ದೆಹಲಿ: ಚಲನಚಿತ್ರಗಳಿಗೆ ಮಹಿಳೆಯರು ಸೂಕ್ತವಲ್ಲ ಎಂಬ ಅಭಿಪ್ರಾಯ ಅಂದು ಸಮಾಜದಲ್ಲಿತ್ತು. ಹಾಗಾಗಿ ಒಂದು ಕಾಲದಲ್ಲಿ ಭಾರತೀಯ ಚಲನಚಿತ್ರಗಳಲ್ಲಿ ಪುರುಷರೇ ಮಹಿಳಾ ಪಾತ್ರಗಳನ್ನು ನಿರ್ವಹಿಸುತ್ತಿದ್ದರು.
ದಿಗ್ಗಜ ನಿರ್ದೇಶಕ ದಾದಾ ಸಾಹೇಬ್ ಫಾಲ್ಕೆ ‘ಭಸ್ಮಾಸುರ ಮೋಹಿನಿ’ ಚಿತ್ರದಲ್ಲಿ ದುರ್ಗಾಬಾಯಿ ಕಾಮತ್ ಅವರನ್ನು ಪಾರ್ವತಿ ದೇವಿಯಾಗಿ ಹಾಗೂ ಅವರ ಮಗಳನ್ನು ಕಮಲಾಬಾಯಿ ಮೋಹಿನಿಯನ್ನಾಗಿ ಪರಿಚಯಿಸಿದರು. ಇದರೊಂದಿಗೆ ತಾಯಿ ದೇಶದ ಮೊದಲ ನಟಿ ಎನಿಸಿಕೊಂಡರೆ, ಅವರ ಮಗಳು ಮೊದಲ ಬಾಲ ನಟಿ ಎನಿಸಿಕೊಂಡಳು.