ಬೆಂಗಳೂರು: ಸಿನಿಮಾ ನೋಡಿ ಮಾಲೀಕನಿಗೆ ಉಂಡೆ ನಾಮ ತಿಕ್ಕಲು ಹೋದ ಕೆಲಸಗಾರರು ಪೊಲೀಸ್ರ ಬಲೆಗೆ ಬಿದ್ದಿದ್ದಾರೆ. ಕೆಲಸಗಾರರನ್ನ ಮನೆ ಮನೆ ಮಗನಂತೆ ನೋಡಿಕೊಂಡಿದ್ರು,ಆದರೆ ಕೆಲಸ ಕೊಟ್ಟ ಮಾಲೀಕನ ಬೆನ್ನಿಗೆ ಚೂರಿ ಹಾಕಲು ಸ್ಕೇಚ್ ಹಾಕಿದ್ದ ಕೆಲಸಗಾರರು ಪೊಲೀಸ್ರ ಬಲೆಗೆ ಬಿದ್ದಿದ್ದಾರೆ. ಮಾಲೀಕನಿಂದ ಹಣ ಕೀಳಲು ಕೆಲಸಗಾರನ ಮಾಸ್ಟರ್ ಪ್ಲಾನ್ ಮಾಡಿ ಕಿಡ್ನಾಪ್ ಕಥೆ ಕಟ್ಟಿ ಹಣ ಲಪಟಾಯಿಸಲು ಸ್ಕೇಚ್ ಹಾಕಿದ್ದ. ಸ್ನೇಹಿತರ ಜೊತೆ ಸೇರಿ ಕಿಡ್ನಾಪ್ ಕಥೆ ಕಟ್ಟಿ ಪೊಲೀಸರಿಗೆ ಲಾಕ್ ಆಗಿದ್ದು, ಮೊಹಮ್ಮದ್ ಆಸೀಫ್ ಹಬೀಬ್ ಎಂಬುವರ ಫ್ಯಾಕ್ಟರಿಯಲ್ಲಿ ನೂರುಲ್ಲಾ ಕೆಲಸ ಮಾಡುತ್ತಿದ್ದ. ಮಾಲೀಕನ ಬಳಿ ಹಣ ಇದೆ ಅಂತಾ ನೂರುಲ್ಲಾ ಪ್ಲಾನ್ ಮಾಡಿದ್ದ. ತನ್ನ ಸ್ನೇಹಿತರಾದ ಅಬೂಬಕರ್ ಹಾಗು ಆಲಿ ರೇಝಾ ಎಂಬುವರ ಜೊತೆ ಕಿಡ್ನಾಪ್ ಪ್ಲಾನ್ ಮಾಡಿ, ಕ್ಯಾಬ್ ಮಾಡಿ ಕಿಡ್ನಾಪ್ ಮಾಡಿದ್ದಾರೆ ಅಂತಾ ಮಂಡ್ಯಗೆ ಹೋಗಿದ್ದ ಆರೋಪಿಗಳು ನಂತರ ಮಾಲೀಕ ಹಬೀಬ್ ಗೆ ಕರೆ ಮಾಡಿ ಕಿಡ್ನಾಪ್ ಮಾಡಿದ್ದಾರೆ ಅಂತ ನೂರುಲ್ಲ ಮಾಲೀಕರಿಗೆ ಕರೆ ಮಾಡಿದ್ರು. ಎರಡು ಲಕ್ಷ ಹಣಕ್ಕೆ ಡಿಮಾಂಡ್ ಮಾಡುತ್ತಿದ್ದಾರೆ ಎಂದು ಕರೆ ಮಾಡಿದ್ದಾರೆ. ಮನೆ ಮಗನಂತಿದ್ದವನಿಗೆ ತೊಂದರೆಯಾಗಿದೆ ಎಂದು ಪೊಲೀಸರಿಗೆ ಮನೆ ಮಾಲೀಕ ಮಾಹಿತಿ ನೀಡಿದ್ರು. ಜೊತೆಗೆ ಎರಡು ಲಕ್ಷ ಹಣ ಕೊಡಲು ಮಾಲಿಕ ಹಬೀಬ್ ಮುಂದಾಗಿದ್ರು. ಈ ವೇಳೆ ನೂರುಲ್ಲ ತನ್ನ ಅಕೌಂಟ್ ನಂಬರ್ ಗೆ ಹಣಹಾಕಲು ಹೇಳಿದ್ದಾನೆ. ಇದರಿಂದ ಪೊಲೀಸರು ಹಾಗೂ ಹಬೀಬ್ ಕೊಂಚ ಅನುಮಾನಗೊಂಡಿದ್ದಾರೆ. ನಂತರ ಮೊಬೈಲ್ ಟ್ರಾಕ್ ವೇಳೆ ಆರೋಪಿಗಳು ಮಂಡ್ಯದಲ್ಲಿರುವುದು ಪತ್ತೆಯಾಗಿದೆ. ಮಂಡ್ಯ ಪೊಲೀಸರ ಮೂಲಕ ಮೂವರನ್ನ ಪೊಲೀಸ್ರು ವಶಕ್ಕೆ ಪಡೆದಿದ್ದ ವಿಚಾರಣೆ ನಡೆಸಿದಾಗ ಹಣ ಪಡೆಯಲು ಮಾಡಿದ ಖತರ್ನಾಕ್ ಪ್ಲಾನ್ ಬಯಲಾಗಿದೆ.ಹಣ ಪಡೆದು ಬಿಹಾರಕ್ಕೆ ಎಸ್ಕೇಪ್ ಆಗಲು ಸಂಚು ರೂಪಿಸಿದ್ದ ಆರೋಪಿಗಳನ್ನ ಸದ್ಯ ಆರ್ ಟಿ ನಗರ ಪೊಲೀಸ್ರು ಬಂಧಿಸಿದ್ದಾರೆ.