೆ. ಈಗಿನಿಂದಲೇ ಹೊಸ ವೇತನ ಜಾರಿಯಾಗಲಿದೆ. ಯಾರಾದರೂ ಈ ಹೊಸ ವೇತನವನ್ನು ಉಲ್ಲಂಘಿಸುವುದು ಅಥವಾ ಚಿತ್ರೀಕರಣಕ್ಕೆ ತೊಂದರೆ ಕೊಟ್ಟರೆ ನಿರ್ಮಾಪಕರು ತೆಗೆದುಕೊಳ್ಳುವ ಸ್ವತಂತ್ರ ನಿರ್ಧಾರಗಳಿಂದ ಬರಬಹುದಾದ ಪರಿಣಾಮಗಳನ್ನು ಸಿನಿಮಾ ಕಾರ್ಮಿಕರೇ ಎದುರಿಸಬೇಕಾಗುತ್ತದೆ ಎಂದು ಪರೋಕ್ಷವಾಗಿ ಎಚ್ಚರಿಸಿದರು. ಹೊಸ ವೇತನ ಪರಿಷ್ಕರಣೆ ಸಮಿತಿ ಅಧ್ಯಕ್ಷ ಕೆ ಮಂಜು ಮಾತನಾಡಿ, ಮೂರು ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆ ಮಾಡುವುದು ಚಿತ್ರೋದ್ಯಮದ ವಾಡಿಕೆ. ಕೊರೋನಾದಿಂದ ಕಳೆದ ನಾಲ್ಕು ವರ್ಷಗಳಿಂದ ಸಿನಿಮಾ ಕಾರ್ಮಿಕರಿಗೆ ವೇತನ ಪರಿಷ್ಕರಣೆ ಆಗಿಲ್ಲ. ನಿರ್ಮಾಪಕರಿಗೆ ಏನೇ ಕಷ್ಟ ಇದ್ದರೂ ಕಾರ್ಮಿಕರಿಗೆ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಮೂರು ತಿಂಗಳ ಕಾಲ ಕೆಲಸ ಮಾಡಿ 30ಕ್ಕೂ ಹೆಚ್ಚು ಸಭೆ, ಚಿತ್ರರಂಗದ ದಿಗ್ಗಜರ, ಚಿತ್ರೋದ್ಯಮದ ಸಂಘ- ಸಂಸ್ಥೆಗಳ ಅಭಿಪ್ರಾಯಗಳನ್ನು ತೆಗೆದುಕೊಂಡೇ ನಾವು ಹೊಸ ವೇತನ ಪರಿಷ್ಕರಣೆ ಮಾಡಿದ್ದೇವೆ. ರಜೆ ದಿನಗಳಲ್ಲೂ ಕೆಲಸ ಕೊಡುತ್ತಿದ್ದೇವೆ. ಸಂಬಳ ಜತೆಗೆ ಅರ್ಧ ಕೂಲಿಯೂ ಹೆಚ್ಚುವರಿಯಾಗಿ ಕೊಡುತ್ತಿದ್ದೇವೆ. ಹೀಗಾಗಿ ನಾವು ರೂಪಿಸಿರುವ ಹೊಸ ವೇತನ ಪರಿಷ್ಕರಣೆ ವರದಿ ಅತ್ಯಂತ ವೈಜ್ಞಾನಿಕವಾಗಿದೆ. ಚಿತ್ರರಂಗ ತುಂಬಾ ಕಷ್ಟದಲ್ಲಿದೆ. ನಿರ್ಮಾಪಕರಿಗೆ ಹಾಕಿದ ಹಣ ವಾಪಸ್ಸು ಬರುತ್ತದೋ ಇಲ್ಲವೋ ಎನ್ನುವ ಗ್ಯಾರಂಟಿ ಇಲ್ಲ. ಆದರೂ ನಾವು ಎಲ್ಲರಿಗೂ ಹಣ ಪಾವತಿ ಮಾಡಿಯೇ ಕೆಲಸ ಮಾಡಿಸುತ್ತಿದ್ದೇವೆ’ ಎಂದರು. ವೇತನ ಪರಿಷ್ಕರಣೆ ಸಮಿತಿ ಸದಸ್ಯ ದಯಾಳ್ ಪದ್ಮನಾಭನ್ ಮಾತನಾಡಿ, ‘ನಾಲ್ಕು ವರ್ಷಗಳಿಂದ ವೇತನ ಪರಿಷ್ಕರಣೆ ಮಾಡಿಲ್ಲ. ಆ ನಾಲ್ಕು ವರ್ಷಗಳನ್ನು ಗಮನದಲ್ಲಿಟ್ಟುಕೊಂಡು ವರ್ಷಕ್ಕೆ ಶೇ.5ರಂತೆ ನಾಲ್ಕು ವರ್ಷಗಳನ್ನು ಸೇರಿಸಿ ಶೇ.20ರಷ್ಟು ವೇತನ ಹೆಚ್ಚಳ ಮಾಡಿದ್ದೇವೆ. ಇದರಿಂದ ಚಿತ್ರರಂಗದ ಆಯಾ ವಿಭಾಗಗಳಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ಕಾರ್ಮಿಕರಿಗೆ ಶೇ.45 ರಿಂದ 70ರಷ್ಟು ವೇತನ ಹೆಚ್ಚಳವಾಗಲಿದೆ’ ಎಂದು ತಿಳಿಸಿದರು.
