ಸಿನಿಮಾ ಪ್ರೇಮಿಗಳಿಗೆ ಇದೀಗ ಗುಡ್ ನ್ಯೂಸ್ ಸಿಕ್ಕಿದೆ. ಇದೇ ಸೆ.20ರಂದು ರಾಷ್ಟ್ರೀಯ ಸಿನಿಮಾ ದಿನವಾಗಿದೆ. ಈ ದಿನದಂದು ಸಿನಿಮಾ ನೋಡುವ ಪ್ರೇಕ್ಷಕರಿಗೆ ಕೈಗೆಟುಕುವ ಬೆಲೆಯಲ್ಲಿ ವಿಶೇಷ ರಿಯಾಯಿತಿ ನೀಡಲಾಗುದೆ.
ರಾಷ್ಟ್ರ ವ್ಯಾಪ್ತಿ ಚಿತ್ರಮಂದಿರಗಳಲ್ಲಿ 99 ರೂ.ಗೆ ಟಿಕೆಟ್ ಬೆಲೆ ಇಳಿಕೆ ಮಾಡಲು ‘ಮಲ್ಟಿಫ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ’ (MAI) ನಿರ್ಧರಿಸಿದೆ. ಸೆ.20ರಂದು ಪಿವಿಆರ್, ಸಿನಿಪೊಲೀಸ್, ಮಿರಜ್, ಐನಾಕ್ಸ್, ಸಿಟಿಪ್ರೈಡ್ ಸೇರಿದಂತೆ 4000ಕ್ಕೂ ಹೆಚ್ಚು ಚಿತ್ರಮಂದಿರಗಳು ರಾಷ್ಟ್ರೀಯ ಸಿನಿಮಾ ದಿನವನ್ನು (National Cinema Day 2024) ಆಚರಿಸಲಿದ್ದಾರೆ. ಈ ದಿನದಂದು ದೇಶಾದ್ಯಂತ ಚಲನಚಿತ್ರ ಪ್ರೇಕ್ಷಕರು ಕೇವಲ 99 ರೂ.ಗೆ ಸಿನಿಮಾ ವೀಕ್ಷಿಸುವ ಅವಕಾಶ ನೀಡಲಾಗುತ್ತಿದೆ.
ಅದಷ್ಟೇ ಅಲ್ಲ, ಚಿತ್ರಮಂದಿರದಲ್ಲಿನ ಫುಡ್ ಐಟಂಗಳ ಮೇಲೆ ಒಂದೊಳ್ಳೆಯ ಆಫರ್‌ಗಳನ್ನು ನಿಗದಿ ಮಾಡಿದ್ದಾರೆ. ಇದರ ಕುರಿತು ಚಿತ್ರಮಂದಿರಗಳ ವೈಬ್‌ಸೈಟ್‌ನಲ್ಲಿ ಸಂಪೂರ್ಣ ವಿವರ ಸಿಗಲಿದೆ. ಆನ್‌ಲೈನ್‌ನಲ್ಲಿ ಸಿನಿಮಾ ಟಿಕೆಟ್ ಬುಕ್ಕಿಂಗ್ ಅವಕಾಶ ಕೂಡ ಇದೆ. ಸದ್ಯ ಯುಧ್ರ, ಸ್ತ್ರೀ 2, ಕೃಷ್ಣಂ ಪ್ರಣಯ ಸಖಿ, ಇಬ್ಬನಿ ತಬ್ಬಿದ ಇಳೆಯಲಿ ಸೇರಿದಂತೆ ಹಲವು ಸಿನಿಮಾಗಳು ಥಿಯೇಟರ್‌ನಲ್ಲಿ ಪ್ರಸ್ತುತ ಸದ್ದು ಮಾಡುತ್ತಿವೆ.
ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