ನವದೆಹಲಿ: ದೆಹಲಿಯ ಆಮ್ ಆದ್ಮಿ ಸರಕಾರದ ಮಾಜಿ ಸಚಿವ ಮನೀಶ್ ಸಿಸೋಡಿಯಾ ಅವರಿಗೆ ಮತ್ತೆ ಜೈಲೇ ಗತಿಯಾಗಿದೆ. ಜಾಮೀನು ನೀಡುವಂತೆ ಕೋರಿ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಸುಪ್ರೀಮ್ ಕೋರ್ಟ್ ಅಕ್ಟೋಬರ್ 12ಕ್ಕೆ ಮುಂದೂಡಿದೆ. ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಇಡಿ ಮೇಲೆ ಹಲವು ಪ್ರಶ್ನೆಗಳನ್ನ ಕೇಳಿದೆ. ಸರ್ಕಾರಿ ಸಾಕ್ಷಿಯ ಹೇಳಿಕೆಯನ್ನ ನಾವು ಹೇಗೆ ನಂಬಬೇಕು ಎಂದು ನ್ಯಾಯಮೂರ್ತಿ ಸಂಜೀವ್ ಖನ್ನಾ ಪ್ರಶ್ನೆ ಮಾಡಿದ್ದಾರೆ. ಸಿಸೋಡಿಯಾ ಪಡೆದ ಲಂಚದ ಬಗ್ಗೆ ಸರ್ಕಾರದ ಸಾಕ್ಷಿಯ ಚರ್ಚೆಯನ್ನ ತನಿಖಾ ಸಂಸ್ಥೆ ನೋಡಿದೆಯೇ? ಈ ಹೇಳಿಕೆ ಕಾನೂನಿನಲ್ಲಿ ಸ್ವೀಕಾರಾರ್ಹವೇ.? ಎಂದು ನ್ಯಾಯಪೀಠ ಕೇಳಿದೆ.