ಸಿನಿಮಾಕಾರ್ಮಿಕರಿಗಾಗಿ ಹೊಸ ವೇತನ ಜಾರಿ – ಸಿನಿ ಕಾರ್ಮಿಕರ ಪರ ನಿಂತ ಚಿತ್ರರಂಗ
- By BC Suddi
- —
- -
WhatsApp
Telegram
Facebook
Twitter
LinkedIn
Join Our WhatsApp Channel
BC Suddi About Us
For Feedback - [email protected]
Join Our WhatsApp Channel
Related News
ಅಕ್ರಮವಾಗಿ ಅಮೇರಿಕಾದಲ್ಲಿ ನೆಲೆಸಿದ್ದ 104 ಭಾರತೀಯ ಪ್ರಜೆಗಳು ವಾಪಾಸ್
5 February 2025
ಬೈಕ್ ಆಕ್ಸಿಡೆಂಟ್ ಗಂಡ ಹೆಂಡತಿ ಸೇರಿ ಮೂವರು ಸಾವು.!
5 February 2025
SSLC ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ ಭರ್ಜರಿ ಉದ್ಯೋಗಾವಕಾಶ
5 February 2025
ಸಾರಿಗೆ ಇಲಾಖೆಯ ಆದಾಯದ ನಿರೀಕ್ಷೆಯಲ್ಲಿದ್ದ ಸರ್ಕಾರಕ್ಕೆ ಶಾಕ್
5 February 2025
ಗೃಹಲಕ್ಷ್ಮಿಯರಿಗೆ ಶುಭ ಸುದ್ದಿ: ಮಾಸಿಕ ಹಣ ಹೆಚ್ಚಳ ಸಾಧ್ಯತೆ..!
5 February 2025
ಬೆಸ್ಕಾಂನಿಂದ ಖಾಲಿಯಿರುವ ಹುದ್ದೆಗಳಿಗೆ ಅರ್ಜಿ ಆಹ್ವಾನ
5 February 2025
LATEST Post
ಸಂಸತ್ ನಲ್ಲಿ ಖರ್ಗೆ ಆಕ್ರೋಶಕ್ಕೆ ತುತ್ತಾಗಿದ್ದಾದರೂ ಯಾರು ಗೊತ್ತಾ….?
5 February 2025
18:18
ಸಂಸತ್ ನಲ್ಲಿ ಖರ್ಗೆ ಆಕ್ರೋಶಕ್ಕೆ ತುತ್ತಾಗಿದ್ದಾದರೂ ಯಾರು ಗೊತ್ತಾ….?
5 February 2025
18:18
ಬ್ಯಾಂಕ್ ಗಳಿಂದ ವಸೂಲಿಯಾದ ಸಾಲದ ವಿವರ ಕೋರಿ ಹೈಕೋರ್ಟ್ ಗೆ ವಿಜಯ್ ಮಲ್ಯ ಅರ್ಜಿ
5 February 2025
17:24
“ಕ್ಯಾಬ್ನಲ್ಲಿ ದಯವಿಟ್ಟು ರೋಮ್ಯಾನ್ಸ್ ಮಾಡ್ಬೇಡಿ ಇದು ಓಯೋ ರೂಮ್ ಅಲ್ಲ” – ಚಾಲಕನ ಮನವಿ
5 February 2025
16:51
ಅಕ್ರಮವಾಗಿ ಅಮೇರಿಕಾದಲ್ಲಿ ನೆಲೆಸಿದ್ದ 104 ಭಾರತೀಯ ಪ್ರಜೆಗಳು ವಾಪಾಸ್
5 February 2025
16:42
ಬೈಕ್ ಆಕ್ಸಿಡೆಂಟ್ ಗಂಡ ಹೆಂಡತಿ ಸೇರಿ ಮೂವರು ಸಾವು.!
5 February 2025
16:32
SSLC ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ ಭರ್ಜರಿ ಉದ್ಯೋಗಾವಕಾಶ
5 February 2025
16:04
ಸಾರಿಗೆ ಇಲಾಖೆಯ ಆದಾಯದ ನಿರೀಕ್ಷೆಯಲ್ಲಿದ್ದ ಸರ್ಕಾರಕ್ಕೆ ಶಾಕ್
5 February 2025
15:38
ಗೃಹಲಕ್ಷ್ಮಿಯರಿಗೆ ಶುಭ ಸುದ್ದಿ: ಮಾಸಿಕ ಹಣ ಹೆಚ್ಚಳ ಸಾಧ್ಯತೆ..!
5 February 2025
14:57
ಪ್ರಯಾಗ್ರಾಜ್ನಲ್ಲಿ ಪ್ರಧಾನಿ ಮೋದಿ, ಯೋಗಿ ಆದಿತ್ಯನಾಥ್ ಜೊತೆಗೆ ದೋಣಿ ವಿಹಾರ
5 February 2025
14:31
ಬೆಸ್ಕಾಂನಿಂದ ಖಾಲಿಯಿರುವ ಹುದ್ದೆಗಳಿಗೆ ಅರ್ಜಿ ಆಹ್ವಾನ
5 February 2025
14:17
ಚಳಿಗಾಲದಲ್ಲೂ ಸುಡುತ್ತಿದೆ ಬಿಸಿಲು – ರಾಜ್ಯದಲ್ಲಿ 30 ಡಿಗ್ರಿ ಸೆಲ್ಸಿಯಸ್ ಗಡಿ ದಾಟಿದ ಉಷ್ಣಾಂಶ
5 February 2025
12:49
ಸಿಐಎಸ್ಎಫ್ ನಲ್ಲಿ ಕಾನ್ಸ್ಟೇಬಲ್/ ಚಾಲಕ ಹುದ್ದೆಗಳಿಗೆ ಅರ್ಜಿ ಆಹ್ವಾನ
5 February 2025
12:10
ಮಹಾ ಕುಂಭ ಮೇಳ: ತ್ರಿವೇಣಿ ಸಂಗಮದಲ್ಲಿ ಪ್ರಧಾನಿ ಮೋದಿ ಪುಣ್ಯ ಸ್ನಾನ
5 February 2025
12:04
‘ಗೃಹಲಕ್ಷ್ಮಿ’ ಹಣ ಕೂಡಿಟ್ಟು ಸರ್ಕಾರಿ ಶಾಲೆಗೆ ದೇಣಿಗೆ ನೀಡಿದ ಆಶಾ ಕಾರ್ಯಕರ್ತೆ
5 February 2025
11:16
ರಾಜ್ಯದ 30ಕ್ಕೂ ಹೆಚ್ಚು ಕಡೆ ಐಟಿ ಅಧಿಕಾರಿಗಳ ದಾಳಿ
5 February 2025
11:14
ಮೋದಿ ಉಲ್ಲೇಖಿಸಿರುವ ಪುಸ್ತಕದಲ್ಲಿ ನೆಹರು ಬಗ್ಗೆ ಇರುವುದಾದರೂ ಏನು ಗೊತ್ತಾ…?
5 February 2025
11:02
ಮೈಸೂರು : ಗುತ್ತಿಗೆದಾರ ರಾಮಕೃಷ್ಣೇಗೌಡ ಮನೆ ಸೇರಿ ಹಲವೆಡೆ ಐಟಿ ದಾಳಿ
5 February 2025
10:58
ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಚಿಕನ್ ಪಾಕ್ಸ್ ಆತಂಕ
5 February 2025
10:30
ಮುಂದಿನ ತಿಂಗಳು ಅನುಶ್ರೀ ಮದುವೆನಾ?
5 February 2025
10:27
ಈ ಕಾರಣಕ್ಕೆ ರಥಸಪ್ತಮಿ ಪ್ರಯುಕ್ತ 108 ಸೂರ್ಯ ನಮಸ್ಕಾರ…!
5 February 2025
10:19
ಇಂದು ದೆಹಲಿಯಲ್ಲಿ 70 ಕ್ಷೇತ್ರಗಳಿಗೆ ಚುನಾವಣೆ
5 February 2025
09:52
ಸ್ವೀಡನ್ನ ಶಾಲೆಯಲ್ಲಿ ಗುಂಡಿನ ದಾಳಿ – 11 ಜನರ ಮಾರಣಹೋಮ
5 February 2025
09:51
ನಿಮ್ಮ ಮನೆಯಲ್ಲಿ ಇಂತಹ ಸಂಕೇತಗಳು ಕಂಡುಬಂದರೆ ಅದು ಮಾಟ ಮಂತ್ರದ ಪ್ರಭಾವ..!
5 February 2025
09:10
ಐಪಿಎಸ್ ಅಧಿಕಾರಿ ಪೂಜಾ ಯಾದವ್ ಕಠಿಣ ಪರಿಶ್ರಮದ ಕಥೆ
5 February 2025
09:02
ಒಣ ಕೆಮ್ಮು, ಕಫದಂತಹ ಸಮಸ್ಯೆಯಿಂದ ಕಿರಿಕಿರಿ ಅನುಭವಿಸುತ್ತಿದ್ದೀರಾ..? ಈ ಮನೆಮದ್ದುಗಳನ್ನು ಅನುಸರಿಸಿ
5 February 2025
09:01
ವಚನ-ಗುಪ್ತ ಮಂಚಣ್ಣ !
5 February 2025
07:25
ಇಂದು ಎಸ್ಎಸ್ಎಲ್ಸಿ ಇಂಗ್ಲೀಷ್ ಭಾಷೆಗೆ ಸಮಬಂಧಿಸಿದಂತೆ ಫೆ.05ರಂದು ಇಂದು ನೇರ ಫೋನ್ ಇನ್ ಕಾರ್ಯಕ್ರಮ.!
5 February 2025
07:24
ದ.ಕ. ಜಿಲ್ಲಾ ಕಾಂಗ್ರೆಸ್ ನಾಯಕ ಬೊಂಡಾಲ ಚಿತ್ತರಂಜನ್ ಶೆಟ್ಟಿ ಅವರ ಮೇಲೆ ಫೈರಿಂಗ್..!
4 February 2025
19:55
ಬ್ಯಾಂಕ್ ಸಹಾಯವಾಣಿ ಹೆಸರಿನಲ್ಲಿ ಬಂದ ಕರೆಗೆ ಒಂದನ್ನು ಒತ್ತಿ 2 ಲಕ್ಷ ಕಳೆದುಕೊಂಡ ಮಹಿಳೆ!
4 February 2025
18:43
ಮಾರ್ಚ್ 7ರಂದು ರಾಜ್ಯ ಬಜೆಟ್ ಮಂಡನೆ ಸಾಧ್ಯತೆ
4 February 2025
18:11
ನಾಳೆಯಿಂದ ಏರ್ ಶೋ ಆರಂಭ- ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟದಲ್ಲಿ ವ್ಯತ್ಯಯ
4 February 2025
18:10
ಬಾಲ್ಯವಿವಾಹಕ್ಕೆ ಕಡಿವಾಣ ಹಾಕಲು ಹೆಚ್ಚಿನ ಜಾಗೃತಿ ಅಗತ್ಯ: ಸಿವಿಲ್ ನ್ಯಾಯಾಧೀಶೆ ಎ.ಎಂ.ಚೈತ್ರ
4 February 2025
17:19
ಮಹಾಕುಂಭದಲ್ಲಿ ಕಾಲ್ತುಳಿತದ ಹಿಂದೆ ಪಿತೂರಿ..? 16 ಸಾವಿರ ಮೊಬೈಲ್ ಸಂಖ್ಯೆಗಳ ವಿವರ ಪರಿಶೀಲನೆ
4 February 2025
16:17